ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೆಂಗ್‌ಸರ್ಕಾರ್ ವಿರುದ್ಧ 33.1 ಓವರ್‌ಗಳಲ್ಲೇ ಗುರಿ ತಲುಪಿದ ಕೆಐಒಸಿ: ಸೆಮೀಸ್ ಗೆ ಲಗ್ಗೆಯಿಟ್ಟ ಬೆಂಗಳೂರು

220 ರನ್‌ಗಳ ಗುರಿ ಬೆನ್ನಟ್ಟಿದ ಕೆಐಒಸಿಗೆ ಬ್ರಿಯಾನ್ ಥಾಮಸ್ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೇವಲ 99 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್‌ ಗಳೊಂದಿಗೆ 110 ರನ್ ಚಚ್ಚಿದ ಅವರು ತಂಡದ ಗೆಲುವನ್ನು ಬಹುತೇಕ ಖಚಿತಪಡಿಸಿದರು. ಭವಿತ್ 55 ಎಸೆತಗಳಲ್ಲಿ 47 ರನ್ ಗಳಿಸಿ ಉತ್ತಮ ಜೊತೆಯಾಟ ನೀಡಿದರು.

ಕಲಬುರಗಿ: ಬ್ರಿಯಾನ್ ಥಾಮಸ್ ಅವರ ಸ್ಫೋಟಕ ಶತಕದ ಬಲದಿಂದ ಕೆಐಒಸಿ ತಂಡವು ವೆಂಗ್‌ ಸರ್ಕಾರ್ ಕ್ರಿಕೆಟ್ ಅಕಾಡೆಮಿ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಂಗ್‌ಸರ್ಕಾರ್ ಅಕಾಡೆಮಿ 48.4 ಓವರ್‌ಗಳಲ್ಲಿ 219 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭಿಕ ಆರುಷ್ ಅಶುತೋಷ್ ಮಾಲ್ವಡೆ 20 ಎಸೆತಗಳಲ್ಲಿ 28 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಬಳಿಕ ನಾಯಕ ಅರುಣೋದಯ್ ಸಿಂಗ್ 64 ಎಸೆತ ಗಳಲ್ಲಿ 54 ಹಾಗೂ ಪ್ರಜ್ಯೋತ್ ಗುಂಡಾಳೆ 70 ಎಸೆತಗಳಲ್ಲಿ 53 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಗೌರವ್ ಮಿಸಾಲ್ 22 ಮತ್ತು ಆರ್ಯ ಕುಮಾವತ್ 21 ರನ್‌ಗಳ ಕೊಡುಗೆ ನೀಡಿದರು.

ಕೆಐಒಸಿ ಬೌಲರ್‌ಗಳ ಪೈಕಿ ವಿರೇನ್ ಸೀರ್ವಿ 44 ರನ್ ನೀಡಿ 3 ವಿಕೆಟ್ ಕಬಳಿಸಿದರು. ವಿವೇಕ್ ಸೀರ್ವಿ 35ಕ್ಕೆ 2, ಜಶ್ 34ಕ್ಕೆ 2 ಹಾಗೂ ಹನ್ನಾನ್ ಜಾಕಿ ಅಹ್ಮದ್ 44ಕ್ಕೆ 2 ವಿಕೆಟ್ ಪಡೆದರು. ನಾಯಕ ರೆಯೆಸ್ ರಾಜ್ ಮಧುಸೂದನ್ ಒಂದು ವಿಕೆಟ್ ಉರುಳಿಸಿದರು.

ಇದನ್ನೂ ಓದಿ: Kalaburagi Red Gram: ‘ಮಾಲ್ಡೀವ್ಸ್‌’ಗೂ ಹಾರಿದ ‘ಕಲಬುರಗಿ ತೊಗರಿ’: ಕಲ್ಯಾಣ ಕರ್ನಾಟಕದ ರೈತನ ಬೆಳೆಗೆ ವಿಶ್ವಮನ್ನಣೆ, ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ

220 ರನ್‌ಗಳ ಗುರಿ ಬೆನ್ನಟ್ಟಿದ ಕೆಐಒಸಿಗೆ ಬ್ರಿಯಾನ್ ಥಾಮಸ್ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೇವಲ 99 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್‌ ಗಳೊಂದಿಗೆ 110 ರನ್ ಚಚ್ಚಿದ ಅವರು ತಂಡದ ಗೆಲುವನ್ನು ಬಹುತೇಕ ಖಚಿತಪಡಿಸಿದರು. ಭವಿತ್ 55 ಎಸೆತಗಳಲ್ಲಿ 47 ರನ್ ಗಳಿಸಿ ಉತ್ತಮ ಜೊತೆಯಾಟ ನೀಡಿದರು.

