ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DP Manu: ಡೋಪಿಂಗ್ ದೃಢ; ಜಾವೆಲಿನ್‌ ತಾರೆ, ಕನ್ನಡಿಗ ಮನುಗೆ 4 ವರ್ಷ ನಿಷೇಧ

2023ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮನು ಬೆಳ್ಳಿ ಪದಕ ಗೆದ್ದಿದ್ದರು. ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರನೇ ಸ್ಥಾನ ಪಡೆದಿದ್ದರು. ನಾಡಾದ ಡೋಪಿಂಗ್ ವಿರೋಧಿ ನಿಯಮಗಳ 2.1 ಮತ್ತು 2.2 ನೇ ವಿಧಿಗಳ ಅಡಿಯಲ್ಲಿ ಮನು ರಕ್ತದ ಮಾದರಿಯಲ್ಲಿ ನಿಷೇಧಿತ ವಸ್ತು ಇರುವುದು ಕಂಡುಬಂದಿದೆ.

ನವದೆಹಲಿ: ಜಾವೆಲಿನ್‌ ಥ್ರೊ ಸ್ಪರ್ಧಿ, ಕನ್ನಡಿಗ ಡಿ.ಪಿ. ಮನು(DP Manu) ಅವರು ಉದ್ದೀಪನ ಮದ್ದುಸೇವನೆ(Doping) ಮಾಡಿರುವುದು ದೃಢವಾಗಿದೆ. ಈ ತಪ್ಪಿಗಾಗಿ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ) ಮನುಗೆ 2028 ರವರೆಗೆ ನಿಷೇಧ ವಿಧಿಸಿದೆ. ನಿಷೇಧಿತ ಮೀಥೈಲ್ಟೆಸ್ಟೊಸ್ಟೆರಾನ್ ಅಂಶ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ನಾಡಾ(NADA) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಸನ ಜಿಲ್ಲೆಯ 25 ವರ್ಷದ ಡಿ.ಪಿ ಮನು ಜಾವೆಲಿನ್ ಥ್ರೋದಲ್ಲಿ ಭಾರತದ ಭರವಸೆಯಾಗಿ ಮೂಡಿಬಂದಿದ್ದರು. ಇದೀಗ 4 ವರ್ಷದ ನಿಷೇಧ ಶಿಕ್ಷೆ ಅವರ ಜಾವೆಲಿನ್ ಭವಿಷ್ಯವನ್ನೇ ಬಹುತೇಕ ಕಮರಿಹೋಗುವಂತೆ ಮಾಡಿದೆ. 2024ರಿಂದಲೇ ಅವರ ನಿಷೇಧ ಶಿಕ್ಷೆ ಜಾರಿಯಾಗಲಿದೆ.

2023ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮನು ಬೆಳ್ಳಿ ಪದಕ ಗೆದ್ದಿದ್ದರು. ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರನೇ ಸ್ಥಾನ ಪಡೆದಿದ್ದರು. ನಾಡಾದ ಡೋಪಿಂಗ್ ವಿರೋಧಿ ನಿಯಮಗಳ 2.1 ಮತ್ತು 2.2 ನೇ ವಿಧಿಗಳ ಅಡಿಯಲ್ಲಿ ಮನು ರಕ್ತದ ಮಾದರಿಯಲ್ಲಿ ನಿಷೇಧಿತ ವಸ್ತು ಇರುವುದು ಕಂಡುಬಂದಿದೆ.



ಇದನ್ನೂ ಓದಿ Neeraj Chopra: ಡೋಪಿಂಗ್‌ ದೇಶದ ದೊಡ್ಡ ಸಮಸ್ಯೆ; ನೀರಜ್‌ ಚೋಪ್ರಾ

ಮನು, ಏಪ್ರಿಲ್ 2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 1 ರ ಸಮಯದಲ್ಲಿ ಪರೀಕ್ಷಿಸಲ್ಪಟ್ಟಿದ್ದರು. ಈ ವೇಳೆ ಅವರ ರಕ್ತದ ಮಾದರಿಯಲ್ಲಿ ಅನಾಬೊಲಿಕ್-ಆಂಡ್ರೊಜೆನಿಕ್ ಸ್ಟೀರಾಯ್ಡ್‌ನ ಕುರುಹುಗಳನ್ನು ಕಂಡುಬಂದಿತ್ತು. ಹೀಗಾಗಿ ಸ್ಪರ್ಧಾಕೂಟಗಳಲ್ಲಿ ಭಾಗವಹಿಸದಂತೆ ಮನುಗೆ ತಾತ್ಕಾಲಿಕ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಇದರಿಂದ ಮನುಗೆ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವ ಅವಕಾಶ ಕೈತಪ್ಪಿ ಹೋಗಿತ್ತು.ಇದೀಗ ಅವರು ಉದ್ದೀಪನ ಮದ್ದುಸೇವನೆ ಮಾಡಿರುವುದು ದೃಢವಾಗಿದೆ.