ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಆರ್‌. ಅಶ್ವಿನ್‌ ದಾಖಲೆ ಮುರಿದ ಕುಲ್‌ದೀಪ್‌ ಯಾದವ್‌

ಕುಲ್‌ದೀಪ್‌ ಇದುವರೆಗೆ ವಿದೇಶಿ ನೆಲದಲ್ಲಿ 25 ಟಿ20 ಇನಿಂಗ್ಸ್‌ನಿಂದ 52 ವಿಕೆಟ್‌ ಕಿತ್ತಿದ್ದಾರೆ. ದಾಖಲೆ ಹಾರ್ದಿಕ್‌ ಪಾಂಡ್ಯ ಹೆಸರಿನಲ್ಲಿದೆ. ಪಾಂಡ್ಯ 63 ವಿಕೆಟ್‌ ಪಡೆದಿದ್ದಾರೆ. ಕುಲ್‌ದೀಪ್‌ ಇನ್ನು 5 ವಿಕೆಟ್‌ ಕಿತ್ತರೆ ಮೂರನೇ ಸ್ಥಾನದಲ್ಲಿರುವ ಭುವನೇಶ್ವರ್‌ ಕುಮಾರ್‌(56) ದಾಖಲೆ ಮುರಿಯಬಹುದು. 62 ವಿಕೆಟ್‌ ಪಡೆದಿರುವ ಜಸ್‌ಪ್ರೀತ್‌ ಬುಮ್ರಾ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.

ದುಬೈ: ಯುಎಇ(UAE vs IND) ವಿರುದ್ಧದ ಏಷ್ಯಾ ಕಪ್‌ ಟಿ20(Asia Cup 2025) ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ 2.1 ಓವರ್‌ಗಳಲ್ಲಿ 7 ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದ್ದ ಕುಲದೀಪ್‌ ಯಾದವ್‌(Kuldeep Yadav) ಅವರು ಈ ಸಾಧನೆಯೊಂದಿಗೆ, ವಿದೇಶದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ನಾಲ್ಕನೇ ಭಾರತೀಯ ಬೌಲರ್‌ ಎನಿಸಿಕೊಂಡರು. ಈ ಹಾದಿಯಲ್ಲಿ ಆರ್‌. ಅಶ್ವಿನ್‌(50) ದಾಖಲೆಯನ್ನು ಹಿಂದಿಕ್ಕಿದರು.

ಕುಲ್‌ದೀಪ್‌ ಇದುವರೆಗೆ ವಿದೇಶಿ ನೆಲದಲ್ಲಿ 25 ಟಿ20 ಇನಿಂಗ್ಸ್‌ನಿಂದ 52 ವಿಕೆಟ್‌ ಕಿತ್ತಿದ್ದಾರೆ. ದಾಖಲೆ ಹಾರ್ದಿಕ್‌ ಪಾಂಡ್ಯ ಹೆಸರಿನಲ್ಲಿದೆ. ಪಾಂಡ್ಯ 63 ವಿಕೆಟ್‌ ಪಡೆದಿದ್ದಾರೆ. ಕುಲ್‌ದೀಪ್‌ ಇನ್ನು 5 ವಿಕೆಟ್‌ ಕಿತ್ತರೆ ಮೂರನೇ ಸ್ಥಾನದಲ್ಲಿರುವ ಭುವನೇಶ್ವರ್‌ ಕುಮಾರ್‌(56) ದಾಖಲೆ ಮುರಿಯಬಹುದು. 62 ವಿಕೆಟ್‌ ಪಡೆದಿರುವ ಜಸ್‌ಪ್ರೀತ್‌ ಬುಮ್ರಾ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.

ವಿದೇಶಿ ನೆಲದಲ್ಲಿ ಅತ್ಯಧಿಕ ಟಿ20 ವಿಕೆಟ್‌

ಹಾರ್ದಿಕ್‌ ಪಾಂಡ್ಯ-63 ವಿಕೆಟ್‌(59 ಇನಿಂಗ್ಸ್‌)

ಜಸ್‌ಪ್ರೀತ್‌ ಬುಮ್ರಾ-62 ವಿಕೆಟ್‌(42 ಇನಿಂಗ್ಸ್‌)

ಭುವನೇಶ್ವರ್‌ ಕುಮಾರ್‌-56 ವಿಕೆಟ್‌(53 ಇನಿಂಗ್ಸ್‌)

ಕುಲ್‌ದೀಪ್‌ ಯಾದವ್-‌52 ವಿಕೆಟ್‌(25 ಇನಿಂಗ್ಸ್‌)

ಆರ್‌. ಅಶ್ವಿನ್‌-50 ವಿಕೆಟ್‌(44 ಇನಿಂಗ್ಸ್‌)

ಪಂದ್ಯ ಗೆದ್ದ ಭಾರತ

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆ ಯುಎಇ ಮೊದಲ ಎರಡು ಓವರ್‌ಗಳಲ್ಲಿ ಉತ್ತಮ ರನ್‌ ಕಲೆ ಹಾಕಿರೂ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಕೇವಲ 57 ರನ್‌ಗೆ ಆಲೌಟ್‌ ಆಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 4.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 60 ರನ್‌ ಬಾರಿಸಿ ಗೆಲುವು ಸಾಧಿಸಿತು. ಭಾರತ ‘ಎ’ ಗುಂಪಿನ ತನ್ನ ಮುಂದಿನ ಪಂದ್ಯವನ್ನು ಭಾನುವಾರ (ಸೆ.14) ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಇದನ್ನೂ ಓದಿ Asia Cup 2025: ಕುಲ್ದೀಪ್‌ ಯಾದವ್‌ ಸ್ಪಿನ್‌ ಮೋಡಿಯಿಂದ ಭಾರತಕ್ಕೆ ಸುಲಭ ತುತ್ತಾದ ಯುಎಇ!