ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs KKR: ಕೆಕೆಆರ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ

MI vs KKR Live Score: ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲೇ ಪಂದ್ಯ ನಡೆಯಲಿದೆ. ಅಂದಿನ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಪಂದ್ಯಲ್ಲಿ ಒಟ್ಟಾರೆ 499 ರನ್‌ ದಾಖಲಾಗಿತ್ತು. ಹೀಗಾಗಿ ಇಂದಿನ ಪಂದ್ಯ ಕೂಡ ಹೈಸ್ಕೋರಿಂಗ್‌ ನಿರೀಕ್ಷೆ ಮಾಡಬಹುದು.

Ajinkya Rahane and Hardik Pandya

ಮುಂಬಯಿ, ಮಾ.29: ಭಾನುವಾರದ ಹೈವೋಲ್ಟೇಜ್‌ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌(MI vs KKR Live Score) ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಆಯ್ದುಕೊಂಡರು. ಟಾಸ್‌ ಸೋತ ಕೆಕೆಆರ್‌ ಬ್ಯಾಟಿಂಗ್‌ ಆಹ್ವಾನ ಪಡೆಯಿತು.

ವಾಂಖೆಡೆ ಕ್ರಿಡಾಂಗಣದ ಪಿಚ್‌ ಹಿಂದಿನಿಂದೂ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಎಷ್ಟೇ ದೊಡ್ಡ ಮೊತ್ತವಾದರೂ ಇಲ್ಲಿ ಚೇಸಿಂಗ್‌ ನಡೆಸಬಹುದಾಗಿದೆ. ಸಣ್ಣ ಬೌಂಡರಿಗಳು ಮತ್ತು ವೇಗದ ಔಟ್‌-ಫೀಲ್ಡ್‌ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಬಹುದು. ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲೇ ಪಂದ್ಯ ನಡೆಯಲಿದೆ. ಅಂದಿನ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಪಂದ್ಯಲ್ಲಿ ಒಟ್ಟಾರೆ 499 ರನ್‌ ದಾಖಲಾಗಿತ್ತು. ಹೀಗಾಗಿ ಇಂದಿನ ಪಂದ್ಯ ಕೂಡ ಹೈಸ್ಕೋರಿಂಗ್‌ ನಿರೀಕ್ಷೆ ಮಾಡಬಹುದು.

ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ ಕೆಲವು ತಿಂಗಳುಗಳ ಹಿಂದೆ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಅದೇ ವಿಶ್ವಾಸದಲ್ಲಿ ಇಲ್ಲಿಯೂ ಕಣಕ್ಕಿಳಿಯಲಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್, ಹಾರ್ದಿಕ್‌ ಪಾಂಡ್ಯ, ಸ್ಫೋಟಕ ಶೈಲಿಯ ಬ್ಯಾಟರ್ ತಿಲಕ್ ವರ್ಮಾ ಮತ್ತು ‘ಯಾರ್ಕರ್ ಕಿಂಗ್’ ಜಸ್‌ಪ್ರೀತ್ ಬೂಮ್ರಾ ಅವರು ಮುಂಬೈ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಾಹರ್ ಅವರು ವೇಗದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ವಿರಾಟ್‌ ಕೊಹ್ಲಿ!

ಕೋಲ್ಕತ್ತ ತಂಡವು ಮುಂಬೈಗೆ ಸಮಬಲದ ಸವಾಲು ಒಡ್ಡುವ ಸಾಮರ್ಥ್ಯ ಹೊಂದಿದೆ. ಉಪನಾಯಕ ರಿಂಕು ಸಿಂಗ್ ಆಲ್‌ರೌಂಡರ್ ಸುನಿಲ್ ನಾರಾಯಣ್, ಸ್ಪಿನ್‌ ಮೋಡಿಗಾರ ವರುಣ್ ಚಕ್ರವರ್ತಿ ಮತ್ತು ಯುವ ಆಟಗಾರ ಅಂಗಕ್ರಿಷ್ ರಘುವಂಶಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖಾಮುಖಿ ದಾಖಲೆ ನೋಡುವಾಗ ಮುಂಬೈ ತಂಡವೇ ಮುಂದಿದೆ. 35 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್‌ ಗರಿಷ್ಠ 24 ಪಂದ್ಯಗಳನ್ನು ಜಯಿಸಿದೆ. ಕೆಕೆಆರ್‌ 11 ಪಂದ್ಯ ಮಾತ್ರ ಗೆದ್ದಿದೆ.

ಉಭಯ ಆಡುವ ಬಳಗ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್(ವಿ.ಕೀ.), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಶೆರ್ಫಾನ್ ರುದರ್‌ಫೋರ್ಡ್, ನಮನ್ ಧೀರ್, ಶಾರ್ದೂಲ್ ಠಾಕೂರ್, ಮಯಾಂಕ್ ಮಾರ್ಕಾಂಡೆ, ಎಎಮ್ ಗಜನ್‌ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ಇಂಪ್ಯಾಕ್ಟ್‌ ಆಟಗಾರರು: ಸೂರ್ಯಕುಮಾರ್ ಯಾದವ್, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ರಾಜ್ ಬಾವಾ, ಅಶ್ವನಿ ಕುಮಾರ್

ಕೋಲ್ಕತಾ ನೈಟ್‌ರೈಡರ್ಸ್‌: ಫಿನ್ ಅಲೆನ್, ಅಜಿಂಕ್ಯ ರಹಾನೆ(ನಾಯಕ), ಕ್ಯಾಮರೂನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ(ಡಬ್ಲ್ಯೂ), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಬ್ಲೆಸ್ಸಿಂಗ್ ಮುಜರಬಾನಿ.

ಇಂಪ್ಯಾಕ್ಟ್‌ ಆಟಗಾರರು: ಮನೀಶ್ ಪಾಂಡೆ, ರೋವ್ಮನ್ ಪೊವೆಲ್, ಕಾರ್ತಿಕ್ ತ್ಯಾಗಿ, ಸೌರಭ್ ದುಬೆ, ತೇಜಸ್ವಿ ದಹಿಯಾ.