ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Navgire: ಟಿ20ಯಲ್ಲಿ ವಿಶ್ವ ದಾಖಲೆಯ ಶತಕ ಬಾರಿಸಿದ ಕಿರಣ್ ನವಗಿರೆ

2022 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಕೊನೆಯ ಬಾರಿಗೆ ಆಡಿದ ನಂತರ, ಅವರು ರಾಷ್ಟ್ರೀಯ ತಂಡಕ್ಕೆ ಮರಳಿಲ್ಲ. ಆರು ಟಿ20 ಗಳನ್ನು ಆಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ, ಅವರು ಯುಪಿ ವಾರಿಯರ್ಸ್‌ ತಂಡದಲ್ಲಿ ಸ್ಥಿರ ಆಟಗಾರ್ತಿಯಾಗಿದ್ದಾರೆ. ಮೂರು ಋತುಗಳಲ್ಲಿ, ಅವರು 24 ಇನ್ನಿಂಗ್ಸ್‌ಗಳಲ್ಲಿ 140.13 ಸ್ಟ್ರೈಕ್ ರೇಟ್‌ನಲ್ಲಿ 419 ರನ್ ಗಳಿಸಿದ್ದಾರೆ.

ನಾಗ್ಪುರ: ಮಹಾರಾಷ್ಟ್ರ ಮತ್ತು ನಾಗ್ಪುರ ನಡುವಿನ ಸೀನಿಯರ್ ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ(women's cricket) 34 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಕಿರಣ್ ನವಗಿರೆ (Kiran Navgire) ಅವರು ಟಿ20 ಇತಿಹಾಸದಲ್ಲಿ(fastest T20 century) ಅತ್ಯಂತ ವೇಗದ ಶತಕದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಆರಂಭಿಕ ಆಟಗಾರ್ತಿ ʼಎಸೆತಗಳಲ್ಲಿ 106 ರನ್ ಗಳಿಸಿರು.

ನವಗಿರೆ ಅವರ ಸ್ಫೋಟಕ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಏಳು ಸಿಕ್ಸರ್‌ಗಳು ಸಿಡಿಯಿತು. ನ್ಯೂಜಿಲ್ಯಾಂಡ್‌ನ ಸೋಫಿ ಡಿವೈನ್ ಅವರು ಮೂರು ವರ್ಷಗಳ(2021) ಹಿಂದೆ ಒಟಾಗೋ ವಿರುದ್ಧ ವೆಲ್ಲಿಂಗ್ಟನ್ ಪರ 36 ಎಸೆತಗಳಲ್ಲಿ ಶತಕ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆ ಪತನಗೊಂಡಿದೆ.

ನವಗಿರೆ ಅವರ ಶತಕದ ನೆರವಿನಿಂದ ಮಹಾರಾಷ್ಟ್ರ ತಂಡವು ಕೇವಲ ಎಂಟು ಓವರ್‌ಗಳಲ್ಲಿ 111 ರನ್‌ಗಳ ಗುರಿಯನ್ನು ಬೆನ್ನಟ್ಟಿ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು. ತನ್ನ ಇನ್ನಿಂಗ್ಸ್‌ನಲ್ಲಿ, ಬಲಗೈ ಬ್ಯಾಟ್ಸ್‌ಮನ್ 302.86 ಸ್ಟ್ರೈಕ್-ರೇಟ್‌ನಲ್ಲಿ ಬ್ಯಾಟ್‌ ಬೀಸಿದರು. ಇದೇ ವೇಳೆ 300 ಕ್ಕಿಂತ ಹೆಚ್ಚು ಸ್ಟ್ರೈಕ್-ರೇಟ್‌ನಲ್ಲಿ ಶತಕ ಗಳಿಸಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಕ್ತಾ ಮಾಗ್ರೆ ಅವರೊಂದಿಗೆ ಎರಡನೇ ವಿಕೆಟ್‌ಗೆ ಅಜೇಯ 103 ರನ್‌ಗಳ ಪಾಲುದಾರಿಕೆಯಲ್ಲಿ ಭಾಗಿಯಾದರು.

ಇದನ್ನೂ ಓದಿ Pak air strike: ಪಾಕ್ ವೈಮಾನಿಕ ದಾಳಿ; ಮೂವರು ಅಫ್ಘಾನ್ ಕ್ರಿಕೆಟಿಗರು ಬಲಿ

ಸೋಲಾಪುರ ಜಿಲ್ಲೆಯ ಮಿರೆ ಮೂಲದ ನವಗಿರೆ, 2022 ರ ಮಹಿಳಾ ಟಿ 20 ಟ್ರೋಫಿಯ ಸಮಯದಲ್ಲಿ ಮೊದಲು ಸುದ್ದಿಯಾದರು. ನಾಗಾಲ್ಯಾಂಡ್ ತಂಡವನ್ನು ಪ್ರತಿನಿಧಿಸುವ ಅವರು, ಟೂರ್ನಮೆಂಟ್‌ನಲ್ಲಿ 35 ಸಿಕ್ಸರ್‌ಗಳನ್ನು ಬಾರಿಸಿದರು ಮತ್ತು ಅರುಣಾಚಲ ಪ್ರದೇಶ ವಿರುದ್ಧ 76 ಎಸೆತಗಳಲ್ಲಿ 162 ರನ್‌ಗಳನ್ನು ಸಿಡಿಸುವ ಮೂಲಕ ಟಿ 20 ಪಂದ್ಯದಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2022 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಕೊನೆಯ ಬಾರಿಗೆ ಆಡಿದ ನಂತರ, ಅವರು ರಾಷ್ಟ್ರೀಯ ತಂಡಕ್ಕೆ ಮರಳಿಲ್ಲ. ಆರು ಟಿ20 ಗಳನ್ನು ಆಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ, ಅವರು ಯುಪಿ ವಾರಿಯರ್ಸ್‌ ತಂಡದಲ್ಲಿ ಸ್ಥಿರ ಆಟಗಾರ್ತಿಯಾಗಿದ್ದಾರೆ. ಮೂರು ಋತುಗಳಲ್ಲಿ, ಅವರು 24 ಇನ್ನಿಂಗ್ಸ್‌ಗಳಲ್ಲಿ 140.13 ಸ್ಟ್ರೈಕ್ ರೇಟ್‌ನಲ್ಲಿ 419 ರನ್ ಗಳಿಸಿದ್ದಾರೆ.