ಬೆಂಗಳೂರು, ಮಾ.22: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಕ್ರಿಕೆಟ್ ಟೂರ್ನಿಯ ಪಂದ್ಯಾವಳಿ ವೀಕ್ಷಣೆಗೆ ಟಿಕೆಟ್ ಖರೀದಿಸುವ(IPL ticket scam alert) ಸಂದರ್ಭದಲ್ಲಿ ನಕಲಿ ಲಿಂಕ್‌ಗಳ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಎಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
‘ಐಪಿಎಲ್ ಟೂರ್ನಿ ಮಾ.28ರಿಂದ ಆರಂಭ ಆಗಲಿದೆ. ಈ ಸಂದರ್ಭದಲ್ಲಿ ಟಿಕೆಟ್ ಖರೀದಿಸುವಾಗ ವಂಚನೆಗಳೂ ನಡೆಯುವ ಸಾಧ್ಯತೆಯಿದೆ. ನಕಲಿ ಲಿಂಕ್‌ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ. ಐಪಿಎಲ್ ಟಿಕೆಟ್‌ಗಳನ್ನು ಕೇವಲ ಅಧಿಕೃತ ಸ್ಥಳ ಅಥವಾ ವೆಬ್‌ಸೈಟ್ ಮೂಲಕವೇ ಪಡೆದುಕೊಳ್ಳಿ. ಕಾಳ ಸಂತೆಯಲ್ಲಿ ಅಥವಾ, ಅಧಿಕೃತವಲ್ಲ ವೆಬ್‌ಸೈಟ್ ಮತ್ತು ಲಿಂಕ್‌ಗಳ ಮೂಲಕ ಟಿಕೆಟ್ ಆಮಿಷ ಬಂದರೆ ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಿ, ದೂರು ಸಲ್ಲಿಸಿ’ ಎಂದು ‘ಎಕ್ಸ್’ ಖಾತೆಯಲ್ಲಿ ಈಶಾನ್ಯ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಆರ್‌ಸಿಬಿ ಪಂದ್ಯಗಳಿಗೆ ಟಿಕೆಟ್ ಖರೀದಿಸುವುದು ಹೇಗೆ?
ಆರ್‌ಸಿಬಿ ಪಂದ್ಯಗಳ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಬುಕ್‌ಮೈಶೋ, ಡಿಸ್ಟ್ರಿಕ್ಟ್ ಆಪ್ ಹಾಗೂ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ಇಲ್ಲಿ ನೀವು ಯಾವ ಸೀಟ್, ಎಷ್ಟು ಮೊತ್ತದ ಟಿಕೆಟ್ ಎಂದು ನೋಡಿದ ಬಳಿಕ ಖರೀದಿಸಬಹುದು ಹಾಗೂ ಯುಪಿಐ, ಕಾರ್ಡ್‌ಗಳು ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಟಿಕೆಟ್ ಹಣವನ್ನು ಪಾವತಿಸಬಹುದು. ನೀವು ಖರೀದಿಸಿದ ಬಳಿಕ ಇಮೇಲ್ ಅಥವಾ ಎಸ್‌ಎಂಎಸ್ ಮೂಲಕ ಟಿಕೆಟ್ ನಿಮ್ಮ ಕೈ ಸೇರಲಿದೆ. ಆರ್‌ಸಿಬಿ ಟಿಕೆಟ್ ಇದ್ದರೆ, ಪಂದ್ಯದ ದಿನ ಮೆಟ್ರೋದಲ್ಲಿ ನೀವು ಉಚಿತವಾಗಿ ಪ್ರಯಾಣಿಸಬಹುದು ಎಂದು ಆರ್‌ಸಿಬಿ ತಿಳಿಸಿದೆ.
ಆನ್‌ಲೈನ ಜೊತೆಗೆ ಆಫ್ ಲೈನ್‌ನಲ್ಲಿಯೂ ಆರ್‌ಸಿಬಿ ಪಂದ್ಯಗಳ ಟಿಕೆಟ್ ಅನ್ನು ಖರೀದಿಸಬಹುದು. ಪಂದ್ಯಕ್ಕೂ ಒಂದು ದಿನ, ಎರಡು ದಿನಗಳ ಮುನ್ನ ಸ್ಟೇಡಿಯಂನ ಕೌಂಟರ್ ಬಳಿ ನಿಂತು ಟಿಕೆಟ್ ಪಡೆಯಬಹುದು. ಇಲ್ಲಿ ನೀವು ಯುಪಿಐ ಅಥವಾ ಕ್ಯಾಷ್ ನೀಡಿ ಟಿಕೆಟ್ ಖರೀದಿಸಬಹುದು.
ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. 2008ರ ಚೊಚ್ಚಲ ಆವೃತ್ತಿಯ ಆರಂಭಿಕ ಪಂದ್ಯ ಬೆಂಗಳೂರಿನಲ್ಲೇ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿ ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಲ್ಲಿ 2014, 2016ರಲ್ಲಿ ಫೈನಲ್ ಪಂದ್ಯ ನಡೆದಿವೆ.
ಆರ್‌ಸಿಬಿ vs ಹೈದರಾಬಾದ್ ಐಪಿಎಲ್ ಉದ್ಘಾಟನ ಪಂದ್ಯಕ್ಕೆ ಮಳೆ ಭೀತಿ
ಆರ್‌ಸಿಬಿ ವೇಳಾಪಟ್ಟಿ
ಮಾ. 28 ಆರ್‌ಸಿಬಿ-ಸನ್‌ರೈಸರ್ಸ್, ಬೆಂಗಳೂರು ಸಂಜೆ 7.30
ಏ.5 ಆರ್‌ಸಿಬಿ-ಚೆನ್ನೈ, ಬೆಂಗಳೂರು ಸಂಜೆ 7.30
ಏ.10 ರಾಜಸ್ಥಾನ-ಆರ್‌ಸಿಬಿ ಗುವಾಹಟಿ ಸಂಜೆ 7.30
ಏ.12 ಮುಂಬೈ-ಆರ್‌ಸಿಬಿ ಮುಂಬೈ ಸಂಜೆ 7.30