ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮೆಕ್‌ಕೊನ್ಚೀ-ಸ್ಯಾಂಟ್ನರ್‌ ಜೋಡಿ

T20 World Cup: ಸ್ಯಾಂಟ್ನರ್ ಟಿ20ಐ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು. ಜತೆಗೆ ಟಿ20 ಮಾದರಿಯಲ್ಲಿ 1000 ರನ್‌ಗಳು ಮತ್ತು 100 ವಿಕೆಟ್‌ ಪೂರ್ಣಗೊಳಿಸಿದ ನ್ಯೂಜಿಲೆಂಡ್‌ನ ಮೊದಲ ಆಟಗಾರ ಎನಿಸಿದರು.

McConchie and Santner

ಕೊಲಂಬೊ, ಫೆ.26: ಬುಧವಾರ (ಫೆಬ್ರವರಿ 25) ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು 61 ರನ್‌ಗಳಿಂದ ಸೋಲಿಸಿ 2026 ರ ಟಿ20 ವಿಶ್ವಕಪ್‌(T20 World Cup)ನ ಸೂಪರ್ 8 ಹಂತದಲ್ಲಿ ಮೊದಲ ಗೆಲುವು ದಾಖಲಿಸಿತು. ಅಮೋಘ ಬ್ಯಾಟಿಂಗ್‌ ನಡೆಸಿದ ಕೋಲ್ ಮೆಕ್‌ಕೊನ್ಚೀ(Cole McConchie) ಮತ್ತು ಮಿಚೆಲ್ ಸ್ಯಾಂಟ್ನರ್ ವಿಶ್ವ ದಾಖಲೆ ನಿರ್ಮಿಸಿದರು.

ಮೆಕ್‌ಕೊನ್ಚೀ ಮತ್ತು ಸ್ಯಾಂಟ್ನರ್ ಅವರ 84 ರನ್‌ಗಳ ಪಾಲುದಾರಿಕೆಯು ಟಿ20 ವಿಶ್ವಕಪ್ ಇತಿಹಾಸದಲ್ಲಿ ಏಳನೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ಪಾಲುದಾರಿಕೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆಗಳಾದ ಮೈಕೆಲ್ ಹಸ್ಸಿ ಮತ್ತು ಸ್ಟೀವ್ ಸ್ಮಿತ್ ಜೋಡಿ ಹೆಸರಿನಲ್ಲಿತ್ತು. ಈ ಜೋಡಿ 2010 ರ ಪಂದ್ಯಾವಳಿಯಲ್ಲಿ ಆವೃತ್ತಿಯಿಂದ 7ನೇ ವಿಕೆಟ್‌ಗೆ 74 ರನ್‌ ಕಲೆಹಾಕಿತ್ತು. ಇದೀಗ 16 ವರ್ಷಗಳ ಬಳಿಕ ಈ ದಾಖಲೆಯನ್ನು ನ್ಯೂಜಿಲೆಂಡ್ ಜೋಡಿ ಮುರಿದಿದೆ.

ಸ್ಯಾಂಟ್ನರ್ ಟಿ20ಐ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು. ಜತೆಗೆ ಟಿ20 ಮಾದರಿಯಲ್ಲಿ 1000 ರನ್‌ಗಳು ಮತ್ತು 100 ವಿಕೆಟ್‌ ಪೂರ್ಣಗೊಳಿಸಿದ ನ್ಯೂಜಿಲೆಂಡ್‌ನ ಮೊದಲ ಆಟಗಾರ ಎನಿಸಿದರು.

ಟಿ20 ವಿಶ್ವಕಪ್ ಇತಿಹಾಸದಲ್ಲಿ 7ನೇ ವಿಕೆಟ್‌ಗೆ ಅತ್ಯಧಿಕ ಜತೆಯಾಟ

ಕೋಲ್ ಮೆಕ್‌ಕಾಂಚಿ ಮತ್ತು ಮಿಚೆಲ್ ಸ್ಯಾಂಟ್ನರ್- 84 ರನ್

ಮೈಕೆಲ್ ಹುಸೇ ಮತ್ತು ಸ್ಟೀವ್ ಸ್ಮಿತ್- 74‌ ರನ್‌

ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ- 71 ರನ್‌

ಜೆಎನ್ ಫ್ರೈಲಿಂಕ್ ಮತ್ತು ಜೆಜೆ ಸ್ಮಿಟ್- 70 ರನ್

ರೂಬೆನ್ ಟ್ರಂಪೆಲ್‌ಮನ್ ಮತ್ತು ಡೇವಿಡ್ ವೈಸ್- 70‌ ರನ್‌

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌ 7 ವಿಕೆಟ್‌ಗೆ 168 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 107 ರನ್‌ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌ 7 ವಿಕೆಟ್‌ಗೆ 168 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 107 ರನ್‌ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು.

ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ದಾಸುನ್ ಶನಕ

ಉತ್ತಮ ಆರಂಭದ ಬಳಿಕ ಕುಸಿದ ಕಿವೀಸ್‌ ಒಂದು ಹಂತದಲ್ಲಿ 12.1 ಓವರ್‌ಗಳಲ್ಲಿ 86 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು. ರಚಿನ್‌ ರವೀಂದ್ರ 32, ಫಿನ್ ಆ್ಯಲೆನ್‌ 23 ರನ್‌ ಗಳಿಸಿ ಔಟಾಗಿದ್ದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಮಿಚೆಲ್‌ ಸ್ಯಾಂಟ್ನರ್‌(26 ಎಸೆತಕ್ಕೆ 47) ಹಾಗೂ ಕೋಲ್‌ ಮೆಕ್‌ಕೊನ್ಚೀ(23 ಎಸೆತಕ್ಕೆ ಔಟಾಗದೆ 31) ತಂಡದ ಮೊತ್ತವನ್ನು 170ರ ಸನಿಹ ತಂದರು.