ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ದುರದೃಷ್ಟಕರ ಸಂಜೆ"; ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಗ್ಗೆ ಐಡೆನ್ ಮಾರ್ಕ್ರಾಮ್ ಹೇಳಿಕೆ

ಪಂದ್ಯದ ಬಗ್ಗೆ ಹೇಳುವುದಾದರೆ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ದ.ಆಫ್ರಿಕಾ ಆರಂಭಿಕ ಕುಸಿತದ ಹೊರತಾಗಿಯೂ 8 ವಿಕೆಟ್‌ಗೆ 169 ರನ್‌ ಗಳಿಸಿತು. 170 ರನ್‌ಗಳ ಸಾಧಾರಣ ಗುರಿಯನ್ನು ಎದುರಿಸಿದ ನ್ಯೂಜಿಲೆಂಡ್ ಆ ಮೊತ್ತ ಲೆಕ್ಕಕ್ಕೇ ಇಲ್ಲದಂತೆ ಆಡಿ ಕೇವಲ 12.5 ಓವರುಗಳಲ್ಲಿ 1 ವಿಕೆಟ್‌ಗೆ 173 ರನ್ ಹೊಡೆಯಿತು.

Aiden Markram

ಕೋಲ್ಕತಾ, ಮಾ.5: ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌(T20 World Cup 2026)ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಬುಧವಾರ ನಡೆದ ನಿರ್ಣಾಯಕ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಈ ಸೋಲನ್ನು ನಾಯಕ ಐಡೆನ್‌ ಮಾರ್ಕ್ರಮ್‌(Aiden Markram) 'ಇದೊಂದು ದುರದೃಷ್ಟಕರ ಸಂಜೆ' ಎಂದು ಹೇಳಿದರು.

ಪಂದ್ಯದ ಬಳಿಕ ಮಾತನಾಡಿದ ಮಾರ್ಕ್ರಮ್‌, "ನಾವು ಒಂದು ಗುಂಪಾಗಿ ಚಿಂತಿಸುತ್ತೇವೆ. ಈ ಫಲಿತಾಂಶದಿಂದ ನಿರಾಶೆಗೊಂಡಿದ್ದೇವೆ. ಆದರೆ ನಮ್ಮ ತಂಡ ಟೂರ್ನಿಯಲ್ಲಿ ಆಡಿದ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಸಹ ಆಟಗಾರರು ಈ ಸ್ಪರ್ಧೆಯ ಉದ್ದಕ್ಕೂ ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡಿದರು, ಆದರೆ ಬುಧವಾರದ ಪಂದ್ಯ ನಮ್ಮ ಪಾಲಿಗೆ ನಿಜವಾಗಿಯೂ ದುರದೃಷ್ಟಕರ ಸಂಜೆಯಾಗಿತ್ತು" ಎಂದು ಹೇಳಿದರು.

ಪಂದ್ಯದ ಬಗ್ಗೆ ಹೇಳುವುದಾದರೆ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ದ.ಆಫ್ರಿಕಾ ಆರಂಭಿಕ ಕುಸಿತದ ಹೊರತಾಗಿಯೂ 8 ವಿಕೆಟ್‌ಗೆ 169 ರನ್‌ ಗಳಿಸಿತು. 170 ರನ್‌ಗಳ ಸಾಧಾರಣ ಗುರಿಯನ್ನು ಎದುರಿಸಿದ ನ್ಯೂಜಿಲೆಂಡ್ ಆ ಮೊತ್ತ ಲೆಕ್ಕಕ್ಕೇ ಇಲ್ಲದಂತೆ ಆಡಿ ಕೇವಲ 12.5 ಓವರುಗಳಲ್ಲಿ 1 ವಿಕೆಟ್‌ಗೆ 173 ರನ್ ಹೊಡೆಯಿತು.

ಏಕಪಕ್ಷೀಯವಾಗಿದ್ದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳು ಶಿಸ್ತಿನ ದಾಳಿಯೊಡನೆ ಹರಿಣಗಳ ಪಡೆಯನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ಬಳಿಕ ಬ್ಯಾಟರ್‌ಗಳು ಪ್ರಾಬಲ್ಯ ಮೆರೆದರು. 9 ವಿಕೆಟ್‌ಗಳಿಂದ ಗೆದ್ದ ಕಿವೀಸ್ ಪಡೆ ಫೈನಲ್‌ಗೆ ಲಗ್ಗೆಯಿಟ್ಟಿತು .

NZ vs SA: ಫಿನ್‌ ಆಲೆನ್‌ ದಾಖಲೆಯ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಫೈನಲ್‌ಗೇರಿದ ನ್ಯೂಜಿಲೆಂಡ್‌!

ಕಿವೀಸ್‌ ಪರ ಇನಿಂಗ್ಸ್‌ ಆರಂಭಿಸಿದ ಫಿನ್‌ ಆಲೆನ್‌ ಹಾಗೂ ಟಿಮ್‌ ಸೈಫರ್ಟ್‌ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 117 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ತಂಡಕ್ಕೆ ಭರ್ಜರಿ ಅಡಿಪಾಯವನ್ನು ಹಾಕಿತು. ಸ್ಪೋಟಕ ಬ್ಯಾಟ್‌ ಮಾಡಿದ ಸೈಫರ್ಟ್‌, ಕೇವಲ 33 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 58 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ನಿಂತು ಕೊನೆಯವರೆಗೂ ಬ್ಯಾಟ್‌ ಮಾಡಿದ ಫಿನ್‌ ಆಲೆನ್‌ ಅವರು, ಕೇವಲ 33 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 100 ರನ್‌ ಸಿಡಿಸಿದರು.