ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಸತತ 6 ಸೋಲಿನೊಂದಿಗೆ ಆರ್‌ಸಿಬಿ, ಮುಂಬೈ ಜತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಕೆಕೆಆರ್‌

Gujarat Titans vs Kolkata Knight Riders: ಮೂರು ಬಾರಿಯ ಚಾಂಪಿಯನ್‌ ಕೆಕೆಆರ್‌ ತನ್ನ ಕಳಪೆ ಆಟದಿಂದಾಗಿ ಅಂಕಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಮುಂದಿನ 8 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದರಷ್ಟೇ ಕೆಕೆಆರ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶ ಇರಲಿದೆ. ಇನ್ನೆಡರು ಪಂದ್ಯ ಸೋತರೆ ತಂಡ ಲೀಗ್‌ ಹಂತದಲ್ಲೇ ಬಹುತೇಕ ಹೊರಬೀಳಲಿದೆ.

Ajinkya Rahane and Varun Chakaravarthy

ಅಹಮದಾಬಾದ್‌, ಎ.18: 2026 ರ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)(IPL 2026) ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌(Kolkata Knight Riders)ನ ಕಳಪೆ ಪ್ರದರ್ಶನ ಮುಂದುವರೆದಿದೆ. ಪಂದ್ಯಾವಳಿಯಲ್ಲಿ ಆರು ಪಂದ್ಯಗಳನ್ನು ಆಡಿರುವ ಕೆಕೆಆರ್ ಐದು ಪಂದ್ಯಗಳನ್ನು ಸೋತಿದೆ ಮತ್ತು ಒಂದು ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಒಂದು ಅಂಕ ಪಡೆದಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡ ಕೋಲ್ಕತಾ, ಐಪಿಎಲ್ ಋತುವಿನ ಮೊದಲ ಆರು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಜತೆ ಸೇರಿಕೊಂಡಿತು.

ಮೂರು ಬಾರಿಯ ಚಾಂಪಿಯನ್‌ ಕೆಕೆಆರ್‌ ತನ್ನ ಕಳಪೆ ಆಟದಿಂದಾಗಿ ಅಂಕಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಮುಂದಿನ 8 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದರಷ್ಟೇ ಕೆಕೆಆರ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶ ಇರಲಿದೆ. ಇನ್ನೆಡರು ಪಂದ್ಯ ಸೋತರೆ ತಂಡ ಲೀಗ್‌ ಹಂತದಲ್ಲೇ ಬಹುತೇಕ ಹೊರಬೀಳಲಿದೆ.

ಐಪಿಎಲ್ ಋತುವಿನ ಮೊದಲ 6 ಪಂದ್ಯಗಳಲ್ಲಿ ಸೋಲು ಕಂಡ ತಂಡಗಳು

2012 ರಲ್ಲಿ ಡೆಕ್ಕನ್ ಚಾರ್ಜಸ್‌

2013 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌(ಈಗ ಡೆಲ್ಲಿ ಕ್ಯಾಪಿಟಲ್ಸ್‌)

2019 ರಲ್ಲಿ ಆರ್‌ಸಿಬಿ

2022 ರಲ್ಲಿ ಮುಂಬೈ

2026 ರಲ್ಲಿ ಕೆಕೆಆರ್

KKR vs GT: ಗುಜರಾತ್‌ ವಿರುದ್ಧ ಗ್ರೀನ್‌ಗೆ ಅಂತಿಮ ಓವರ್‌ ನೀಡದ ಬಗ್ಗೆ ಸ್ಪಷ್ಟನೆ ನೀಡಿದ ರಹಾನೆ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಏಕಾಂಗಿ ಹೋರಾಟ (79 ರನ್, 46 ಎಸೆತ, 7 ಬೌಂಡರಿ, 4 ಸಿಕ್ಸರ್)ದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 180 ರನ್‌ ಬಾರಿಸಿತು.

ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.4 ಓವರ್‌ ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು. ಗುಜರಾತ್‌ ಪರ ನಾಯಕ ಗಿಲ್‌ 86 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ ದಕ್ಷಿಣ ಆಫ್ರೀಕಾದ ವೇಗಿ ಕಗಿಸೊ ರಬಾಡ 3 ವಿಕೆಟ್‌ ಕಿತ್ತರು.

ಕೊನೆಯ ಓವರ್‌ನಲ್ಲಿ, ಗುಜರಾತ್‌ ಗೆಲುವಿಗೆ ಐದು ರನ್‌ಗಳು ಬೇಕಾಗಿದ್ದಾಗ, ಗ್ಲೆನ್ ಫಿಲಿಪ್ಸ್(19) ಔಟಾದರು. ಆದರೆ ನಂತರ ಬಂದ ಶಾರುಖ್ ಖಾನ್ ಮತ್ತು ತೆವಾಟಿಯಾ ಪಂದ್ಯವನ್ನು ಗೆಲ್ಲಿಸಿದರು.ತೆವಾಟಿಯಾ 7 ರನ್ ಗಳಿಸಿದರೆ ಶಾರುಖ್ 3 ರನ್ ಗಳಿಸಿ ಜಯ ಸಾಧಿಸಿದರು. ಗುಜರಾತ್​ ತಂಡ 19.4ನೇ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು.