ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್‌ ಸ್ಫೋಟಕ ಬ್ಯಾಟಿಂಗ್‌ ಕಂಡು ದಂಗಾದ ಕೋಚ್ ಗೌತಮ್ ಗಂಭೀರ್

ಕೊನೆಯ ತನಕ ಬ್ಯಾಟಿಂಗ್‌ ನಡೆಸಿದ ನಾಯಕ ಶುಭಮನ್‌ ಗಿಲ್‌ 66 ಎಸೆತಕ್ಕೆ ಔಟಾಗದೆ 84 ರನ್‌ ಸಿಡಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 2ನೇ ಅತಿ ವೇಗವಾಗಿ 3000 ರನ್‌ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ಶುಭ್‌ಮನ್‌ ಗಿಲ್‌ ತಮ್ಮ ಹೆಸರಿಗೆ ಬರೆದುಕೊಂಡರು.

Gautam Gambhir in Disbelief

ಧರ್ಮಶಾಲಾ, ಜೂ.14: ಶನಿವಾರ ರಾತ್ರಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ ಅಂತರದ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಕೆ.ಎಲ್ ರಾಹುಲ್(KL Rahul) 19 ಎಸೆತಗಳಲ್ಲಿ 39 ರನ್ ಗಳಿಸಿದರು. ರಾಹುಲ್‌ ಅವರ ಟಿ20 ಶೈಲಿಯಲ್ಲಿ ಬ್ಯಾಟಿಂಗ್‌ ಕಂಡು ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir in Disbelief) ಮತ್ತು ತಂಡದ ಇತರ ಸಿಬ್ಬಂದಿಗಳು ದಂಗಾದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಳೆಯಿಂದಾಗಿ ಪಂದ್ಯವನ್ನು ತಲಾ 25 ಓವರ್‌ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 24.5 ಓವರ್‌ಗಳಲ್ಲಿ 194 ರನ್‌ಗೆ ಆಲೌಟಾಯಿತು. ಆರಂಭಿಕ ಆಟಗಾರ ರಹ್ಮಾನುಲ್ಲಾ ಗುರ್ಬಾಜ್‌ ಕೇವಲ 51 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್‌ನೊಂದಿಗೆ 102 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 22.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಗೆಲುವಿನ ದಡ ಸೇರಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ರಾಹುಲ್‌ 3 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿದರು.



ಕೊನೆಯ ತನಕ ಬ್ಯಾಟಿಂಗ್‌ ನಡೆಸಿದ ನಾಯಕ ಶುಭಮನ್‌ ಗಿಲ್‌ 66 ಎಸೆತಕ್ಕೆ ಔಟಾಗದೆ 84 ರನ್‌ ಸಿಡಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 2ನೇ ಅತಿ ವೇಗವಾಗಿ 3000 ರನ್‌ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ಶುಭ್‌ಮನ್‌ ಗಿಲ್‌ ತಮ್ಮ ಹೆಸರಿಗೆ ಬರೆದುಕೊಂಡರು.

IND vs AFG: ರೋಹಿತ್‌ ರನೌಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಯಕ ಗಿಲ್‌

16 ರನ್ ಗಳಿಸಿದ ರೋಹಿತ್, ಈಗ ಭಾರತದ ಪರ ಆರಂಭಿಕ ಆಟಗಾರನಾಗಿ 359 ಪಂದ್ಯಗಳಲ್ಲಿ 384 ಇನ್ನಿಂಗ್ಸ್‌ಗಳಲ್ಲಿ 16,010 ರನ್ ಗಳಿಸಿದ್ದಾರೆ. ಭಾರತ ಪರ ಆರಂಭಿಕನಾಗಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ, ರೋಹಿತ್ ನಂತರ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಇದ್ದಾರೆ. ಭಾರತದ ಪರ ಆರಂಭಿಕನಾಗಿ ಸೆಹ್ವಾಗ್ 321 ಪಂದ್ಯಗಳ 388 ಇನ್ನಿಂಗ್ಸ್‌ಗಳಲ್ಲಿ 15,758 ರನ್ ಗಳಿಸಿದ್ದಾರೆ, ಸಚಿನ್ 346 ಪಂದ್ಯಗಳಲ್ಲಿ 342 ಇನ್ನಿಂಗ್ಸ್‌ಗಳಲ್ಲಿ 15,335 ರನ್ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು

ಅಫ್ಗಾನಿಸ್ತಾನ: 24.5 ಓವರ್‌ಗಳಲ್ಲಿ 194 (ರೆಹಮಾನುಲ್ಲಾ ಗುರ್ಬಾಜ್ 102, ಹಷ್ಮತ್‌ವುಲ್ಲಾ ಶಹೀದಿ 27, ಅಜ್ಮತ್‌ಉಲ್ಲಾ ಒಮರ್‌ಜೈ 26; ಅರ್ಷದೀಪ್‌ ಸಿಂಗ್‌ 27ಕ್ಕೆ 2, ಗುರ್ನೂರ್‌ ಬ್ರಾರ್‌ 27ಕ್ಕೆ 3, ಹರ್ಷ್‌ ದುಬೆ 47ಕ್ಕೆ 3, ನಿತೀಶ್‌ ಕುಮಾರ್‌ ರೆಡ್ಡಿ 31ಕ್ಕೆ 2). ಭಾರತ: 22.5 ಓವರ್‌ಗಳಲ್ಲಿ 3 ವಿಕೆಟ್‌ಗೆ 195 (ಶುಭಮನ್‌ ಗಿಲ್‌ ಔಟಾಗದೇ 84, ಇಶಾನ್‌ ಕಿಶನ್‌ 34, ಕೆ.ಎಲ್‌.ರಾಹುಲ್‌ ಔಟಾಗದೇ 39).