ಕೋಲ್ಕತಾ, ಮಾ.1: ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಸೆಣಸಾಡಲು ಸಜ್ಜಾಗುತ್ತಿದ್ದು ಉಭಯ ತಂಡಗಳು ಇಂದು(ಭಾನುವಾರ) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ 2026 ರ ಟಿ20 ವಿಶ್ವಕಪ್‌ನ 52 ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ.
ಬುಮ್ರಾ ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 497 ವಿಕೆಟ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ಹೆಸರಿಗೆ 500 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಅವರಿಗೆ ಇನ್ನೂ ಮೂರು ವಿಕೆಟ್‌ಗಳು ಬೇಕಾಗಿವೆ. ಈ ಸಾಧನೆಗೈದರೆ ಅವರು ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ಸಾಧಿಸಿದ 42 ನೇ ಆಟಗಾರನಾಗಲಿದ್ದಾರೆ.
ಸೆಮಿಫೈನಲ್ ಪ್ರವೇಶ ಪಡೆಯಬೇಕಿದ್ದರೆ ಈ ಪಂದ್ಯವು ಭಾರತ ತಂಡ ಮತ್ತು ವಿಂಡೀಸ್ ತಂಡಕ್ಕೂ ಮಸ್ಟ್ ವಿನ್ ಪಂದ್ಯವಾಗಿದೆ. ಹೀಗಾಗಿ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಅಭಿಮಾನಿಗಳದ್ದು. ಪ್ರಸ್ತುತ, ವೆಸ್ಟ್ ಇಂಡೀಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ.
ಟಿ20ಐಗಳಲ್ಲಿ ಭಾರತ vs ವೆಸ್ಟ್ ಇಂಡೀಸ್ ಮುಖಾಮುಖಿ ದಾಖಲೆ
ಆಡಿದ ಪಂದ್ಯಗಳು: 30
ಭಾರತ ಜಯ :19
ವೆಸ್ಟ್ ಇಂಡೀಸ್ ಜಯ - 10
ಫಲಿತಾಂಶವಿಲ್ಲ - 1
ಯುಎಇ ಭದ್ರತಾ ಕಳವಳ: ಇಂಗ್ಲೆಂಡ್ ಲಯನ್ಸ್ vs ಪಾಕಿಸ್ತಾನ್ ಶಾಹೀನ್ಸ್ ಪಂದ್ಯ ರದ್ದು
ಟಿ20 ವಿಶ್ವಕಪ್ ಮುಖಾಮುಖಿ
ಆಡಿರುವ ಪಂದ್ಯಗಳು - 4
ಭಾರತ ಗೆಲುವು - 1
ವೆಸ್ಟ್ ಇಂಡೀಸ್ ಗೆಲುವು - 3
ಉಭಯ ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.
ವೆಸ್ಟ್ ಇಂಡೀಸ್: ಶಾಯ್ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಗುಡಾಕೇಶ್ ಮೋಟಿ, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ಕ್ವೆಂಟಿನ್ ಸ್ಯಾಂಪ್ಸನ್, ರೋಮರ್ಯೋಡೆನ್ ಸೀಲ್ಸ್.