ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: 'ವಿಶೇಷ ದೇಶಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ'; ಭಾರತ ಪ್ರವಾಸ ಖಚಿತಪಡಿಸಿದ ಮೆಸ್ಸಿ

lionel messi visit to india: ಡಿಸೆಂಬರ್ 13 ರಂದು ಕೋಲ್ಕತ್ತಾದಲ್ಲಿ ಮೆಸ್ಸಿ ಪ್ರವಾಸ ಆರಂಭಿಸಲಿದ್ದಾರೆ. ನಂತರ ಅಹಮದಾಬಾದ್, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯೊಂದಿಗೆ ಅವರ ಪ್ರವಾಸ ಮುಕ್ತಾಯಗೊಳ್ಳಲಿದ್ದಾರೆ.

ನವದೆಹಲಿ: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಬಹುನಿರೀಕ್ಷಿತ GOAT ಟೂರ್ ಆಫ್ ಇಂಡಿಯಾ 2025 ರಲ್ಲಿ ಭಾಗವಹಿಸಲಿರುವ ಮೆಸ್ಸಿ, 14 ವರ್ಷಗಳ ಬಳಿಕ ಭಾರತಕ್ಕೆ ಬರಲಿದ್ದಾರೆ. ಆಗಸ್ಟ್ 15 ರಂದು ಆಯೋಜಕರು ಮೆಸ್ಸಿ ಪ್ರವಾಸದ ವೇಳಾಪಟ್ಟಿಯನ್ನು ಬಹಿರಂಗಪಡಿಸಿದ ಒಂದು ತಿಂಗಳ ಬಳಿಕ ಮೆಸ್ಸಿ ಅವರ ದೃಢೀಕರಣ ಬಂದಿದೆ.

ಭಾರತ ಪ್ರವಾಸದ ಬಗ್ಗೆ ಮುಕ್ತವಾಗಿ ಮಾತನಾಡಿದ ಮೆಸ್ಸಿ, ಉತ್ಸಾಹವು ಉತ್ತುಂಗಕ್ಕೇರಿದೆ. ಈ ಪ್ರವಾಸವನ್ನು ಮಾಡಲು ನನಗೆ ತುಂಬಾ ಗೌರವವಾಗಿದೆ. ಭಾರತವು ಬಹಳ ವಿಶೇಷವಾದ ದೇಶ, ಮತ್ತು 14 ವರ್ಷಗಳ ಹಿಂದೆ ನಾನು ಅಲ್ಲಿ ಕಳೆದ ಸಮಯದಿಂದ ನನಗೆ ಒಳ್ಳೆಯ ನೆನಪುಗಳಿವೆ. ಅಭಿಮಾನಿಗಳು ಅದ್ಭುತವಾಗಿದ್ದರು" ಎಂದು ಮೆಸ್ಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಭಾರತವು ಉತ್ಸಾಹಭರಿತ ಫುಟ್ಬಾಲ್ ರಾಷ್ಟ್ರ, ಮತ್ತು ಈ ಸುಂದರ ಆಟದ ಬಗ್ಗೆ ನನಗಿರುವ ಪ್ರೀತಿಯನ್ನು ಹಂಚಿಕೊಳ್ಳುವಾಗ ಹೊಸ ಪೀಳಿಗೆಯ ಅಭಿಮಾನಿಗಳನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಮೆಸ್ಸಿ ಹೇಳಿದರು.

ಡಿಸೆಂಬರ್ 13 ರಂದು ಕೋಲ್ಕತ್ತಾದಲ್ಲಿ ಮೆಸ್ಸಿ ಪ್ರವಾಸ ಆರಂಭಿಸಲಿದ್ದಾರೆ. ನಂತರ ಅಹಮದಾಬಾದ್, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯೊಂದಿಗೆ ಅವರ ಪ್ರವಾಸ ಮುಕ್ತಾಯಗೊಳ್ಳಲಿದ್ದಾರೆ. 2011 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಮುನ್ನಡೆಸಿದ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ.