ಲಂಡನ್, ಜೂ.17: ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್(ENG vs NZ 2nd Test) ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಜೋ ರೂಟ್(Joe Root) ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಲಿದ್ದಾರೆ. ಬ್ಲಾಕ್ ಕ್ಯಾಪ್ಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ತವರು ಸರಣಿಯ ಎರಡನೇ ಟೆಸ್ಟ್‌ನಲ್ಲಿ, ರೂಟ್ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆಯುವ ಅವಕಾಶವನ್ನು ಹೊಂದಿದ್ದಾರೆ.
ಟೆಸ್ಟ್‌ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿರುವ ರೂಟ್, ದಿ ಓವಲ್‌ನಲ್ಲಿ ಕನಿಷ್ಠ 48 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ವಿಶ್ವದ ಎರಡನೇ ಆಟಗಾರನಾಗುತ್ತಾರೆ. ಸದ್ಯಕ್ಕೆ, ರೂಟ್ 164 ಟೆಸ್ಟ್‌ಗಳ 300 ಇನ್ನಿಂಗ್ಸ್‌ಗಳಲ್ಲಿ 13,952 ರನ್ ಗಳಿಸಿದ್ದಾರೆ. ಸಚಿನ್ 200 ಪಂದ್ಯಗಳಲ್ಲಿ 15,921 ರನ್‌ಗಳೊಂದಿಗೆ ತಮ್ಮ 24 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದರು.
ಟೆಸ್ಟ್‌ನಲ್ಲಿ 14,000 ರನ್ ಗಳಿಸಲು ಸಚಿನ್ 279 ಇನ್ನಿಂಗ್ಸ್ ಮತ್ತು 171 ಟೆಸ್ಟ್ ಪಂದ್ಯಗಳಲ್ಲಿ ಆಡಬೇಕಾಯಿತು, ಆದರೆ ರೂಟ್ ತಮ್ಮ 165ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಬಹುದು. ಈ ಮೂಲಕ ಅತಿ ವೇಗವಾಗಿ ಟಸ್ಟ್‌ನಲ್ಲಿ 14 ಸಾವಿರ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಮೆಸ್ಸಿ ಹ್ಯಾಟ್ರಿಕ್ ಗೋಲ್ ಕಮಾಲ್; ಅರ್ಜೆಂಟೀನಾ ಗೆಲುವಿನ ಶುಭಾರಂಭ
ಟೆಸ್ಟ್ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಜೊತೆಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 2,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗುವ ಅವಕಾಶವೂ ಇದೆ. 2012 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೂಟ್, ಬ್ಲಾಕ್ ಕ್ಯಾಪ್ಸ್ ವಿರುದ್ಧದ 22 ಪಂದ್ಯಗಳಲ್ಲಿ 1,934 ರನ್ ಗಳಿಸಿದ್ದಾರೆ. ಅವರ ಗಳಿಕೆಯನ್ನು 2,000 ತಲುಪಲು ಅವರು ದಿ ಓವಲ್‌ನಲ್ಲಿ 66 ರನ್ ಗಳಿಸಬೇಕಾಗಿದೆ.
ಒಟ್ಟಾರೆಯಾಗಿ, ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 54 ಪಂದ್ಯಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20ಐ) 3,106 ರನ್ ಗಳಿಸಿದ್ದಾರೆ. ಮುಂಬರುವ ಪಂದ್ಯದಲ್ಲಿ ಅವರು ಕನಿಷ್ಠ 62 ರನ್ ಗಳಿಸಿದರೆ, ಅವರು ರಿಕಿ ಪಾಂಟಿಂಗ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಎಲ್ಲಾ ಸ್ವರೂಪಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುತ್ತಾರೆ.
ಪಾಂಟಿಂಗ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವದಲ್ಲಿ ನ್ಯೂಜಿಲೆಂಡ್ ವಿರುದ್ಧದ 69 ಪಂದ್ಯಗಳಲ್ಲಿ 3,145 ರನ್ ಗಳಿಸಿದರೆ, ಕೊಹ್ಲಿ ಬ್ಲಾಕ್ ಕ್ಯಾಪ್ಸ್ ವಿರುದ್ಧದ 60 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 73 ಇನ್ನಿಂಗ್ಸ್‌ಗಳಲ್ಲಿ 3,167 ರನ್‌ಗಳನ್ನು ಗಳಿಸಿದ್ದಾರೆ.
ದಾಖಲೆ ಸಚಿನ್ ಹೆಸರಿನಲ್ಲಿದೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಚಿನ್ ಹೊಂದಿದ್ದಾರೆ. ಭಾರತದ ದಂತಕಥೆ ಬ್ಯಾಟ್ಸ್‌ಮನ್ ಕಿವೀಸ್ ವಿರುದ್ಧ 66 ಪಂದ್ಯಗಳನ್ನು ಆಡಿದ್ದಾರೆ ಮತ್ತು 80 ಇನ್ನಿಂಗ್ಸ್‌ಗಳಲ್ಲಿ 3,345 ರನ್ ಗಳಿಸಿದ್ದಾರೆ.