ಲಂಡನ್, ಸೆ.11: ಎಡ್ಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಫೀಲ್ಡರ್ ಆಗಿ ತಮ್ಮ 220ನೇ ಕ್ಯಾಚ್ ಪಡೆಯುವ ಮೂಲಕ, ಇಂಗ್ಲೆಂಡ್ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಈ ಮೈಲಿಗಲ್ಲು ಅವರನ್ನು ಸ್ಟೀವ್ ಸ್ಮಿತ್ ಅವರ 219 ಕ್ಯಾಚ್‌ಗಳ ದಾಖಲೆಯನ್ನು ಹಿಂದಿಕ್ಕುವಂತೆ ಮಾಡಿತು ಮತ್ತು ಈ ಮಾದರಿಯಲ್ಲಿ ವಿಕೆಟ್-ಕೀಪರ್ ಅಲ್ಲದ ಫೀಲ್ಡರ್‌ಗಳ ಸಾರ್ವಕಾಲಿಕ ಪಟ್ಟಿಯಲ್ಲಿ ಅವರನ್ನು ಅಗ್ರಸ್ಥಾನಕ್ಕೇರಿಸಿತು.
ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಅಬ್ದುಲ್ಲಾ ಶಫೀಕ್ ಅವರ ಕ್ಯಾಚ್ ಹಿಡಿಯುವ ಮೂಲಕ ರೂಟ್ ಈ ದಾಖಲೆ ನಿರ್ಮಿಸಿದರು. ಸದ್ಯ ಎರಡನೇ ಸ್ಥಾನದಲ್ಲಿರುವ ಸ್ಟೀವನ್ ಸ್ಮಿತ್‌ಗೂ ರೂಟ್ ಮಧ್ಯೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಇದೆ. ಕಾರಣ ಉಭಯ ಆಟಗಾರರು ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾರೆ.
ಟೆಸ್ಟ್ ಪಂದ್ಯಗಳಲ್ಲಿ ಫೀಲ್ಡರ್ ಆಗಿ ಅತಿ ಹೆಚ್ಚು ಕ್ಯಾಚ್‌ಗಳು
220* - ಜೋ ರೂಟ್
219 - ಸ್ಟೀವನ್ ಸ್ಮಿತ್
210 - ರಾಹುಲ್ ದ್ರಾವಿಡ್
205 - ಎಂ. ಜಯವರ್ಧನೆ
200 - ಜಾಕ್ ಕಾಲಿಸ್
ಸಚಿನ್ ದಾಖಲೆ ಸನಿಹ ರೂಟ್
ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದರು. ಈ ಮೂಲಕ ರೂಟ್ ಆಸ್ಟ್ರೇಲಿಯಾದ ಮಾಜಿ ನಾಯಕರಾದ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಅವರ ದಾಖಲೆ ಹಿಂದಿಕ್ಕಿ ಸಚಿಚ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
ವಿನೇಶ್ ಫೋಗಟ್ ಆಯ್ಕೆ ಟ್ರಯಲ್ಸ್ ಸ್ಪರ್ಧೆಗೆ ಹೈಕೋರ್ಟ್ ನಕಾರ
1989 ರಿಂದ 2013 ರವರೆಗಿನ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಚಿನ್ ದಾಖಲೆಯ 200 ಟೆಸ್ಟ್ ಪಂದ್ಯಗಳನ್ನಾಡಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಆಡಿದವರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಬೇರೆ ಯಾವುದೇ ಕ್ರಿಕೆಟಿಗ 200 ಟೆಸ್ಟ್‌ಗಳ ಗಡಿಯನ್ನು ದಾಟಿಲ್ಲ. ಇಂಗ್ಲೆಂಡ್ ಮಾಜಿ ಆಟಗಾರ ಜೇಮ್ಸ್ ಆ್ಯಂಡರ್ಸನ್(188) ಎರಡನೇ ಸ್ಥಾನದಲ್ಲಿದ್ದಾರೆ. ಜೋ ರೂಟ್(169*) ಟೆಸ್ಟ್ ಆಡಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ಸಾರ್ವಕಾಲಿಕ ದಾಖಲೆ ಮುರಿಯಲು ಅವರು ಇನ್ನೂ 31 ಟೆಸ್ಟ್ ಪಂದ್ಯವಾಡಬೇಕಿದೆ.
ರೂಟ್ ಪ್ರಸ್ತುತ ಇಂಗ್ಲೆಂಡ್ ನಾಯಕನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ 2017 ಮತ್ತು 2022 ರ ನಡುವೆ ತಂಡವನ್ನು ಮುನ್ನಡೆಸಿದ್ದರು. 2026 ರಲ್ಲಿ ಮತ್ತೆ ನಾಯಕತ್ವ ವಹಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಅವರು ಒಂದು ಅರ್ಧಶತಕ ದಾಖಲಿಸಿದ್ದರು.