ಕೊನೆಯಲ್ಲಿ ಸೂರ್ಯ ಮನೋಜ್ ಅಜೇಯ 25 ಹಾಗೂ ಆರಿನ್ ಸೇನ್ ಅಜೇಯ 14 ರನ್ ಗಳಿಸಿ ಕೆಐಒಸಿಯನ್ನು 33.1 ಓವರ್‌ಗಳಲ್ಲಿ 3 ವಿಕೆಟ್‌ಗೆ 220 ರನ್‌ಗಳ ಗುರಿ ತಲುಪಿಸಿದರು. ಶತಕದ ಅಮೋಘ ಇನ್ನಿಂಗ್ಸ್‌ಗಾಗಿ ಬ್ರಿಯಾನ್ ಥಾಮಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

KBN

ವಿಜಯ್ ಕುಮಾರ್ ಹಾಗೂ ಗೋವಿಂದ್ ಬಿ. ಕುಲಕರ್ಣಿ ಅಂಪೈರ್‌ಗಳಾಗಿ, ಉದಯ್‌ಕುಮಾರ್ ದಂಡೋತಿಕರ್ ಮೂರನೇ ಅಂಪೈರ್ ಆಗಿ ಹಾಗೂ ಸೊಹೈಲ್ ಮುನ್ಶಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದರು. ಮಲ್ಲಿಕಾರ್ಜುನ್ ವೀಕ್ಷಕ ವಿವರಣೆಗಾರರಾಗಿದ್ದು, ನಾಗೇಶ್ ಸುರೇಗಿಹಳ್ಳಿ ಮತ್ತು ಸಂಜೀವ್ ರಾಥೋಡ್ ಸ್ಕೋರರ್‌ಗಳಾಗಿ ಕರ್ತವ್ಯ ನಿರ್ವಹಿಸಿದರು.

ಬ್ರಿಯಾನ್ ಥಾಮಸ್ ಅಬ್ಬರ; ಗೆಲುವಿಗೆ ಬಲ

ಕೆಐಒಸಿ ಗೆಲುವಿನಲ್ಲಿ ಬ್ರಿಯಾನ್ ಥಾಮಸ್ ಪ್ರಮುಖ ಪಾತ್ರ ವಹಿಸಿದರು. 99 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 110 ರನ್ ಗಳಿಸಿದರು. ಆರಂಭ ದಿಂದಲೇ ಬೌಲರ್‌ಗಳ ಮೇಲೆ ಒತ್ತಡ ಹೇರಿದ ಬ್ರಿಯಾನ್, 220 ರನ್‌ಗಳ ಗುರಿಯನ್ನು ಸುಲಭ ಗೊಳಿಸಿದರು. ಶತಕದ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವವೂ ಒಲಿಯಿತು.

ವಿಕೆಟ್ ಕೀಪರ್ ಹೊರತುಪಡಿಸಿ ಎಲ್ಲರೂ ಬೌಲಿಂಗ್

ವೆಂಗ್‌ಸರ್ಕಾರ್ ಕ್ರಿಕೆಟ್ ಅಕಾಡೆಮಿ ಪಂದ್ಯದ ವೇಳೆ ವಿಭಿನ್ನ ಬೌಲಿಂಗ್ ಪ್ರಯೋಗ ನಡೆಸಿತು. ತಂಡದ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದ 10 ಆಟಗಾರರೂ ಒಂದಲ್ಲ ಒಂದು ಹಂತದಲ್ಲಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು. ಬೌಲಿಂಗ್‌ನಲ್ಲಿ ಹಲವು ಆಯ್ಕೆಗಳನ್ನು ಬಳಸಿದರೂ ಬ್ರಿಯಾನ್ ಥಾಮಸ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಪ್ರಜ್ಯೋತ್ ಗುಂಡಾಳೆ ಮತ್ತು ಆರುಷ್ ಮಾಲ್ವಡೆ ತಲಾ ಒಂದು ವಿಕೆಟ್ ಪಡೆದರು.