ಕೋಲ್ಕತಾ, ಮೇ 21: ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಪ್ಲೇ ಆಫ್ ರೇಸ್(IPL playoffs scenario)ನಲ್ಲಿ ಉಳಿದುಕೊಂಡಿತು. ಮೊದಲ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸದೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ನಂತರ, ಮೂರು ಬಾರಿಯ ಚಾಂಪಿಯನ್‌ಗಳು ಈಗ ತಮ್ಮ ಕೊನೆಯ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಬೀಗಿದ್ದಾರೆ.
ಮುಂಬೈ ವಿರುದ್ಧದ ಗೆಲುವಿನೊಂದಿಗೆ, ಕೆಕೆಆರ್ ತಂಡವು +0.011 ನಿವ್ವಳ ರನ್ ರೇಟ್‌ನೊಂದಿಗೆ 13 ಅಂಕಗಳೊಂದಿಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ನೈಟ್ ರೈಡರ್ಸ್ ತಂಡವು ಅಗ್ರ ನಾಲ್ಕು ಸ್ಥಾನಗಳಿಗೆ ದೃಢವಾಗಿ ಪೈಪೋಟಿಯಲ್ಲಿದೆ. ರಾಜಸ್ಥಾನ ರಾಯಲ್ಸ್, ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಅವರು ಅಂತಿಮ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ.
MI vs KKR: ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಪ್ಲೇಆಫ್ಸ್ ಆಸೆ ಜೀವಂತ!
ಕೆಕೆಆರ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 24 ರ ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ನೈಟ್ ರೈಡರ್ಸ್ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯುವ ವಾಸ್ತವಿಕ ಅವಕಾಶವನ್ನು ಹೊಂದಿದ್ದರೂ, ಅವರ ಭವಿಷ್ಯವು ಸಂಪೂರ್ಣವಾಗಿ ಅವರ ಕೈಯಲ್ಲಿಲ್ಲ.
ತಂಡದ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ
ಸನ್ನಿವೇಶ 1: ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಬೇಕು
ಕೊಲ್ಕತ್ತಾ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿದರೆ, ಅವರು 15 ಅಂಕ ಗಳಿಸುತ್ತಾರೆ. ಆದರೆ ಅರ್ಹತೆ ಇನ್ನೂ ಖಚಿತವಾಗುವುದಿಲ್ಲ. ರಾಜಸ್ಥಾನ ರಾಯಲ್ಸ್ ತಂಡವು 16 ಅಂಕಗಳೊಂದಿಗೆ ಮುನ್ನಡೆಯಬಹುದು, ಪಂಜಾಬ್ ಕಿಂಗ್ಸ್ ಕೂಡ 15 ಅಂಕಗಳನ್ನು ಗಳಿಸಬಹುದು ಮತ್ತು ನಿವ್ವಳ ರನ್ ರೇಟ್ ದರದಲ್ಲಿ ಕೋಲ್ಕತ್ತಾವನ್ನು ಹಿಂದಿಕ್ಕಬಹುದು.
ಸನ್ನಿವೇಶ 2: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೆ
ಕೋಲ್ಕತ್ತಾ ತಂಡ ಡೆಲ್ಲಿ ವಿರುದ್ಧ ಸೋತರೆ, ಅವರು 13 ಅಂಕಗಳೊಂದಿಗೆ ಸ್ಪರ್ಧೆಯಿಂದ ಹೊರಗುಳಿಯುತ್ತಾರೆ.
ಸನ್ನಿವೇಶ 3: ಯಾವುದೇ ಫಲಿತಾಂಶವಿಲ್ಲ
ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಅವರ ಅಂತಿಮ ಪಂದ್ಯ ರದ್ದಾದರೆ, ಕೋಲ್ಕತ್ತಾ 14 ಅಂಕಗಳೊಂದಿಗೆ ಕೊನೆಗೊಳ್ಳುತ್ತದೆ ಮತ್ತು ನಂತರ ಸ್ಪರ್ಧೆಯಲ್ಲಿ ಉಳಿಯಲು ಇತರ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ. ಕೆಕೆಆರ್ ಅಂತಿಮ ಪಂದ್ಯ ಗೆದ್ದರೆ, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಂದಿನ ಪಂದ್ಯ ಸೋಲಬೇಕು.