ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

DC vs GT: 600 ಸಿಕ್ಸರ್‌ ಪೂರ್ತಿಗೊಳಿಸಿದ ಬಟ್ಲರ್‌; ಈ ಸಾಧನೆಗೈದ ಮೊದಲ ಇಂಗ್ಲೆಂಡ್‌ ಆಟಗಾರ

Most sixes in T20 cricket: ಪವರ್‌ಪ್ಲೇ ನಂತರ, ಬಟ್ಲರ್ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ 25 ನೇ ಅರ್ಧಶತಕವಾಗಿತ್ತು. ಅಂತಿಮವಾಗಿ ಕುಲದೀಪ್ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಆರಂಭಕಾರ ಸಾಯಿ ಸುದರ್ಶನ್‌ ಈ ಪಂದ್ಯದಲ್ಲಿಯೂ ವಿಫರಾದರು. 12 ರನ್‌ ಬಾರಿಸಿ ಮುಕೇಶ್‌ ಕುಮಾರ್‌ ಎಸೆತದಲ್ಲಿ ಕ್ಲೀನ ಬೌಲ್ಡ್‌ ಆದರು.

Jos Buttler

ನವದೆಹಲಿ, ಎ.8: ಜೋಸ್ ಬಟ್ಲರ್(Jos Buttler) ಟಿ20 ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(DC vs GT) ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್‌ ಬಾರಿಸುವ ಮೂಲಕ ಈ ಸಾಧನೆಗೈದರು.

ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳ ಗಡಿ ದಾಟಿದ ಐದನೇ ಆಟಗಾರ ಎನಿಸಿದರು. ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್ ಮತ್ತು ನಿಕೋಲಸ್ ಪೂರನ್ ಮೊದಲಿಗರು. ಅತ್ಯಧಿಕ ಸಿಕ್ಸರ್‌ ದಾಖಲೆ ಕ್ರಿಸ್‌ ಗೇಲ್‌ ಹೆಸರಿನಲ್ಲಿದೆ. ಅವರು 1056 ಸಿಕ್ಸರ್‌ ಬಾರಿಸಿದ್ದಾರೆ.

35 ವರ್ಷ ವರ್ಷದ ಬಟ್ಲರ್‌, 2026 ರ T20 ವಿಶ್ವಕಪ್‌ನಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಐಪಿಎಲ್‌ನಲ್ಲಿಯೂ ಸಹ, ಬಟ್ಲರ್ ದೆಹಲಿ ವಿರುದ್ಧದ ಪಂದ್ಯದವರೆಗೂ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ವಿಫಲರಾಗಿದ್ದರು. ಆದರೆ ಡೆಲ್ಲಿ ವಿರುದ್ಧ ಅರ್ಧಶತಕ ಬಾರಿಸಿ ಮತ್ತೆ ಹಳೆಯ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಂಡರು. 27 ಎಸೆತ ಎದುರಿಸಿ ಅವರು 3 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 52 ರನ್‌ ಬಾರಿಸಿದರು.

ಬಿಸಿಸಿಐ ಹೊಸ ನಿಯಮ; ಬೆಂಚ್‌ನಲ್ಲಿ ಕುಳಿತ ಐಪಿಎಲ್ ಆಟಗಾರರ ಚಲನೆಗೆ ನಿರ್ಬಂಧ

ಪವರ್‌ಪ್ಲೇ ನಂತರ, ಬಟ್ಲರ್ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ 25 ನೇ ಅರ್ಧಶತಕವಾಗಿತ್ತು. ಅಂತಿಮವಾಗಿ ಕುಲದೀಪ್ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಆರಂಭಕಾರ ಸಾಯಿ ಸುದರ್ಶನ್‌ ಈ ಪಂದ್ಯದಲ್ಲಿಯೂ ವಿಫರಾದರು. 12 ರನ್‌ ಬಾರಿಸಿ ಮುಕೇಶ್‌ ಕುಮಾರ್‌ ಎಸೆತದಲ್ಲಿ ಕ್ಲೀನ ಬೌಲ್ಡ್‌ ಆದರು.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು

ಕ್ರಿಸ್ ಗೇಲ್-1056 ಸಿಕ್ಸರ್‌

ಕೀರನ್ ಪೊಲಾರ್ಡ್- 982 ಸಿಕ್ಸರ್‌

ಆಂಡ್ರೆ ರಸೆಲ್- 784 ಸಿಕ್ಸರ್‌

ನಿಕೋಲಸ್ ಪೂರನ್- 712 ಸಿಕ್ಸರ್‌

ಜೋಸ್ ಬಟ್ಲರ್- 600 ಸಿಕ್ಸರ್‌

ಅಲೆಕ್ಸ್ ಹೇಲ್ಸ್- 595 ಸಿಕ್ಸರ್‌

ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್‌ ಆಯ್ದುಕೊಂಡಿತು. ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ ಮತ್ತೆ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದರು. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದರು.

ಉಭಯ ಆಡುವ ಬಳಗ

ಡೆಲ್ಲಿ ಕ್ಯಾಪಿಟಲ್ಸ್‌: ಕೆಎಲ್ ರಾಹುಲ್ (ವಿ.ಕೀ.), ಪಾತುಂ ನಿಸ್ಸಾಂಕ, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಕುಲದೀಪ್ ಯಾದವ್, ಲುಂಗಿ ಎನ್ಗಿಡಿ, ಟಿ ನಟರಾಜನ್, ಮುಖೇಶ್ ಕುಮಾರ್.

ಗುಜರಾತ್‌ ಟೈಟಾನ್ಸ್‌: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮಹಮ್ಮದ್ ಸಿರಾಜ್, ಅಶೋಕ್ ಶರ್ಮಾ.