ಬೆಂಗಳೂರು: ಈ ಸಲ ಕಪ್ ನಮ್ದೇ... ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್‌ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ನಿಜವಾಗುವ ಸಮಯ ಸಮೀಪಿಸಿದೆ. ಇಂದು ಅಹ್ಮದಾಬಾದ್‌ನಲ್ಲಿ ನಡೆಯುವ ಐಪಿಎಲ್ ಫೈನಲ್(IPL 2025 Final) ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಪಂಜಾಬ್(rcb vs pbks) ತಂಡದ ಸವಾಲು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟ್ವೀಟ್ ಮಾಡಿ ಆರ್‌ಸಿಬಿಗೆ ಶುಭ ಹಾರೈಸಿದ್ದಾರೆ.
"ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು. ಆರ್‌ಸಿಬಿ ತಂಡದ ಸೋಲು - ಗೆಲುವು, ಏಳು - ಬೀಳುಗಳಲ್ಲಿ ಸದಾ ಜತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ - ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ. ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ, ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ. ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಆರ್‌ಸಿಬಿ ಜೆರ್ಸಿ ತೊಟ್ಟು ತಂಡ ಈ ಬಾರಿ ಕಪ್ ಗೆಲ್ಲಲಿ ಎಂದು ಹಾರೈಸಿದ್ದಾರೆ. "ಕಳೆದ 18 ವರ್ಷಗಳಿಂದ ಆರ್‌ಸಿಬಿ ತಂಡ ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲಿ ಅಂತ ಹಾರೈಸುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಈ ಸಲ ಕಪ್ ನಮ್ದೇ" ಎಂದು ಹಾರೈಸಿದ್ದಾರೆ.
ಇದನ್ನೂ ಓದಿ IPL 2025 Final: ಆರ್‌ಸಿಬಿ-ಪಂಜಾಬ್ ಫೈನಲ್ ಪಂದ್ಯಕ್ಕೂ ಮುನ್ನ ನಿರ್ದೇಶಕ ರಾಜಮೌಳಿ ಭಾವನಾತ್ಮಕ ಪೋಸ್ಟ್