ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RR vs LSG: ರಾಜಸ್ಥಾನ ರಾಯಲ್ಸ್ ಪರ ಹೊಸ ಐಪಿಎಲ್ ದಾಖಲೆ ನಿರ್ಮಿಸಿದ ಜೋಫ್ರಾ ಆರ್ಚರ್

Jofra Archer: ಪ್ರಸಕ್ತ ಟೂರ್ನಿಯಲ್ಲಿ ಜೋಫ್ರಾ ಏಳು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಪರ್ಲ್‌ ಕ್ಯಾಪ್‌ ರೇಸ್‌ನಲ್ಲಿ ತಂಡದ ಸಹ ಆಟಗಾರ ರವಿ ಬಿಷ್ಣೋಯ್ ಜೊತೆಗೆ ಜಂಟಿ-ಮೂರನೇ ಸ್ಥಾನದಲ್ಲಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಜೋಫ್ರಾ 17 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದರು. ನಿಕೋಲಸ್ ಪೂರನ್ ವಿರುದ್ಧದ ಪವರ್‌ಪ್ಲೇನಲ್ಲಿ ಅವರು ಮೇಡನ್ ಓವರ್ ಎಸೆದರು.

Jofra Archer

ಲಖನೌ, ಎ. 23: ಬುಧವಾರ ನಡೆದಿದ್ದ ಇಂಡಿಯನ್‌ ಪ್ರೀಮಿಯರ್ ಲೀಗ್‌(IPL 2026)ನಲ್ಲಿ ರಾಜಸ್ಥಾನ್ ರಾಯಲ್ಸ್(RR vs LSG) ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಏಕಾನಾ ಕ್ರೀಡಾಂಗಣ(Ekana Stadium)ದಲ್ಲಿ 40 ರನ್‌ಗಳಿಂದ ಸೋಲಿಸುವ ಮೂಲಕ ಮತ್ತೆ ಗೆಲುವಿನ ಹಳಿಗೆ ಮರಳಿತು. ಈ ಪಂದ್ಯದಲ್ಲಿ ಮೂರು ವಿಕೆಟ್‌ ಕಿತ್ತ ವೇಗಿ ಜೋಫ್ರಾ ಆರ್ಚರ್(Jofra Archer) ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಮೂರು ವಿಕೆಟ್‌ಗಳನ್ನು ಕಬಳಿಸಿದ ಆರ್ಚರ್‌, ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಫ್ರಾಂಚೈಸಿಗಾಗಿ 68 ನೇ ವಿಕೆಟ್ ಪಡೆಯುವ ಮೂಲಕ ಶೇನ್ ವ್ಯಾಟ್ಸನ್ ಅವರ ದಾಖಲೆಯನ್ನು ಮುರಿದರು. ಯುಜ್ವೇಂದ್ರ ಚಾಹಲ್, ಸಿದ್ಧಾರ್ಥ್ ತ್ರಿವೇದಿ ಮತ್ತು ಶೇನ್ ವಾರ್ನ್ ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಪವರ್‌ಪ್ಲೇನಲ್ಲಿ ಜೋಫ್ರಾ ಐಡೆನ್ ಮಾರ್ಕ್ರಾಮ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು, ನಂತರ ಮಾಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್ ಅವರನ್ನು ಡೆತ್ ಓವರ್‌ಗಳಲ್ಲಿ ಔಟ್ ಮಾಡಿದರು. ಇದರೊಂದಿಗೆ, ರಾಜಸ್ಥಾನವು ಆರಾಮದಾಯಕ ಗೆಲುವು ಸಾಧಿಸಿತು ಮತ್ತು ಐಪಿಎಲ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.

ಪ್ರಸಕ್ತ ಟೂರ್ನಿಯಲ್ಲಿ ಜೋಫ್ರಾ ಏಳು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಪರ್ಲ್‌ ಕ್ಯಾಪ್‌ ರೇಸ್‌ನಲ್ಲಿ ತಂಡದ ಸಹ ಆಟಗಾರ ರವಿ ಬಿಷ್ಣೋಯ್ ಜೊತೆಗೆ ಜಂಟಿ-ಮೂರನೇ ಸ್ಥಾನದಲ್ಲಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಜೋಫ್ರಾ 17 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದರು. ನಿಕೋಲಸ್ ಪೂರನ್ ವಿರುದ್ಧದ ಪವರ್‌ಪ್ಲೇನಲ್ಲಿ ಅವರು ಮೇಡನ್ ಓವರ್ ಎಸೆದರು.

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದವರು

ಜೋಫ್ರಾ ಆರ್ಚರ್- 68

ಶೇನ್ ವ್ಯಾಟ್ಸನ್- 67

ಯುಜ್ವೇಂದ್ರ ಚಹಾಲ್- 66

ಸಿದ್ಧಾರ್ಥ್ ತ್ರಿವೇದಿ- 65

ಶೇನ್ ವಾರ್ನ್- 58

LSG vs RR: ಮೂವರು ಸ್ಟಾರ್‌ ಬ್ಯಾಟರ್ಸ್‌ ಡಕ್‌ಔಟ್‌! ಸಂಜೀವ್‌ ಗೋಯೆಂಕಾ ಕಿಡಿ!

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ, ವೈಭವ್ ಸೂರ್ಯವಂಶಿ 11 ಎಸೆತಗಳಲ್ಲಿ ಎಂಟು ರನ್‌ಗಳಿಗೆ ಔಟಾದರೆ, ಧ್ರುವ್ ಜುರೆಲ್ ಗೋಲ್ಡನ್ ಡಕ್‌ಗೆ ಔಟಾದರು. ಯಶಸ್ವಿ ಜೈಸ್ವಾಲ್(22) ಕೂಡ ವಿಫಲರಾದರು. ಸಂಕಷ್ಟದ ಪರಿಸ್ಥಿತಿಯಲ್ಲಿ, ಅನುಭವಿ ರವೀಂದ್ರ ಜಡೇಜಾ ಅವರು ಬ್ಯಾಟಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಜೇಯ 43 ರನ್ ಗಳಿಸಿದರು. ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್‌ಗಳನ್ನು ಗಳಿಸಿತು.

ಗುರಿ ಬೆನ್ನಟ್ಟಿದ ಲಖನೌ ತಂಡ ಕೂಡ ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಂಡಿತು. ಆಯುಷ್‌ ಬದೋನಿ, ರಿಷಭ್‌ ಪಂತ್‌ ಮತತು ಐಡೆನ್‌ ಮಾರ್ಕ್ರಮ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಿಚೆಲ್‌ ಮಾರ್ಷ್‌(55) ಅರ್ಧಶತಕ ಬಾರಿಸಿದ ಪರಿಣಾಮ ತಂಡ ನೂರರ ಗಡಿ ದಾಟಿತು. ಅಂತಿಮವಾಗಿ 119 ರನ್‌ಗೆ ಸರ್ವಪತನ ಕಂಡಿತು.