ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮರಡೋನಾ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿನ ಚೆಂಡು 32 ಕೋಟಿಗೆ ಹರಾಜು

Maradona's 'Hand of God' ball: ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ಬಾರಿಸಿದ ಪಂದ್ಯದ ವೇಳೆ ಧರಿಸಿದ್ದ ಜೆರ್ಸಿ, 2022ರಲ್ಲಿ ಬರೋಬ್ಬರಿ 9.3 ಮಿಲಿಯನ್‌ ಡಾಲರ್‌ (ಅಂದಿನ ಡಾಲರ್‌ ಮೌಲ್ಯದ ಪ್ರಕಾರ 73 ಕೋಟಿ ರು.)ಗೆ ಹರಾಜಾಗಿತ್ತು. 1991ರಿಂದ ಅವರ ಬದುಕಿನ ಹಾದಿ ದುರ್ಗಮವಾಯಿತು. ಆ ವರ್ಷ ಅವರನ್ನು 15 ತಿಂಗಳು ಅಮಾನತು ಮಾಡಲಾಯಿತು. 1994ರಲ್ಲಿ 15 ತಿಂಗಳ ನಿಷೇಧಕ್ಕೆ ಒಳಗಾದರು.

Maradona's 'Hand of God' ball

ಡಲ್ಲಾಸ್, ಆ.25: ಕಾಲ್ಚೆಂಡಿನಾಟದ ಮೋಡಿಗಾರ ಡೀಗೊ ಮರಡೋನಾ ಅವರ ಕುಖ್ಯಾತ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿಗೆ ಬಳಕೆಯಾಗಿದ್ದ ಚೆಂಡು, ಬರೋಬ್ಬರಿ 3.35 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 32 ಕೋಟಿ ರು.)ಗೆ ಹರಾಜಾಗಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಖರೀದಿ ಮಾಡಿದವರ ಹೆಸರನ್ನು ಸಂಸ್ಥೆಯು ಬಹಿರಂಗಪಡಿಸಿಲ್ಲ.

ಹರಾಜು ಪ್ರಕ್ರಿಯೆ ನಡೆಸಿದ್ದ ಅಮೆರಿಕದ ಡಲ್ಲಾಸ್‌ ಮೂಲದ ಹೆರಿಟೇಜ್‌ ಸಂಸ್ಥೆ, ಚೆಂಡು ಕನಿಷ್ಠ 10 ಮಿಲಿಯನ್‌ ಡಾಲರ್‌ಗೆ ಹರಾಜಾಗಬಹುದೆಂದು ನಿರೀಕ್ಷಿಸಿತ್ತು. ಮಾತ್ರವಲ್ಲದೆ ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಆದರೆ, ಸಂಸ್ಥೆ ನಿರೀಕ್ಷೆ ಮಾಡಿದ್ದ ಅರ್ಧ ಮೊತ್ತವೂ ದೊರಕದೆ ನಿರೀಕ್ಷೆ ಹುಸಿಯಾಗಿದೆ. ಕ್ವಾರ್ಟರ್‌ ಫೈನಲ್‌ ಪಂದ್ಯದ ಬಳಿಕ ಚೆಂಡು ರೆಫ್ರಿ ನಾಸ್ಸರ್‌ ಬಳಿಯೇ ಸುಮಾರು 36 ವರ್ಷ ಉಳಿದಿತ್ತು. 2022ರಲ್ಲಿ ಅವರು 2.37 ಮಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಮಾರಾಟ ಮಾಡಿದ್ದರು.

ಮೆಕ್ಸಿಕೊದಲ್ಲಿ 1986ರಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಇಂಗ್ಲೆಂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯ ಮರಡೋನಾ ಅವರ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿತು. ವಿಶ್ವಪ್ರಸಿದ್ಧವಾದ ಎರಡು ಗೋಲುಗಳು ಆ ಪಂದ್ಯದಲ್ಲಿ ಮೂಡಿದ್ದವು. ಮೊದಲನೆಯದು, ಅವರ ಕೈಗೆ ತಾಗಿ ಗುರಿ ಮುಟ್ಟಿದ ಗೋಲು. ಹೀಗಾಗಿ ಅದು ಕುಖ್ಯಾತಿಯನ್ನೂ ಗಳಿಸಿದೆ. ಪಂದ್ಯದ ನಂತರ ಅವರೇ ಆ ಗೋಲನ್ನು ‘ದೇವರ ಕೈ’ಯಿಂದ ಬಂದ ಗೋಲು ಎಂದು ಬಣ್ಣಿಸಿದ್ದರು. ಪಂದ್ಯವನ್ನು 2-1ರಲ್ಲಿ ಗೆದ್ದಿದ್ದ ಅರ್ಜೆಂಟೀನಾ ಬಳಿಕ ವಿಶ್ವ ಚಾಂಪಿಯನ್‌ ಕೂಡ ಆಗಿತ್ತು. ಎರಡನೆಯದು, ಎದುರಾಳಿ ತಂಡದ ಆಟಗಾರರ ನಡುವಿನಿಂದ ಚೆಂಡನ್ನು ಡ್ರಿಬಲ್ ಮಾಡುತ್ತ ಹೋಗಿ ಹೊಡೆದ ಗೋಲು. ಅದನ್ನು ಶತಮಾನದ ಗೋಲು ಎಂದೇ ಕರೆಯಲಾಗುತ್ತದೆ.

ವಿಶ್ವ ಬ್ಯಾಡ್ಮಿಂಟನ್‌ ಶ್ರೇಯಾಂಕ; ವೃತ್ತಿಜೀವನದ ಅತ್ಯತ್ತಮ ಸ್ಥಾನಕ್ಕೇರಿದ ಟ್ರೀಸಾ–ಗಾಯತ್ರಿ

‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ಬಾರಿಸಿದ ಪಂದ್ಯದ ವೇಳೆ ಧರಿಸಿದ್ದ ಜೆರ್ಸಿ, 2022ರಲ್ಲಿ ಬರೋಬ್ಬರಿ 9.3 ಮಿಲಿಯನ್‌ ಡಾಲರ್‌ (ಅಂದಿನ ಡಾಲರ್‌ ಮೌಲ್ಯದ ಪ್ರಕಾರ 73 ಕೋಟಿ ರು.)ಗೆ ಹರಾಜಾಗಿತ್ತು. 1991ರಿಂದ ಅವರ ಬದುಕಿನ ಹಾದಿ ದುರ್ಗಮವಾಯಿತು. ಆ ವರ್ಷ ಅವರನ್ನು 15 ತಿಂಗಳು ಅಮಾನತು ಮಾಡಲಾಯಿತು. 1994ರಲ್ಲಿ 15 ತಿಂಗಳ ನಿಷೇಧಕ್ಕೆ ಒಳಗಾದರು.

ರಾಷ್ಟ್ರೀಯ ತಂಡಕ್ಕಾಗಿ ಮತ್ತು ವಿವಿಧ ಕ್ಲಬ್‌ಗಳಿಗಾಗಿ ಡೀಗೊ ಮರಡೋನ ಆಡಿದ ಪಂದ್ಯಗಳ ಸಂಖ್ಯೆ ಆರುನೂರರ ಆಸುಪಾಸು. ಗಳಿಸಿದ ಗೋಲುಗಳು 300ಕ್ಕೂ ಹೆಚ್ಚು 1976ರಿಂದ 1981ರ ವರೆಗೆ ಅರ್ಜೆಂಟೀನಿಯೋಸ್ ಜೂನಿಯರ್ಸ್‌ ಪರವಾಗಿ 167 ಪಂದ್ಯಗಳನ್ನು ಆಡಿದ್ದ ಅವರು 116 ಗೋಲು ಗಳಿಸಿದ್ದರು. 1981ರಿಂದ ಒಂದು ವರ್ಷ ಬೋಕಾ ಜೂನಿಯರ್ಸ್ ಪರವಾಗಿ ಆಡಿದ್ದಾರೆ. ಅಲ್ಲಿ, 40 ಪಂದ್ಯಗಳಲ್ಲಿ 28 ಗೋಲು ಗಳಿಸಿದ್ದಾರೆ. ನಂತರ ಎರಡು ವರ್ಷ ಬಾರ್ಸಿಲೋನಾ ಪರವಾಗಿ 36 ಪಂದ್ಯಗಳಲ್ಲಿ 22 ಗೋಲು ಗಳಿಸಿದ್ದಾರೆ. 1984ರಿಂದ 1991ರ ವರೆಗೆ ನೆಪೋಲಿ ತಂಡದಲ್ಲಿ ಗರಿಷ್ಠ, 188 ಪಂದ್ಯಗಳನ್ನು ಆಡಿದ್ದಾರೆ. ಆ ತಂಡಕ್ಕಾಗಿ ಅವರು ಗಳಿಸಿದ್ದು 81 ಗೋಲು.

ಶ್ರೀಲಂಕಾದಲ್ಲಿ ಧೋನಿಯ ಸಾರ್ವಕಾಲಿಕ ಟೆಸ್ಟ್‌ ದಾಖಲೆ ಮುರಿದ ಜುರೆಲ್‌

1992ರಿಂದ 1993ರ ವರೆಗೆ ಸೆವಿಲ್ಲಾ, ನಂತರ ಒಂದು ವರ್ಷ ನ್ಯೂವೆಲ್ಸ್ ಓಲ್ಡ್ ಬಾಯ್ಸ್‌, 1995ರಿಂದ 1997ರ ವರೆಗೆ ಬೋಕಾ ಜೂನಿಯರ್ಸ್ ತಂಡಗಳಲ್ಲಿದ್ದರು. ಅಲ್ಲಿ ಕ್ರಮವಾಗಿ 26, 5 ಮತ್ತು 30 ಪಂದ್ಯಗಳನ್ನು ಆಡಿರುವ ಅವರು ಒಟ್ಟಾರೆ 12 ಗೋಲು ಗಳಿಸಿದ್ದಾರೆ. ರಾಷ್ಟ್ರೀಯ ತಂಡದ ಪರ 1977ರಿಂದ ಎರಡು ವರ್ಷ 20 ವರ್ಷದೊಳಗಿನವರ ತಂಡದಲ್ಲಿದರು. ಈ ಅವಧಿಯಲ್ಲಿ 15 ಪಂದ್ಯಗಳಲ್ಲಿ ಎಂಟು ಗೋಲು ಗಳಿಸಿದ್ದರು. 1977ರಲ್ಲಿಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ ಮರಡೋನ 1994ರ ವರೆಗೆ ಆಡಿದ್ದಾರೆ.