ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KKR Vs MI: ಕೆಕೆಆರ್‌ ಪ್ಲೇ-ಆಫ್‌ ಭವಿಷ್ಯದ ಪಂದ್ಯಕ್ಕೆ ಭಾರೀ ಮಳೆ ಭೀತಿ!

IPL 2025: ಇಂದು(ಬುಧವಾರ) ಕೆಕೆಆರ್‌ ಗೆದ್ದರೂ ಶನಿವಾರ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತರೆ ಮಾತ್ರ ಕೆಕೆಆರ್ ತಂಡದ ಅವಕಾಶ ಜೀವಂತವಿರಲಿದೆ. ಪಿಬಿಕೆಎಸ್ ಗೆದ್ದರೆ, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೆಕೆಆರ್ ತಂಡದ ಅಂತಿಮ ಲೀಗ್ ಪಂದ್ಯ ಅಪ್ರಸ್ತುತವಾಗುತ್ತದೆ.

kkr vs mi

ಕೋಲ್ಕತಾ, ಮೇ 17: ಪ್ಲೇ-ಆಫ್‌ ಪ್ರವೇಶಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR vs MI) ತಂಡವು ಇಂದು ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನಲ್ಲಿ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು ಅಜಿಂಕ್ಯ ರಹಾನೆ ಪಡೆಗೆ ಭಾರೀ ಆತಂಕ ಉಂಟು ಮಾಡಿದೆ.

ಭಾರೀ ಮಳೆ ಸಾಧ್ಯತೆ

ಹಾಲಿ ಆವೃತ್ತಿಯಲ್ಲಿ ಈಡನ್‌ ಗಾರ್ಡನ್ಸ್‌ನಲ್ಲಿ ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇದೀಗ ಬುಧವಾರದ ಪಂದ್ಯಕ್ಕೂ ಹವಾಮಾನ ಇಲಾಖೆ ಮಳೆಯ ಎಚ್ಚರಿಕೆ ನೀಡಿದೆ. ಪಂದ್ಯದ ವೇಳೆ ಶೇ.40 ರಿಂದ 50 ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಕೆಕೆಆರ್‌ ಟೂರ್ನಿಯಿಂದ ಹೊರಬೀಳಲಿದೆ. ಅಂತಿಮ ಪಂದ್ಯ ಗೆದ್ದರೂ ಯಾವುದೇ ಪ್ರಯೋಜನವಿಲ್ಲ.

ಇಂದು ಕೆಕೆಆರ್‌ ಗೆದ್ದರೂ ಶನಿವಾರ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತರೆ ಮಾತ್ರ ಕೆಕೆಆರ್ ತಂಡದ ಅವಕಾಶ ಜೀವಂತವಿರಲಿದೆ. ಪಿಬಿಕೆಎಸ್ ಗೆದ್ದರೆ, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೆಕೆಆರ್ ತಂಡದ ಅಂತಿಮ ಲೀಗ್ ಪಂದ್ಯ ಅಪ್ರಸ್ತುತವಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದು, ಎಲ್‌ಎಸ್‌ಜಿ ಮತ್ತು ಮುಂಬೈ ತಂಡಗಳು ಹೊರಬಿದ್ದಿವೆ. ಪಂಜಾಬ್ ಕಿಂಗ್ಸ್ (13 ಅಂಕಗಳು), ರಾಜಸ್ಥಾನ ರಾಯಲ್ಸ್ (12), ಚೆನ್ನೈ ಸೂಪರ್ ಕಿಂಗ್ಸ್ (12), ದೆಹಲಿ ಕ್ಯಾಪಿಟಲ್ಸ್ (12) ಮತ್ತು ಕೆಕೆಆರ್ (11) ಅಂತಿಮ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ.

'ಈಗ ನಿಮ್ಮ ಚೀಟಿ ಎಲ್ಲಿದೆ?'; ವೇಗಿ ಆಕಾಶ್ ಸಿಂಗ್ ಟ್ರೋಲ್‌ ಮಾಡಿದ ಸುನಿಲ್‌ ಗವಾಸ್ಕರ್‌

ಸದ್ಯ ಕೆಕೆಆರ್‌ ಪ್ರದರ್ಶನ ನೋಡುವಾಗ ತಂಡ ಬಲಿಷ್ಠವಾಗಿದೆ. ಯುವ ಬ್ಯಾಟರ್‌ ರಘುವಂಶಿ ಮತ್ತು ನ್ಯೂಜಿಲ್ಯಾಂಡ್‌ನ ಫಿನ್‌ ಅಲೆನ್‌ ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಇವರ ಬ್ಯಾಟಿಂಗ್‌ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ಕೆಕೆಆರ್ ತಂಡವು ವರುಣ್ ಚಕ್ರವರ್ತಿ ಮತ್ತು ಮಥೀಷ ಪತಿರಾನ ಅವರ ಗಾಯದ ಚಿಂತೆಯನ್ನು ಎದುರಿಸುತ್ತಿದೆ. ಏತನ್ಮಧ್ಯೆ, ಮುಂಬೈ ತಂಡವು ನಿರಾಶಾದಾಯಕ ಋತುವನ್ನು ಬಲವಾಗಿ ಮುಗಿಸುವ ಗುರಿಯನ್ನು ಹೊಂದಿದೆ, ಹಾರ್ದಿಕ್ ಪಾಂಡ್ಯ ಗಾಯದ ನಂತರ ಮರಳುವ ನಿರೀಕ್ಷೆಯಿದೆ.

ಕೆಕೆಆರ್ vs ಮುಂಬೈ ಐಪಿಎಲ್‌ ಮುಖಾಮುಖಿ

ಆಡಿರುವ ಪಂದ್ಯಗಳು: 36

ಕೆಕೆಆರ್ ಗೆಲುವು: 11

ಮುಂಬೈ ಗೆಲುವು: 25

ಉಭಯ ಸಂಭಾವ್ಯ ತಂಡಗಳು

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI: ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಆಂಗ್ಕ್ರಿಶ್ ರಘುವಂಶಿ (ವಿ.ಕೀ.), ಕ್ಯಾಮೆರಾನ್ ಗ್ರೀನ್, ಮನೀಶ್ ಪಾಂಡೆ, ರಿಂಕು ಸಿಂಗ್, ಸುನಿಲ್ ನರೈನ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ಸೌರಭ್ ದುಬೆ, ಕಾರ್ತಿಕ್ ತ್ಯಾಗಿ.

ಮುಂಬೈ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿ.ಕೀ.), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್.