ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಶಿಸ್ತು ತೋರಿದ ಮನ್‌ಪ್ರೀತ್‌ ಸೇರಿ ಇಬ್ಬರು ಆಟಗಾರರನ್ನು ಪ್ರೊ ಲೀಗ್ ಸಂಭಾವ್ಯ ತಂಡದಿಂದ ಕೈಬಿಟ್ಟ ಹಾಕಿ ಇಂಡಿಯಾ

Hockey India: ಮನ್‌ಪ್ರೀತ್, 412 ಪಂದ್ಯಗಳೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರಾಗಲು ಕೇವಲ ಒಂದು ಪಂದ್ಯದ ದೂರದಲ್ಲಿದ್ದಾರೆ. ದಾಖಲೆ ಪ್ರಸ್ತುತ ಹಾಕಿ ಇಂಡಿಯಾದ ಹಾಲಿ ಅಧ್ಯಕ್ಷ ದಿಲೀಪ್ ಟಿರ್ಕಿ ಅವರ ಹೆಸರಿನಲ್ಲಿದೆ.

Manpreet Singh

ನವದೆಹಲಿ, ಜ.30: ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ಅಶಿಸ್ತು ತೋರಿದ ಕಾರಣಕ್ಕೆ ಮುಂಬರುವ ಎಫ್‌ಐಎಚ್ ಪ್ರೊ ಲೀಗ್ ಋತುವಿನ ಸಂಭಾವ್ಯ ಪಟ್ಟಿಯಿಂದ ಅನುಭವಿ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್(Manpreet Singh) ಸೇರಿದಂತೆ ಮೂವರು ಆಟಗಾರರನ್ನು ಹಾಕಿ ಇಂಡಿಯಾ(Hockey India) ಕೈಬಿಟ್ಟಿದೆ.

ಪ್ರವಾಸದ ಸಮಯದಲ್ಲಿ ಗಂಭೀರ ಅಶಿಸ್ತಿನ ಪ್ರಕರಣ ಬೆಳಕಿಗೆ ಬಂದಿದ್ದು, ಇದರ ಪರಿಣಾಮವಾಗಿ ಮನ್‌ಪ್ರೀತ್, ದಿಲ್‌ಪ್ರೀತ್ ಸಿಂಗ್ ಮತ್ತು ಗೋಲ್‌ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಅವರನ್ನು ಸಂಭಾವ್ಯರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 2 ರಿಂದ 16 ರವರೆಗೆ ಮೂರು ಪಂದ್ಯಗಳ ಸರಣಿಗಾಗಿ ಭಾರತ ಹಾಕಿ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಸರಣಿಯನ್ನು 2-0 ಅಂತರದಿಂದ ಸೋತಿತ್ತು. ಮೂರನೇ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.

"ಮೂವರು ಆಟಗಾರರು ಹಿಂದಿನ ರಾತ್ರಿ ಕಾರಿನಲ್ಲಿ ನಿಷೇಧಿತ ವಸ್ತುವನ್ನು ಹೊಂದಿರುವ ಖಾದ್ಯವನ್ನು ಸೇವಿಸಲು ತಂಡದ ಸಹ ಆಟಗಾರನಿಗೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ನಂತರ ಆಟಗಾರರು ತಮ್ಮ ತಂಡದ ಆಟಗಾರನಿಗೆ ನಿಷೇಧಿತ ಮದ್ದು ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದರು. ಆದರೆ ಅವರನ್ನು ಮುಂಬರುವ ಶಿಬಿರದಿಂದ ಹೊರಗಿಡುವ ನಿರ್ಧಾರವನ್ನು ತಂಡದ ಸಭೆಯಲ್ಲಿ ಘೋಷಿಸಲಾಯಿತು" ಎಂದು ತಂಡದ ಮೂಲವೊಂದು ತಿಳಿಸಿದೆ.

ಮನ್‌ಪ್ರೀತ್ ರಾಂಚಿ ರಾಯಲ್ಸ್ ತಂಡವನ್ನು ಹಾಕಿ ಇಂಡಿಯಾ ಲೀಗ್ ಫೈನಲ್‌ಗೆ ಸಹ-ನಾಯಕತ್ವ ವಹಿಸಿದ್ದರು ಮತ್ತು ಪಂದ್ಯಾವಳಿಯಲ್ಲಿ ಅವರ ಪ್ರದರ್ಶನ ಶ್ಲಾಘನೀಯವಾಗಿತ್ತು. ಎರಡು ಒಲಿಂಪಿಕ್ ಕಂಚಿನ ಪದಕ ವಿಜೇತ ತಂಡಗಳ ಸದಸ್ಯರಾಗಿರುವ 33 ವರ್ಷದ ಮನ್‌ಪ್ರೀತ್, 15 ವರ್ಷಗಳಲ್ಲಿ ಮೊದಲ ಬಾರಿಗೆ (ಫೆಬ್ರವರಿ 1 ರಿಂದ 7 ರವರೆಗೆ) ಶಿಬಿರಕ್ಕೆ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ಬರೆದ ಭಾರತದ ಜೆನ್ಸಿ ಕನಬರ್ ಯಾರು?

ಮನ್‌ಪ್ರೀತ್, 412 ಪಂದ್ಯಗಳೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರಾಗಲು ಕೇವಲ ಒಂದು ಪಂದ್ಯದ ದೂರದಲ್ಲಿದ್ದಾರೆ. ದಾಖಲೆ ಪ್ರಸ್ತುತ ಹಾಕಿ ಇಂಡಿಯಾದ ಹಾಲಿ ಅಧ್ಯಕ್ಷ ದಿಲೀಪ್ ಟಿರ್ಕಿ ಅವರ ಹೆಸರಿನಲ್ಲಿದೆ.

ಎಫ್‌ಐಎಚ್ ಪ್ರೊ ಲೀಗ್‌ನ ಭಾರತದ ಲೆಗ್ ಫೆಬ್ರವರಿ 10 ರಿಂದ 15 ರವರೆಗೆ ರೂರ್ಕೆಲಾದಲ್ಲಿ ನಡೆಯಲಿದೆ. ಭಾರತವು ಫೆಬ್ರವರಿ 11 ರಂದು ತಮ್ಮ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ.