ಕಾನ್ಸಾಸ್, ಜೂ. 17: ಪ್ರಮುಖ ಬೆಳವಣಿಗೆಯೊಂದರಲ್ಲಿ, ಪ್ರಸಕ್ತ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ರೆಫರಿಯ ನಿರ್ಧರಾದ ಆರೋಪದ ಮೇಲೆ ಅಲ್ಜೀರಿಯಾ ಫುಟ್ಬಾಲ್ ಫೆಡರೇಶನ್(ಎಎಫ್‌ಎಫ್) ಅಧಿಕೃತವಾಗಿ ಫಿಫಾಗೆ ದೂರು ದಾಖಲಿಸಿದೆ. ಈ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ಹ್ಯಾಟ್ರಿಕ್ ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ 16 ಗೋಲುಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದಾಗ್ಯೂ, ಈ ಪಂದ್ಯದಲ್ಲಿ ಮೆಸ್ಸಿ ಮಾಡಿದ ತಪ್ಪಿಗೆ ರೆಡ್ ಕಾರ್ಡ್ ನೀಡದರ ಬಗ್ಗೆ ಎಎಫ್‌ಎಫ್ ದೂರು ನೀಡಿದೆ.
ಪಂದ್ಯದಲ್ಲಿ ಮೆಸ್ಸಿ ಅಲ್ಜೀರಿಯಾದ ಐಸಾ ಮಂಡಿ ಅವರ ಕಾಲಿಗೆ ತುಳಿದು ಅವರನ್ನು ನೆಲಕ್ಕೆ ಬೀಳಿಸಿದ್ದರು. ಈ ವೇಳೆ ಹಲವರು ಮೆಸ್ಸಿಗೆ ರೆಡ್ ಕಾರ್ಡ್ ನೀಡಬಹುದೆಂದು ಭಾವಿಸಿದ್ದರು. ಆದರೆ ಅರ್ಜೆಂಟೀನಾದ ನಾಯಕನ ವಿರುದ್ಧ ರೆಫರಿ ಯಾವುದೇ ಶಿಸ್ತು ಕ್ರಮ ಕೈಗೊಳ್ಳದ ಕಾರಣ, ಎಎಫ್‌ಎಫ್ ಫಿಫಾಗೆ ದೂರು ನೀಡಿದೆ.
"ಈ ದೂರು ಮುಖ್ಯವಾಗಿ ಮೆಸ್ಸಿಯ ಸವಾಲಿಗೆ ಸಂಬಂಧಿಸಿದೆ, ಏಕೆಂದರೆ ಅವರಿಗೆ ರೆಡ್ ಕಾರ್ಡ್ ನೀಡಬೇಕೆಂದು ಎಲ್ಲರ ಅಭಿಪ್ರಾಯ. ಅರ್ಜೆಂಟೀನಾ ತಂಡ ಬಲಿಷ್ಠವಾಗಿಲ್ಲ ಎಂದು ನಾವು ಹೇಳುತ್ತಿಲ್ಲ, ಆದರೆ ಅನ್ಯಾಯದ ಎದುರು ನಾವು ಮೌನವಾಗಿರಲು ಸಾಧ್ಯವಿಲ್ಲ" ಎಂದು ಎಎಫ್‌ಎಫ್ ದೂರಿನಲ್ಲಿ ಉಲ್ಲೇಖಿಸಿದೆ.
ಅರ್ಜೆಂಟೀನಾ ಮುಂದಿನ ಪಂದ್ಯದಲ್ಲಿ ಜೋರ್ಡಾನ್ ತಂಡವನ್ನು ಎದುರಿಸಲಿದೆ. ಜೂನ್ 28 ರಂದು ಆರ್ಲಿಂಗ್ಟನ್‌ನ ಡಲ್ಲಾಸ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿವೆ.
ತಮ್ಮ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಅರ್ಜೆಂಟೀನಾ ತಂಡವು ಪಂದ್ಯಾವಳಿಯ ಎರಡನೇ ಗೆಲುವನ್ನು ಗುರಿಯಾಗಿಸಿಕೊಂಡಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಮೆಸ್ಸಿಯ ಪ್ರದರ್ಶನದ ಮೇಲೆ ಮತ್ತೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ವಿಶೇಷವಾಗಿ ತನ್ನ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿರುವ ಮೆಸ್ಸಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.