Viral Video: ಇದು ಪೊಲೀಸ್ ಸಿಬ್ಬಂದಿಗಳ 'ಪೋಲಿ' ಕೆಲಸ; ಸರಸವಾಡ್ತಿರೋಗವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು
ಅನೈತಿಕ ಸಂಬಂಧಗಳಿಂದ ಉಂಟಾಗುವ ರಂಪಾಟಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತನ್ನ ಸಹೋದ್ಯೋಗಿಯೊಂದಿಗೆ ಅನೈಕ ಸಂಬಂಧವನ್ನು ಹೊಂದಿದ್ದ ಪೊಲೀಸ್ ಮಹಿಳಾ ಪೇದೆ ತನ್ನ ಗಂಡನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

-

ಕುಶೀನಗರ: ಉತ್ತರ ಪ್ರದೇಶದ (Uttar Pradesh) ಕುಶೀನಗರದಲ್ಲಿ (Kushinagar) ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ (Female Police Constable) ತನ್ನ ಪ್ರಿಯಕರನೊಂದಿಗೆ ದೈಹಿಕ ಸಂಬಂಧದಲ್ಲಿದ್ದಾಗ ತನ್ನ ಪತಿಯಿಂದ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಘಟನೆಯ ಎಲ್ಲರೂ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಆಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ಮದುವೆಯ ನಂತರದ ಅಕ್ರಮ ಸಂಬಂಧಗಳಿಗೆ ಸಂಬಂಧಿಸಿದ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ.
ಮಾಹಿತಿಯ ಪ್ರಕಾರ, 2016ರ ಬ್ಯಾಚ್‌ನ ಮಹಿಳಾ ಮತ್ತು ಪುರುಷ ಕಾನ್ಸ್‌ಟೇಬಲ್‌ಗಳು ವಿವಾಹಿತರಾಗಿದ್ದು, ಕಶ್ಯ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಲ್ಲಿಯಾದ ನಿವಾಸಿಯಾದ ಪತಿ ಕಾನ್ಸ್‌ಟೇಬಲ್ ಪೊಲೀಸ್ ಲೈನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಆತನ ಪತ್ನಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ತನ್ನ ಪತ್ನಿ ಯಾರೊಂದಿಗೋ ರೂಮಿನಲ್ಲಿ ಇದ್ದಾಳೆ, ಬಾಗಿಲು ಬಡಿದರೂ ತೆರೆಯುತ್ತಿಲ್ಲ ಎಂದು ಪತಿ ಯುಪಿ ಪೊಲೀಸ್ 112ಗೆ ದೂರು ನೀಡಿದ್ದಾನೆ.
यूपी के कुशीनगर में एक पुलिसवाले ने अपनी पत्नी को उसके प्रेमी के साथ पकड़ लिया. पत्नी प्रेमी संग कमरे में थी, तभी पति पहुंच गया. हालांकि पत्नी ने कमरा अंदर से लॉक कर रखा था, उसने तुरंत पुलिस को सूचना दी. फिर पुलिस की मौजूदगी में कमरे का ताला तोड़ा गया. @kushinagarpol pic.twitter.com/MnCRtGpEaj
— baghelpramod (@baghelpramod4) September 1, 2025
ಈ ಸುದ್ದಿಯನ್ನೂ ಓದಿ: Viral News: ಕಳವು ಮಾಡಿದ್ದಾಳೆ ಎಂದು ಆರೋಪಿಸಿ ಮಹಿಳೆಗೆ ಹೊಡೆದು, ಚಪ್ಪಲಿ ಹಾರ ಹಾಕಿ ಅರೆಬೆತ್ತಲೆ ಮೆರವಣಿಗೆ; ಪೊಲೀಸ್ ಕ್ರಮ
ದೂರಿನ ಆಧಾರದ ಮೇಲೆ ಕಶ್ಯ ಪೊಲೀಸ್ ಠಾಣೆಯ ಉಸ್ತುವಾರಿಗಳಾದ ಗೌರವ್ ಶ್ರೀವಾಸ್ತವ, ಅತುಲ್ ವರ್ಮಾ ಮತ್ತು ಸಿಬ್ಬಂದಿ ಉಮಾಶಂಕರ್ ವರ್ಮಾ ಸ್ಥಳಕ್ಕೆ ಧಾವಿಸಿದರು. ಹಲವು ಪ್ರಯತ್ನಗಳ ನಂತರ ಕೋಣೆಯ ಬಾಗಿಲು ತೆರೆಯಲಾಯಿತು. ಆಗ ಮಹಿಳಾ ಕಾನ್ಸ್‌ಟೇಬಲ್ ಪೊಲೀಸ್ ಸಮವಸ್ತ್ರದಲ್ಲಿ ಹೊರಬಂದಳು, ಆಕೆಯ ಜೊತೆಗೆ ಇನ್ನೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ಇದ್ದದ್ದನ್ನು ಪತಿ ಗಮನಿಸಿದ. ಈ ಘಟನೆ ಸ್ಥಳೀಯ ಸಮುದಾಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಉತ್ತರ ಪ್ರದೇಶದಲ್ಲಿ ಇಂತಹ ಅಕ್ರಮ ಸಂಬಂಧಗಳು ಬಹಿರಂಗಗೊಂಡಾಗ ಕೆಲವೊಮ್ಮೆ ದುರಂತಕ್ಕೆ ಕಾರಣವಾಗಿವೆ. ಕೆಲವು ಪ್ರಕರಣಗಳಲ್ಲಿ ಪತಿ ಅಥವಾ ಪತ್ನಿಯ ಕೊಲೆಗೆ ಇಂತಹ ಸಂಬಂಧಗಳು ಕಾರಣವಾಗಿವೆ. ಆದರೆ, ಕುಶೀನಗರದ ಈ ಘಟನೆಯಲ್ಲಿ ಪತಿಯ ತಕ್ಷಣದ ಕ್ರಮವು ದುರಂತವನ್ನು ತಪ್ಪಿಸಿತು. ಪೊಲೀಸ್ ಇಲಾಖೆಯ ಒಳಗಿನ ಈ ಘಟನೆಯಿಂದಾಗಿ ತನಿಖೆ ಆರಂಭವಾಗಿದ್ದು, ಇದರ ಕಾನೂನು ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ.