ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಕಾಶ್‌ದೀಪ್‌ ಬದಲು ಕೆಕೆಆರ್‌ ಸೇರಿದ ಸೌರಭ್‌ ದುಬೆ

IPL 2026: 28 ವರ್ಷದ ಸೌರಭ್‌ ದುಬೆ, ಕೊನೆಯ ಬಾರಿಗೆ 2023–24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವಿದರ್ಭ ಪರ ಆಡಿದ್ದರು. ಅದಕ್ಕೂ ಮೊದಲು, ಅವರು 2020–21ರ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜ್ಯಕ್ಕಾಗಿ ನಾಲ್ಕು ಪಂದ್ಯಗಳಲ್ಲಿ ಆಡಿದ್ದರು.

Saurabh Dubey

ಕೋಲ್ಕತಾ, ಮಾ.23: ಇಂಡಿಯನ್ ಪ್ರೀಮಿಯರ್ ಲೀಗ್ 2026ರ(IPL 2026) ಆವೃತ್ತಿಯಿಂದ ಹೊರಬಿದ್ದ ಭಾರತದ ವೇಗಿ ಆಕಾಶ್‌ದೀಪ್‌(Akash Deep) ಸಿಂಗ್‌ ಬದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡ ವಿದರ್ಭದ ಎಡಗೈ ವೇಗಿ ಸೌರಭ್ ದುಬೆ ಅವರನ್ನು ಹೆಸರಿಸಿದೆ. ಆಕಾಶ್‌ ದೀಪ್ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಾಗ್ಯೂ, ಅವರ ಗಾಯದ ನಿಖರ ಸ್ವರೂಪ ತಿಳಿದಿಲ್ಲ.

ದುಬೆ ಇನ್ನೂ ಐಪಿಎಲ್‌ಗೆ ಪದಾರ್ಪಣೆ ಮಾಡಿಲ್ಲ. ಐಪಿಎಲ್ 2026 ರ ಮಿನಿ-ಹರಾಜಿನಲ್ಲಿ ದುಬೆ ಮಾರಾಟವಾಗಲಿಲ್ಲ. ಅವರನ್ನು 2022 ರಲ್ಲಿ ಎಸ್‌ಆರ್‌ಹೆಚ್ ಆಯ್ಕೆ ಮಾಡಿತ್ತು. ಆದರೆ ಗಾಯದಿಂದಾಗಿ ಅವರ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಚೊಚ್ಚಲ ಐಪಿಎಲ್‌ ಆಡುವ ನಿರೀಕ್ಷೆಯಲ್ಲಿದ್ದಾರೆ.

"ಸೌರಭ್‌ ತುಂಬಾ ಪ್ರತಿಭಾನ್ವಿತ ಎಡಗೈ ವೇಗದ ಬೌಲರ್. 2019 ರ ಎಸಿಸಿ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ತಂಡದ ಭಾಗವಾಗಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ವಿಕೆಟ್‌ನಿಂದ ಹೆಚ್ಚುವರಿ ಬೌನ್ಸ್ ಪಡೆಯುತ್ತಾರೆ ಮತ್ತು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ನೈಟ್ ರೈಡರ್ಸ್ ಮ್ಯಾನೇಜ್‌ಮೆಂಟ್‌ನಿಂದ ಇದು ಉತ್ತಮ ಆಯ್ಕೆಯಾಗಿದೆ" ಎಂದು ದುಬೆ ಅವರೊಂದಿಗೆ ಕೆಲಸ ಮಾಡಿದ ಸುಬ್ರೋಟೊ ಬ್ಯಾನರ್ಜಿ ಹೇಳಿದರು.

ಏತನ್ಮಧ್ಯೆ, ಕೆಕೆಆರ್ ಗಾಯದ ಸಮಸ್ಯೆಗಳಿಂದ ಬಳಲುತ್ತಿದೆ. ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಆದರೆ ರಾಣಾ ಅವರ ಬದಲಿಗೆ ಫ್ರಾಂಚೈಸಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಸಿಎಸ್‌ಕೆ ಕ್ಯಾಂಪ್‌ ಸೇರಿದ ಸಂಜು ಸ್ಯಾಮ್ಸನ್‌, ಶಿವಂ ದುಬೆಗೆ ಧೋನಿ ವಿಶೇಷ ಸನ್ಮಾನ

ಸೌರಭ್‌, ಕೊನೆಯ ಬಾರಿಗೆ 2023–24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವಿದರ್ಭ ಪರ ಆಡಿದ್ದರು. ಅದಕ್ಕೂ ಮೊದಲು, ಅವರು 2020–21ರ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜ್ಯಕ್ಕಾಗಿ ನಾಲ್ಕು ಪಂದ್ಯಗಳಲ್ಲಿ ಆಡಿದ್ದರು.

ಐಪಿಎಲ್ ವೇಳಾಪಟ್ಟಿಯ ಉಳಿದ ಭಾಗವನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳಿಗೆ ತಿಳಿಸಿದೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗಳಿಂದಾಗಿ ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸಲಾಗಿಲ್ಲ. ಚುನಾವಣಾ ದಿನಾಂಕಗಳನ್ನು ಈಗ ಘೋಷಿಸಿರುವುದರಿಂದ, ಬಿಸಿಸಿಐ ಪೂರ್ಣ ವೇಳಾಪಟ್ಟಿಯನ್ನು ಘೋಷಿಸುವ ಕೆಲಸ ಮಾಡುತ್ತಿದೆ.