ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KKR vs RR: ‌ರಿಂಕು ಅರ್ಧಶತಕ; ಗೆಲುವಿನ ಖಾತೆ ತೆರೆದ ಕೆಕೆಆರ್

IPL 2026: ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಆಯ್ಕೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲವಾಗಿ ನಿಗದಿತ 20 ಓವರ್‌ಗಳಲ್ಲಿ 155 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್‌ ಕೂಡ ನಾಟಕೀಯ ಕುಸಿತದ ಹೊರತಾಗಿಯೂ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್‌ ಬಾರಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿತು.

Rinku Singh

ಕೋಲ್ಕತಾ, ಎ.19: ಸತತ ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್‌ ರೈಡರ್ಸ್‌(KKR vs RR) ತಂಡ ಕೊನೆಗೂ ಹಾಲಿ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನಲ್ಲಿ ಗೆಲುವಿನ ಖಾತೆ ತೆರೆದಿದೆ. ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 4 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಈ ಮೂಲಕ ಪ್ಲೇ ಆಫ್‌ ರೇಸ್‌ ಜೀವಂತವಿರಿಸಿತು.

ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಆಯ್ಕೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ನಿಗದಿತ 20 ಓವರ್‌ಗಳಲ್ಲಿ 155 ರನ್‌ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಕೆಕೆಆರ್‌ ಕೂಡ ನಾಟಕೀಯ ಕುಸಿತದ ಹೊರತಾಗಿಯೂ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್‌ ಬಾರಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿತು.

ರಿಂಕು-ಅನುಕುಲ್‌ ಆಸರೆ

ಚೇಸಿಂಗ್‌ ವೇಳೆ ಕೆಕೆಆರ್‌ ಆರಂಭಿಕರಾದ ಟಿಮ್‌ ಸಿಫರ್ಟ್‌ ಮತ್ತು ನಾಯಕ ಅಜಿಂಕ್ಯ ರಹಾನೆ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. 85 ರನ್‌ ಗಳಿಸಿದ ವೇಳೆ 6 ವಿಕೆಟ್‌ ಕಳೆದುಕೊಂಡು ಈ ಪಂದ್ಯದಲ್ಲಿಯೂ ಸೋಲು ಕಾಣಲಿದೆ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹಾಲಿ ಆವೃತ್ತಿಯಲ್ಲಿ ಬ್ಯಾಟಿಂಗ್‌ ಬರ ಅನುಭವಿಸಿದ್ದ ರಿಂಕು ಸಿಂಗ್‌ ಈ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

SRH vs CSK: ನಿಂಬೆ ಹಣ್ಣು ಮಂತ್ರಿಸಿ ಶಿವಂ ದುಬೆ ವಿಕೆಟ್‌ ಪತನಗೊಳಿಸಿದ ಸನ್‌ರೈಸರ್ಸ್‌ ಅಭಿಮಾನಿ; ವಿಡಿಯೊ ವೈರಲ್‌

6ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ರಿಂಕು ಅಜೇಯ ಅರ್ಧಶತಕ ಬಾರಿಸಿದರು. 34 ಎಸೆತಗಳಿಂದ 53 ರನ್‌ ಗಳಿಸಿದರು. ಇವರಿಗೆ ಸಾಥ್‌ ನೀಡಿದ ಅನುಕುಲ್‌ ರಾಯ್‌ ಅಜೇಯ 29 ರನ್‌ ಬಾರಿಸಿದರು. ಈ ಜೋಡಿ ಮುರಿಯದ 7ನೇ ವಿಕೆಟ್‌ಗೆ 76 ರನ್‌ಗಳ ಜತೆಯಾಟ ನಡೆಸಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕ್ಯಾಮರೂನ್‌ ಗ್ರೀನ್‌ 27, ಪೋವೆಲ್‌ 23 ರನ್‌ ಗಳಿಸಿದರು. ರಾಜಸ್ಥಾನ್‌ ಪರ ರವೀಂದ್ರ ಜಡೇಜಾ 8 ರನ್‌ಗೆ 2 ವಿಕೆಟ್‌ ಕಿತ್ತರು.



ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ಪರ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌ ಮತ್ತು ವೈಭವ್‌ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 81 ರನ್‌ ಒಟ್ಟುಗೂಡಿಸಿತು. ಉತ್ತಮ ಸ್ಥಿತಿಯಲ್ಲಿದ್ದ ತಂಡ ಉಭಯ ಆಟಗಾರರ ವಿಕೆಟ್‌ ಪತನದ ಬಳಿಕ ದಿಢೀರ್‌ ಕುಸಿತ ಕಂಡಿತು. ಆ ಬಳಿಕ ಯಾವುದೇ ಹಂತದಲ್ಲಿಯೂ ಚೇತರಿಕೆ ಕಾಣಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಜೈಸ್ವಾಲ್‌ 39 ರನ್‌ ಗಳಿಸಿದರೆ, ವೈಭವ್‌ ಸೂರ್ಯವಂಶಿ 46 ರನ್‌ ಬಾರಿಸಿದರು.