ಅಹಮದಾಬಾದ್, ಜೂ.1: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಐಪಿಎಲ್(IPL 2026 Final) ಟೂರ್ನಿಯಲ್ಲಿ ಸತತ ಎರಡನೇ ಕಪ್ ಗೆದ್ದಿದೆ. ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ ಈ ಸಾಧನೆಗೈದಿತು. ಆದರೆ ಕೃನಾಲ್ ಪಾಂಡ್ಯ(Krunal Pandya) ವೈಯಕ್ತಿಕವಾಗಿ 5ಟ್ರೋಫಿ ಗೆದ್ದ ಸಾಧನೆ ಮಾಡಿದರು.
ಐಪಿಎಲ್ನಲ್ಲಿ 5 ಟ್ರೋಫಿ ಗೆದ್ದ ಎಂಎಸ್ ಧೋನಿಯ ಸಾಧನೆಯನ್ನು ಕೃನಾಲ್ ಸರಿಗಟ್ಟಿದರು. 2017, 2019, 2020ರಲ್ಲಿ ಮುಂಬೈ ಪರ ಟ್ರೋಫಿ ಗೆದ್ದಿದ್ದ ಅವರು, ಇದೀಗ ಆರ್‌ಸಿಬಿ ಪರ ಎರಡನೇ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ಅಲ್ಲದೆ, ಕೃನಾಲ್ ಪಾಂಡ್ಯ ಆಡಿದ 5 ಫೈನಲ್ನಲ್ಲೂ ಗೆದ್ದ ತಂಡದ ಭಾಗವಾಗಿರುವ ಅಜೇಯ ದಾಖಲೆ ನಿರ್ಮಿಸಿದರು. ರೋಹಿತ್ ಶರ್ಮ 6 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವುದು ದಾಖಲೆಯಾಗಿದೆ.
5ನೇ ಟ್ರೋಫಿ ಗೆದ್ದ ಖಷಿಯಲ್ಲಿ ಕೃನಾಲ್ ಪಾಂಡ್ಯ ಟ್ರೋಫಿಯನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿದಾಡಿದ ವಿಡಿಯೊವನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಋತುವಿನಲ್ಲಿ 16 ಪಂದ್ಯಗಳಲ್ಲಿ, ಕೃನಾಲ್ ಒಂಬತ್ತು ಇನಿಂಗ್ಸ್‌ನಿಂದ 37.66 ಸರಾಸರಿ ಮತ್ತು 145.80 ಸ್ಟ್ರೈಕ್ ರೇಟ್‌ನೊಂದಿಗೆ 226 ರನ್ ಗಳಿಸಿದರು. ಇದರಲ್ಲೊಂದು ಅರ್ಧಶತಕ ಕೂಡ ಬಾರಿಸಿದಾರೆ. 73 ಅತ್ಯುತ್ತಮ ಸ್ಕೋರ್. ಅವರು 30.55 ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕೂಡ ಪಡೆದರು. 2/16 ಅತ್ಯುತ್ತಮ ಪ್ರದರ್ಶನ ನೀಡಿದರು. ಫೈನಲ್‌ನಲ್ಲಿ, ಅವರು ನಾಲ್ಕು ಓವರ್‌ಗಳಲ್ಲಿ 1/23 ಎಕನಾಮಿಕಲ್ ಸ್ಪೆಲ್ ಬೌಲಿಂಗ್ ಮಾಡಿದರು.
ಪಂದ್ಯದ ನಂತರ ಮಾತನಾಡಿದ ಕೃನಾಲ್, "ಇದರ ಬಗ್ಗೆ ಯಾವುದೇ ಸಂದೇಹವಿಲ್ಲ, ಪ್ರತಿಯೊಂದು ಐಪಿಎಲ್ ಟ್ರೋಫಿಯೂ ವಿಶೇಷವಾಗಿದೆ. ಇದು ಮಕ್ಕಳನ್ನು ಹೊಂದಿರುವಂತೆ, ಸರಿ? ನೀವು ಆಯ್ಕೆ ಮಾಡಲು ಸಾಧ್ಯವಿಲ್ಲ (ಯಾವುದು ಹೆಚ್ಚು ವಿಶೇಷ). ಐಪಿಎಲ್ ಟ್ರೋಫಿಗಳಂತೆಯೇ ಎಲ್ಲವೂ ತುಂಬಾ ಕಷ್ಟಪಟ್ಟು ಸಂಪಾದಿಸಲ್ಪಟ್ಟಿದೆ. 11 ವರ್ಷಗಳಲ್ಲಿ ಐದು ಟ್ರೋಫಿಗಳನ್ನು ಹೊಂದಲು ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತೆ ಇದೆ, ಅದು ನನಗೆ ತುಂಬಾ ವಿಶೇಷವಾಗಿದೆ" ಎಂದು ಹೇಳಿದರು.
ಐಪಿಎಲ್ 2026 ಬಹುಮಾನದ ಮೊತ್ತ ಸೇರಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರು ಗೆದ್ದ ಮೊತ್ತದ ವಿವರ ಇಲ್ಲಿದೆ
ಕಳೆದ ಎರಡು ಋತುಗಳಲ್ಲಿ ಆರ್‌ಸಿಬಿಯ ರೂಪಾಂತರಕ್ಕೆ, ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕ ದಿನೇಶ್ ಕಾರ್ತಿಕ್, ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಮತ್ತು ಮುಖ್ಯ ಕೋಚ್ ಆಂಡಿ ಫ್ಲವರ್ ಅವರ ತರಬೇತಿ ಮತ್ತು ಬೆಂಬಲ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು.
"ಇದು ಆರ್‌ಸಿಬಿ ಅಭಿಮಾನಿಗಳಿಗೆ. ನಾವು ಎಲ್ಲಿಗೆ ಹೋದರೂ, ಅವರು ನಮ್ಮನ್ನು ಬೆಂಬಲಿಸಿದ್ದಾರೆ. ಮತ್ತು ಸ್ಪಷ್ಟವಾಗಿ ವಿರಾಟ್‌ಗೂ ಸಹ, ಬಹಳ ವಿಶೇಷ. ಸತತ ಎರಡು ಟ್ರೋಫಿಗಳನ್ನು ಹೊಂದಿರುವುದು. ಇದು ಅದ್ಭುತವಾಗಿದೆ," ಎಂದು ಕೃನಾಲ್ ಹೇಳಿದರು.