ಲಖನೌ, ಮಾ.13: ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್(Kuldeep Yadav-Vanshika wedding) ಮಾರ್ಚ್ 14 ರಂದು ಮಸ್ಸೂರಿಯ ರೆಸಾರ್ಟ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ವಿವಾಹವಾಗಲಿದ್ದಾರೆ. ವಿವಾಹ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲಾಗಿದ್ದು, ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಭಾಗವಹಿಸುವ ಸಾಧ್ಯತೆಯಿದೆ. ಉತ್ತರಾಖಂಡದ ಮಸ್ಸೂರಿಯಲ್ಲಿ ಕುಕ್‌ದೀಪ್ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ವರದಿಗಳ ಪ್ರಕಾರ, ಮಸ್ಸೂರಿಯ ಐಕಾನಿಕ್ ಸವೊಯ್ ಹೋಟೆಲ್ ವಿವಾಹಕ್ಕಾಗಿ ಅಲಂಕೃತಗೊಳ್ಳುತ್ತಿದ್ದು, ಕೊಹ್ಲಿ, ರೋಹಿತ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಕ್ರಿಕೆಟಿಗರು ಮತ್ತು ಅನೇಕ ವಿಐಪಿ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಕುಲದೀಪ್ ಮದುವೆಗಾಗಿ ಇಡೀ ಹೋಟೆಲ್ ಅನ್ನು ಬುಕ್ ಮಾಡಲಾಗಿದೆ. ದಿ ಸವೊಯ್‌ನಲ್ಲಿ ಸುಮಾರು 80 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೋಟೆಲ್ ಆಡಳಿತ ಮಂಡಳಿ ದೃಢಪಡಿಸಿದೆ.
ಕುಲದೀಪ್ ಯಾದವ್ ಭಾವಿ ಪತ್ನಿ ವಂಶಿಕಾ, ಲಕ್ನೋದ ಶ್ಯಾಮ್ ನಗರದ ನಿವಾಸಿಯಾಗಿದ್ದಾರೆ. ಪ್ರಸ್ತುತ ಅವರು ಎಲ್ ಐಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕುಲದೀಪ್ ಯಾದವ್ ಮತ್ತು ವಂಶಿಕಾ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಜೂನ್ 4, 2025 ರಂದು ಕಾನ್ಪುರದಲ್ಲಿ ವಂಶಿಕಾ ಅವರೊಂದಿಗೆ ಕುಲ್‌ದೀಪ್ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿ ಕೊಂಡಿದ್ದರು. ವಂಶಿಕಾ 2017 ರಲ್ಲಿ ಸೇಂಟ್ ಮೇರಿ ಶಾಲೆಯಲ್ಲಿ ಪದವಿ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದರು. ವಂಶಿಕಾ ಮನೆಯಿಂದ ಕುಲ್‌ದೀಪ್ ಮನೆ ಕೇವಲ ಮೂರು ಕೀ.ಮಿ ಇದೆ.
ಆಶಸ್ ಸೋಲಿನ ಬಗ್ಗೆ ಮಾತನಾಡದಂತೆ ಇಂಗ್ಲೆಂಡ್ ಆಟಗಾರರಿಗೆ ನಿಷೇಧ
ಮಾರ್ಚ್ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲೇ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು.
ಈ ಬಾರಿಯ ವಿಶ್ವಕಪ್ನಲ್ಲಿ ಕುಲ್‌ದೀಪ್‌ಗೆ ಕೇವಲ ಒಂದು ಪಂದ್ಯವನ್ನಾಡುವ ಅವಕಾಶ ಮಾತ್ರ ಲಭಿಸಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅವರು 14 ರನ್ಗಳಿಗೆ 1 ವಿಕೆಟ್ ಕಬಳಿಸಿದ್ದರು. ಮದುವೆಯ ಬಳಿಕ ಕುಲ್‌ದೀಪ್ ಐಪಿಎಲ್ ಸಿದ್ಧತೆಗಾಗಿ ಡೆಲ್ಲಿ ಫ್ರಾಂಚೈಸಿ ಸೇರಿಕೊಳ್ಳಲಿದಾರೆ. ಡೆಲ್ಲಿ ತಂಡ ಏ.1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ.