ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಐಪಿಎಲ್ ವೃತ್ತಿಜೀವನ ಪುನರಾರಂಭಿಸಲು ಅರ್ಜುನ್ ತೆಂಡೂಲ್ಕರ್ ಸಜ್ಜು

LSG Vs DC: ಇತ್ತೀಚೆಗೆ, ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್, ತಂಡದಲ್ಲಿನ ಸ್ಪರ್ಧೆಯನ್ನು ಉಲ್ಲೇಖಿಸಿ, ಅರ್ಜುನ್ LSG ಪರ ಆಡುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಯೋಗರಾಜ್‌ ಅವರು ಅಶ್ವಿನ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

Arjun Tendulkar

ಲಕ್ನೋ, ಮಾ.31: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಎರಡು ಋತುಗಳನ್ನು ಕಳೆದ ನಂತರ ಅರ್ಜುನ್ ತೆಂಡೂಲ್ಕರ್(Arjun Tendulkar) ತಮ್ಮ ಐಪಿಎಲ್ ವೃತ್ತಿಜೀವನವನ್ನು ಮತ್ತೆ ಪ್ರಾರಂಭಿಸಲು ಸಜ್ಜಾಗಿದ್ದಾರೆ. ನೂತನ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್(LSG Vs DC) ಪರ ಅವರು ತಮ್ಮ ಐಪಿಎಲ್‌ ವೃತ್ತಿಜೀವನ ಮುಂದುವರಿಸಲು ಕಾತರರಾಗಿದ್ದಾರೆ.

ಮುಂಬೈ ಇಂಡಿಯನ್ಸ್‌ ಪರ ಐದು ಪಂದ್ಯಗಳನ್ನು ಆಡಿರುವ ಅರ್ಜುನ್‌, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತು ಏಕೈಕ ಇನ್ನಿಂಗ್ಸ್‌ನಲ್ಲಿ 13 ರನ್‌ಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಐಪಿಎಲ್ ಮಿನಿ-ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿತು. ಬುಧವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

26 ವರ್ಷದ ಎಡಗೈ ವೇಗಿಯಾಗಿರುವ ಪಂತ್, ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ನಾಯಕತ್ವದ ತಮ್ಮ ಹೊಸ ತಂಡದೊಂದಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯುವ ಗುರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ, ಫ್ರಾಂಚೈಸಿ ಅಭ್ಯಾಸದ ಸಮಯದಲ್ಲಿ ಉಭಯ ಆಟಗಾರರು ಪಂದ್ಯದ ಬಗ್ಗೆ ಮಾತನಾಡುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿತ್ತು. ಇದರಲ್ಲಿ ಪಂತ್ ಅರ್ಜುನ್ ಅವರ ಉತ್ಸಾಹ ಮತ್ತು ಅವರ ಬ್ಯಾಟ್‌ನ ತೂಕದಿಂದ ಪ್ರಭಾವಿತರಾಗಿದ್ದರು.

ಭಾರತೀಯ ದೇಶೀಯ ಸರ್ಕ್ಯೂಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸುವ ಅರ್ಜುನ್, 8.58 ರ ಎಕಾನಮಿ ದರದಲ್ಲಿ 29 ಟಿ20 ಪಂದ್ಯಗಳಿಂದ 35 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅರ್ಜುನ್‌, ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್‌ ಸಿಂಗ್‌ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅಶ್ವಿನ್ ವಿರುದ್ಧ ಯೋಗರಾಜ್ ವಾಗ್ದಾಳಿ

ಇತ್ತೀಚೆಗೆ, ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್, ತಂಡದಲ್ಲಿನ ಸ್ಪರ್ಧೆಯನ್ನು ಉಲ್ಲೇಖಿಸಿ, ಅರ್ಜುನ್ LSG ಪರ ಆಡುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಯೋಗರಾಜ್‌ ಅವರು ಅಶ್ವಿನ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಐಪಿಎಲ್ ಟೂರ್ನಿಯಲ್ಲಿ ಬಿಸಿಸಿಐ ಜತೆ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಪ್ರಜೆ ಮುಂಬೈನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆ

"ಅರ್ಜುನ್ ತೆಂಡೂಲ್ಕರ್ ಖೇಲೇಗಾ ಹಿ ನಹಿ (ಅರ್ಜುನ್ ತೆಂಡೂಲ್ಕರ್ ಆಡುವುದೇ ಇಲ್ಲ), ಮತ್ತು ಈ ತಂಡದಲ್ಲಿ ಮಾಯಾಂಕ್ ಯಾದವ್, ಮೊಹ್ಸಿನ್ ಖಾನ್, ಆವೇಶ್ ಖಾನ್ ಮತ್ತು ಮೊಹಮ್ಮದ್ ಶಮಿ ಇರುವುದರಿಂದ ಇದು ತುಂಬಾ ಕಷ್ಟ ಎಂದು ನಾನು ಭಾವಿಸುತ್ತೇನೆ. ತುಂಬಾ ವೇಗದ ಬೌಲರ್‌ಗಳಿದ್ದಾರೆ. ಅವರು ಹೇಗೆ ಆಡುತ್ತಾರೆ? ಬಹಳಷ್ಟು ಗಾಯಗಳಾಗದ ಹೊರತು ಅವರು ಯಾವುದೇ ಪ್ರಕರಣವನ್ನು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು.



"ಅಶ್ವಿನ್ ಯಾರೇ ಆಗಿರಲಿ, ಏನು ಮಾತನಾಡಬೇಕೆಂದು ಅವನಿಗೆ ತಿಳಿದಿರಬೇಕು. ದೂರದರ್ಶನದಲ್ಲಿ ಕುಳಿತಿರುವ ಯಾರೋ ಒಬ್ಬರು, 'ಓಹ್, ಅವನಿಗೆ ಇದು ಸಾಧ್ಯವಿಲ್ಲ, ಅವನಿಗೆ ಇದು ಸಾಧ್ಯ ಎಂದು ಹೇಳಲು ನೀನು ಯಾರು?" ಎಂದು ಯೋಗರಾಜ್ ಅಶ್ವಿನ್‌ ವಿರುದ್ಧ ಕಿಡಿಕಾರಿದ್ದರು.