ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಚ್ಚರಿಕೆ ನೀಡಿ ಅಭಿಮಾನಿಯೊಂದಿಗೆ ತಾಳ್ಮೆ ಕಳೆದುಕೊಂಡ ಬುಮ್ರಾ; ವಿಡಿಯೊ ವೈರಲ್‌

viral video: ವೈರಲ್‌ ವಿಡಿಯೊದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ವಿಡಿಯೊ ಮಾಡುತ್ತಾ ತಾನು ನಿಮ್ಮೊಂದಿಗೆ ಪ್ರಯಾಣಿಸುತ್ತೇನೆ ಎಂದು ಹೇಳಿದಾಗ ಬುಮ್ರಾ ನಿಮ್ಮ ಫೋನ್ ಬಿದ್ದರೆ, ನನ್ನನ್ನು ಕೇಳಬಾರದು ಎನ್ನುತಾರೆ. ಆಗ ಅಭಿಮಾನಿ ಪರವಾಗಿಲ್ಲ ಸರ್ ಎನ್ನುತ್ತಾನೆ. ತಾಳ್ಮೆ ಕಳೆದುಕೊಂಡ ಬುಮ್ರಾ ನಿಲ್ಲಿಸು ಸಾಕು ಎಂದು ಮೊಬೈಲ್‌ ಕಸಿದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಕ್ಲಿಪ್ ಥಟ್ಟನೆ ಕೊನೆಗೊಂಡಿತು.

Jasprit Bumrah

ಮುಂಬಯಿ, ಡಿ.18: ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ವರ್ತನೆಯಿಂದ ಸಿಟ್ಟಿಗೆದ್ದು, ಎಚ್ಚರಿಕೆ ನೀಡಿ ತಾಳ್ಮೆ ಕಳೆದುಕೊಂಡು ಫೋನ್ ಕಸಿದುಕೊಂಡ ಘಟನೆ ಸಂಭವಿಸಿದೆ. ಈ ವಿಡಿಯೊ ವೈರಲ್‌ ಆಗಿದ್ದು ನೆಟ್ಟಿಗರು ಅಭಿಮಾನಿಯ ವರ್ತನೆಯನ್ನು ಟೀಕಿಸಿದ್ದಾರೆ.

ಬುಮ್ರಾ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಭಾಗವಾಗಿದ್ದಾರೆ. ಅವರು ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಮೂರನೇ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

ವೈರಲ್‌ ವಿಡಿಯೊದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ವಿಡಿಯೊ ಮಾಡುತ್ತಾ ತಾನು ನಿಮ್ಮೊಂದಿಗೆ ಪ್ರಯಾಣಿಸುತ್ತೇನೆ ಎಂದು ಹೇಳಿದಾಗ ಬುಮ್ರಾ ನಿಮ್ಮ ಫೋನ್ ಬಿದ್ದರೆ, ನನ್ನನ್ನು ಕೇಳಬಾರದು ಎನ್ನುತಾರೆ. ಆಗ ಅಭಿಮಾನಿ ಪರವಾಗಿಲ್ಲ ಸರ್ ಎನ್ನುತ್ತಾನೆ. ತಾಳ್ಮೆ ಕಳೆದುಕೊಂಡ ಬುಮ್ರಾ ನಿಲ್ಲಿಸು ಸಾಕು ಎಂದು ಮೊಬೈಲ್‌ ಕಸಿದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಕ್ಲಿಪ್ ಥಟ್ಟನೆ ಕೊನೆಗೊಂಡಿತು.



ಈ ಹಿಂದೆಯೂ ಜಸ್‌ಪ್ರೀತ್‌ ಬುಮ್ರಾ ತಾಳ್ಮೆ ಕಳೆದುಕೊಂಡಿದ್ದ ಘಟನೆ ನೆಡೆದಿತ್ತು. ಪಾಪರಾಜಿಗಳು(Paparazzi) ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಿರಿಕಿರಿ ಉಂಟುಮಾಡಿದ್ದ ವೇಳೆ ತಾಳ್ಮೆ ಬುಮ್ರಾ ತಾಳ್ಮೆ ಕಳೆದುಕೊಂಡು 'ನಾನು ನಿಮ್ಮನ್ನು ಬರಲು ಹೇಳಿಲ್ಲ' ಎಂದು ಏರು ಧ್ವನಿಯಲ್ಲಿ ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು.

ಕ್ರಿಕೆಟ್ ಪಿಚ್‌ನಲ್ಲಿ ವಿರಳವಾಗಿ ತಾಳ್ಮೆ ಕಳೆದುಕೊಳ್ಳುವ ವೇಗದ ಬೌಲರ್ ಬುಮ್ರಾ, ಪಾಪಾರಾಜಿಗಳ ಕಾಟ ತಪ್ಪಿಸಲು "ಮೈನೆ ಬುಲಾಯಾ ಹೈ ನಹಿ. ತುಮ್ ಕಿಸಿ ಔರ್ ಕೆ ಲಿಯೇ ಆಯೇ ಹೋ, ಆ ರಹೇ ಹೊಂಗೆ ವೋ" (ನಾನು ನಿಮ್ಮನ್ನು ಬರಲು ಹೇಳಿಲ್ಲ. ನೀವು ಬೇರೆಯವರಿಗಾಗಿ ಬಂದಿದ್ದೀರಿ; ಅವರು ಬರಬಹುದು), ದಯವಿಟ್ಟು ನನ್ನ ಕಾರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಹೇಳುವ ಮೂಲಕ ಬುಮ್ರಾ ವಿಮಾನ ನಿಲ್ದಾಣದಿಂದ ಹೊರ ನಡೆದಿದ್ದರು.

ಇದನ್ನೂ ಓದಿ ಟಿ20 ಶ್ರೇಯಾಂಕದಲ್ಲಿ ಹೊಸ ಎತ್ತರ ತಲುಪಿ ಬುಮ್ರಾ ದಾಖಲೆ ಮುರಿದ ವರುಣ್ ಚಕ್ರವರ್ತಿ

4ನೇ ಪಂದ್ಯ ರದ್ದು

ಬುಧವಾರ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ(IND vs SA 4th T20I) ನಡುವಿನ ನಾಲ್ಕನೇ ಟಿ20 ಪಂದ್ಯ ರದ್ದಾದ ಬೆನ್ನಲ್ಲೇ ಬಿಸಿಸಿಐ(BCCI) ವಿರುದ್ಧ ಟೀಕೆಗಳು ವ್ಯಕ್ತವಾಗಿದೆ. ಜತೆಗೆ ನಿರಾಶೆಗೊಂಡ ಹಲವರು ಅಭಿಮಾನಿಗಳು ಟಿಕೆಟ್‌ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿರುವ ಏಕಾನ ಕ್ರಿಕೆಟ್ ಮೈದಾನದಲ್ಲಿ 4ನೇ ಟಿ20 ಪಂದ್ಯ ಆಯೋಜನೆ ಮಾಡಲಾಗಿತ್ತು. ಆದರೆ ಪಂದ್ಯ ದಟ್ಟ ಮಂಜಿನ ಕಾರಣದಿಂದ ರದ್ದು ಮಾಡಲಾಯಿತು. ಲಖನೌ ನಗರದಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) 400ರ ಮಟ್ಟದಲ್ಲಿತ್ತು. ಇದು ಅಪಾಯಕಾರಿ ಮಟ್ಟವಾಗಿದೆ.