ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PBKS vs LSG: ಅಯ್ಯರ್‌‌ ಆಕರ್ಷಕ ಶತಕ; ಪಂಜಾಬ್‌ಗೆ ಗೆಲುವಿನ ಶ್ರೇಯಸ್ಸು

IPL 2026: ಜೋಶ್‌ನಿಂದ ಬ್ಯಾಟಿಂಗ್‌ ನಡೆಸಿದ ಜೋಶ್‌ ಇಂಗ್ಲಿಷ್‌ 72 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಉಳಿದಂತೆ ಆಯೂಷ್‌ ಬದೋನಿ 18 ಎಸೆತಗಳಿಂದ 43 ರನ್‌ ಬಾರಿಸಿದರು. ಕೊನೆಯಲ್ಲಿ ಅಬ್ದುಲ್‌ ಸಮದ್‌ 20 ಎಸೆತಗಳಿಂದ ಅಜೇಯ 37 ರನ್‌ ಗಳಿಸಿದರು. ಪಂಜಾಬ್‌ ಪರ ಮಾರ್ಕೊ ಜಾನ್ಸೆನ್‌ ಮತ್ತು ಯಜುವೇಂದ್ರ ಚಹಲ್‌ ತಲಾ ಎರಡು ವಿಕೆಟ್‌ ಕಿತ್ತರು.

Shreyas Iyer and Prabhsimran Singh

ಲಖನೌ, ಮೇ 23: ನಾಯಕ ಶ್ರೇಯಸ್‌ ಅಯ್ಯರ್‌(101) ಬಾರಿಸಿದ ಅಜೇಯ ಶತಕದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡ ಶನಿವಾರ ನಡೆದ ಐಪಿಎಲ್‌(IPL 2026) ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌(PBKS vs LSG) ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿ ಪ್ಲೇ ಆಫ್‌ ರೇಸ್‌ನಲ್ಲಿ ಉಳಿದುಕೊಂಡಿತು. ಆದರೆ ಪ್ಲೇ ಆಫ್‌ ಸ್ಥಾನ ಖಚಿತಗೊಳ್ಳಬೇಕಿದ್ದರೆ, ಕೆಕೆಆರ್‌ ಮತ್ತು ರಾಜಸ್ಥಾನ್‌ ತಂಡಗಳ ಫಲಿತಾಂಶದ ತನಕ ಕಾಯಬೇಕಿದೆ. ರಾಜಸ್ಥಾನ್‌ ಗೆದ್ದರೆ ಪಂಜಾಬ್‌ ಹೊರಬೀಳಲಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಜೋಶ್‌ ಇಂಗ್ಲಿಸ್‌(72) ಮತ್ತು ಆಯೂಷ್‌ ಬದೋನಿ(43) ಅವರ ಬ್ಯಾಟಿಂಗ್‌ ಹೋರಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 196ರನ್‌ ಬಾರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ ಎರಡು ಓವರ್‌ ಬಾಕಿ ಇರುವಂತೆಯೇ 3 ವಿಕೆಟ್‌ಗೆ 200 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ಪಂಜಾಬ್‌ ಕಿಂಗ್ಸ್‌ ಆರಂಭಿಕ ಆಘಾತ ಎದುರಿಸಿತು. ಪ್ರಿಯಾಂಶ್ ಆರ್ಯ(0) ಗೋಲ್ಡನ್‌ ಡಕ್‌ ಸಂಕಟ್ಟಕ್ಕೆ ಸಿಲುಕಿದರು. ಆದರೆ ಪ್ರಭ್‌ಸಿಮ್ರಾನ್‌ ಸಿಂಗ್‌ ಮತ್ತು ನಾಯಕ ಶ್ರೇಯಸ್‌ ಅಯ್ಯರ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವ ಮೂಲಕ ತಂಡಕ್ಕೆ ನೆರವಾದರು. ಮೂರನೇ ವಿಕೆಟ್‌ಗೆ 140 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಪ್ರಭ್‌ಸಿಮ್ರಾನ್‌ ಸಿಂಗ್‌ 39 ಎಸೆತಗಳಿಂದ 69 ರನ್‌ ಸಿಡಿಸಿದರೆ, ಅಯ್ಯರ್‌ ಕೊನೆಯ ತನಕ ನಿಂತು ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಹಾಲಿ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಅರ್ಜುನ್‌ ತೆಂಡೂಲ್ಕರ್‌ ಒಂದು ವಿಕೆಟ್‌ ಕಿತ್ತರು. 51 ಎಸೆತ ಎದುರಿಸಿದ ಶ್ರೇಯಸ್‌ ಅಯ್ಯರ್‌ 5 ಸಿಕ್ಸರ್‌ ಮತ್ತು 11 ಬೌಂಡರಿ ನೆರವಿನಿಂದ 101*ರನ್‌ ಬಾರಿಸಿದರು.

ಕ್ವಾಲಿಫೈಯರ್​-1 ಪಂದ್ಯಕ್ಕೂ ಮುನ್ನ ಆರ್‌ಸಿಬಿ ಆಘಾತ; ಟೂರ್ನಿಯಿಂದ ಹೊರಬಿದ್ದ ಆರಂಭಿಕ ಬ್ಯಾಟರ್‌

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಲಖನೌ ತಂಡ ಈ ಪಂದ್ಯದಲ್ಲಿ ಹಲವು ಬದಲಾವಣೆ ಮಾಡಿತು. ಅವಕಾಶ ಸಿಗದೆ ಬೆಂಚ್‌ ಕಾದಿದ್ದ ಅರ್ಜುನ್‌ ತೆಂಡೂಲ್ಕರ್‌ ಮತ್ತು ಅರ್ಶಿನ್ ಕುಲಕರ್ಣಿಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಯಿತು. ಆದರೆ ಅರ್ಶಿನ್ ಕುಲಕರ್ಣಿ ತಮ್ಮ ಆಯ್ಕೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಆರಂಭಿಕನಾಗ ಬ್ಯಾಟ್‌ ಬೀಸಿದ ಅವರು ಗೋಲ್ಡನ್‌ ಡಕ್‌ ಆದರು. ಅನುಭವಿ ನಿಕೋಲಸ್‌ ಪೂರನ್‌ 2 ರನ್‌ಗೆ ಆಟ ಮುಗಿಸಿದರು.

ಜೋಶ್‌ನಿಂದ ಬ್ಯಾಟಿಂಗ್‌ ನಡೆಸಿದ ಜೋಶ್‌ ಇಂಗ್ಲಿಷ್‌ 72 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಉಳಿದಂತೆ ಆಯೂಷ್‌ ಬದೋನಿ 18 ಎಸೆತಗಳಿಂದ 43 ರನ್‌ ಬಾರಿಸಿದರು. ಕೊನೆಯಲ್ಲಿ ಅಬ್ದುಲ್‌ ಸಮದ್‌ 20 ಎಸೆತಗಳಿಂದ ಅಜೇಯ 37 ರನ್‌ ಗಳಿಸಿದರು. ಪಂಜಾಬ್‌ ಪರ ಮಾರ್ಕೊ ಜಾನ್ಸೆನ್‌ ಮತ್ತು ಯಜುವೇಂದ್ರ ಚಹಲ್‌ ತಲಾ ಎರಡು ವಿಕೆಟ್‌ ಕಿತ್ತರು.