ಕೆ.ಪೃಥ್ವಿಜಿತ್ ಬೆಂಗಳೂರು
ಅವರ ಹೆಸರು ಸೌಮ್ಯಾ... ಇನ್ನೂ 18 ವರ್ಷ. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ, ರಾಮಾಪುರ ಅವರ ಊರು. ಶೇ.80ರಷ್ಟು ದೃಷ್ಟಿಶಕ್ತಿ ಇಲ್ಲ. ಅಪ್ಪಅಮ್ಮ ತೀರಿಕೊಂಡಿ ದ್ದಾರೆ. ಅಣ್ಣ, ಅಕ್ಕನ ನೆರಳಿನಲ್ಲಿ ಬೆಳೆದಿದ್ದಾರೆ. ಕೃಷಿ ಇವರ ಜೀವನಾಧಾರ, ಜೋಳ, ಮೆಣಸು, ಟೊಮ್ಯಾಟೊ ಬೆಳೆಯುತ್ತಾರೆ. ಮನೆಯವರು ಆಗಾಗ ಕೂಲಿಗೂ ಹೋಗುತ್ತಾರೆ. ಇಂತಹ ಹುಡುಗಿ... ಈ ಎಲ್ಲ ಕೊರತೆಗಳನ್ನು ಮೆಟ್ಟಿನಿಂತು ಜಪಾನ್ನ ಐಚಿ ನಗೋಯಾದಲ್ಲಿ ಆರಂಭವಾಗಿರುವ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಚಿನ್ನವನ್ನೇ ಗೆದ್ದಿದ್ದಾರೆ.
1500 ಮೀಟರ್, ಟಿ12-ಟಿ13 ವಿಭಾಗದಲ್ಲಿ ಈಕೆ 5 ನಿಮಿಷ 12.39 ಸೆಕೆಂಡ್ಗಳಲ್ಲಿ ಓಡಿ ಗುರಿ ಮುಟ್ಟಿದ್ದಾರೆ. 2 ವರ್ಷದ ಹಿಂದೆ ಇವರ ಕ್ರೀಡಾಯಾನ ಶುರು ವಾಯಿತು. ದೀಪಾ ಅಕಾಡೆಮಿ ಎಂಬ ಅಂಧರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆಯನ್ನು ವಿಕ್ರಮ್ ಎಂಬ ಕೋಚ್ ಗುರ್ತಿಸಿ, ಸ್ವಂತ ತಂದೆ ತಾಯಿಯಂತೆ ಆಸ್ಥೆ ವಹಿಸಿ ಈಕೆಗೆ ಕ್ರೀಡಾ ಬದುಕನ್ನು ನೀಡಿದರು.
ಓಟದಲ್ಲಿ ಸಜ್ಜುಗೊಳಿಸಿದರು. ಅದನ್ನು ಗೌರವದಿಂದ ಸೌಮ್ಯಾ ನೆನೆಯುತ್ತಾರೆ. ವಿಕ್ರಮ್ ಆರ್ಥಿಕ ವಾಗಿ ನೆರವಾಗಿ, ಕ್ರೀಡೆಗೂ ಬೆಳಕಾಗಿ, ಪೋಷಕರ ಹೊಣೆಯನ್ನೇ ಹೊತ್ತು ಕೊಂಡಿದ್ದಾರೆಂದು ಸೌಮ್ಯಾ ಹೇಳುತ್ತಾರೆ. ಜೊತೆಗೆ ಇನ್ನೊಬ್ಬ ಕೋಚ್ ರೋಶನ್, ಪಿಸಿಐನ (ಭಾರ ತೀಯ ಪ್ಯಾರಾಲಿಂಪಿಕ್ ಸಮಿತಿ) ಸತ್ಯನಾರಾ ಯಣ್, ದಿವಾಕರ್ ಅವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇವರಿಗೆ ಕ್ರೀಡಾಪಟುವಾಗಬೇಕೆಂಬ ಉದ್ದೇಶವೇನು ಇದ್ದಂತಿರಲಿಲ್ಲ. ಆದರೆ ಇವರ ಬದುಕಿ ಗೊಂದು ಗುರಿಯನ್ನು ಕ್ರೀಡೆ ತಂದುಕೊಟ್ಟಿತು.
ಬರೀ 2 ವರ್ಷದ ಹಿಂದೆ ಶುರುವಾದ ಓಟ ಚಿನ್ನದ ಪದಕದವರೆಗೆ ಬಂದು ನಿಂತಿದೆ. ಪ್ರಸ್ತುತ ಇಂಡಿಯನ್ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದು ಇವರಿಗೆ ಮೊದಲ ಏಷ್ಯನ್ ಗೇಮ್ಸ್. ಇಲ್ಲೇ ಚಿನ್ನ ಗೆದ್ದಿದ್ದಾರೆ. ಮುಂದೆ ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಬೇಕೆಂಬ ಉದ್ದೇಶ ಹೊಂದಿದ್ದಾರೆ. ಸೌಮ್ಯಾ ಅವರಿಗೂ, ಅವರೊಂದಿಗೆ ಟಿಟ್ಟರ್ ಹಿಡಿದುಕೊಂಡು ಓಡಿ, ಮಾರ್ಗದರ್ಶನ ಮಾಡಿ, ಚಿನ್ನ ಗೆಲ್ಲಲು ನೆರವಾದ ಭರತ್ ಅವರಿಗೂ ವಿಶ್ವವಾಣಿಯಿಂದ ಅಭಿನಂದನೆ. ಅವರ ಪ್ಯಾರಾಲಿಂಪಿಕ್ಸ್ ಚಿನ್ನದ ಕನಸು ನನಸಾಗಲಿ. ಭಾರತದ ಕ್ರೀಡಾಭವಿಷ್ಯ ಭವ್ಯವಾಗಲಿ.
![]()
ನಾನು ಚಾಮರಾಜನಗರ ಜಿಲ್ಲೆಯವಳು. 2 ವರ್ಷದ ಹಿಂದೆ ಕ್ರೀಡಾಬದುಕು ಶುರುವಾಯಿತು. ಕೋಚ್ ವಿಕ್ರಮ್, ರೋಶನ್ ಅವರ ನೆರವಿನಿಂದ ಈ ಸಾಧನೆ ಸಾಧ್ಯವಾಯಿತು. ಮುಂದೆ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕನಸಿದೆ.
-ಸೌಮ್ಯಾ, ಚಿನ್ನ ವಿಜೇತೆ