ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs KKR: ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ರೋಹಿತ್‌ ಶರ್ಮ

IPL 2026: ಚೇಸಿಂಗ್‌ ವೇಳೆ ರೋಹಿತ್ ಶರ್ಮಾ (78) ಮತ್ತು ರಿಯಾನ್ ರಿಕೆಲ್ಟನ್ (81) ಬಿರುಸಿನ ಬ್ಯಾಟಿಂಗ್‌ ನಡೆಸಿ ಮೊದಲ ವಿಕೆಟ್ ಜೊತೆಯಾಟದಲ್ಲಿ 148 ರನ್‌ ಸೇರಿಸಿದರು. ಅಂತರ ರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ರೋಹಿತ್ ಅವರು ಟಿ20 ಮಾದರಿಯಲ್ಲಿ ತಮ್ಮ ಲಯ ಕಳೆದುಕೊಂಡಿಲ್ಲ. 205.26 ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

Rohit Sharma

ಮುಂಬಯಿ, ಮಾ.30: ಭಾನುವಾರ ನಡೆದಿದ್ಧ ಕೋಲ್ಕತಾ ನೈಟ್‌ರೈಡರ್ಸ್‌(MI vs KKR) ವಿರುದ್ಧದ ಐಪಿಎಲ್‌(IPL 2026) ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮ(Rohit Sharma) ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪಂದ್ಯದಲ್ಲಿ 78 ರನ್‌ ಬಾರಿಸಿದ ರೋಹಿತ್‌, ಐಪಿಎಲ್‌ನಲ್ಲಿ ಎದುರಾಳಿ ತಂಡದ ವಿರುದ್ಧ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡರು.

ರೋಹಿತ್‌ ಶರ್ಮ ಅವರು ಕೆಕೆಆರ್‌ ವಿರುದ್ಧ 1161* ರನ್‌ ಗಳಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್‌ ಕೊಹ್ಲಿಯ ಹೆಸರಿನಲ್ಲಿತ್ತು. ಕೊಹ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 1159* ರನ್‌ ಬಾರಿಸಿದ್ದರು. ಹಾಲಿ ಆವೃತ್ತಿಯಲ್ಲಿ ಕೊಹ್ಲಿ ಪಂಜಾಬ್‌ ವಿರುದ್ಧ ಇನ್ನಷ್ಟೇ ಪಂದ್ಯ ಆಡಬೇಕಿದೆ. ಹೀಗಾಗಿ ಅವರಿಗೆ ಮತ್ತೆ ಅಗ್ರಸ್ಥಾನ ಪಡೆಯುವ ಅವಕಾಶವಿದೆ.

ಐಪಿಎಲ್‌ನಲ್ಲಿ ಎದುರಾಳಿ ತಂಡವೊಂದರ ವಿರುದ್ಧ ಅತಿ ಹೆಚ್ಚು ರನ್‌ಗಳು

1161 - ರೋಹಿತ್ ಶರ್ಮಾ vs ಕೆಕೆಆರ್*

1159 - ವಿರಾಟ್ ಕೊಹ್ಲಿ vs ಪಿಬಿಕೆಎಸ್

1146 - ವಿರಾಟ್ ಕೊಹ್ಲಿ vs ಸಿಎಸ್‌ಕೆ

1134 - ಡೇವಿಡ್ ವಾರ್ನರ್ vs ಪಿಬಿಕೆಎಸ್

1130 - ವಿರಾಟ್ ಕೊಹ್ಲಿ vs ಡಿಸಿ

1093 - ಡೇವಿಡ್ ವಾರ್ನರ್ vs ಕೆಕೆಆರ್

ಗೆಲುವಿನ ಶುಭಾರಂಭ ಕಂಡ ಮುಂಬೈ

ಪಂದ್ಯದ ಬಗ್ಗೆ ಹೇಳುವುದಾದರೆ ಮುಂಬೈ ಇಂಡಿಯನ್ಸ್‌ ತಂಡ ಆರು ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನೆಡೆಸಿದ ಕೋಲ್ಕತಾ ನೈಟ್‌ರೈಡರ್ಸ್‌ ತಂಡ 4 ವಿಕೆಟ್‌ಗೆ 220 ರನ್‌ ಬಾರಿಸಿದರೂ ಇದನ್ನೂ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಮುಂಬೈ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 224 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

MI vs KKR: ಬೃಹತ್‌ ಮೊತ್ತದ ಮೇಲಾಟದಲ್ಲಿ ಮುಂಬೈಗೆ ಬೊಂಬಾಟ್‌ ಗೆಲುವು

ಚೇಸಿಂಗ್‌ ವೇಳೆ ರೋಹಿತ್ ಶರ್ಮಾ (78) ಮತ್ತು ರಿಯಾನ್ ರಿಕೆಲ್ಟನ್ (81) ಬಿರುಸಿನ ಬ್ಯಾಟಿಂಗ್‌ ನಡೆಸಿ ಮೊದಲ ವಿಕೆಟ್ ಜೊತೆಯಾಟದಲ್ಲಿ 148 ರನ್‌ ಸೇರಿಸಿದರು. ಅಂತರ ರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ರೋಹಿತ್ ಅವರು ಟಿ20 ಮಾದರಿಯಲ್ಲಿ ತಮ್ಮ ಲಯ ಕಳೆದುಕೊಂಡಿಲ್ಲ. 205.26 ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

ಕೋಲ್ಕತ್ತದ ಬೌಲಿಂಗ್ ವಿಭಾಗದ ದೌರ್ಬಲ್ಯ ಅನಾವರಣಗೊಂಡಿತು. ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಕೆಟ್ ಒಲಿಯಲಿಲ್ಲ. ಸುನಿಲ್ ನಾರಾಯಣ್, ವೈಭವ್ ಅರೋರಾ ಮತ್ತು ಕಾರ್ತಿಕ್ ತ್ಯಾಗಿ ತಲಾ ಒಂದು ವಿಕೆಟ್ ಪಡೆದರು.