ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs PBKS: ಇನ್ನೆರಡು ಪಂದ್ಯಕ್ಕೆ ರೋಹಿತ್‌ ಗೈರು; ಖಚಿತಪಡಿಸಿದ ನಾಯಕ ಪಾಂಡ್ಯ

Rohit Sharma: ರೋಹಿತ್‌ ಶರ್ಮ ಮಾತ್ರವಲ್ಲದೆ ಮಿಚೆಲ್ ಸ್ಯಾಂಟ್ನರ್ ಕೂಡ ಅನಾರೋಗ್ಯದ ಕಾರಣ ಪಂದ್ಯದಿಂದ ಹೊರಗುಳಿದರು. ಅವರ ಬದಲಿಯಾಗಿ ಸ್ಪಿನ್-ಬೌಲಿಂಗ್ ಆಲ್ರೌಂಡರ್ ಮಾಯಾಂಕ್ ರಾವತ್ ಅವಕಾಶ ಪಡೆದರು. ರಾವತ್‌ಗೆ ಇದು ಚೊಚ್ಚಲ ಐಪಿಎಲ್‌ ಪಂದ್ಯ.

Rohit Sharma

ಮುಂಬಯಿ, ಎ.16: ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡುವಾಗ ಮಂಡಿರಜ್ಜು ಗಾಯಕ್ಕೆ ಒಳಗಾದ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಟಗಾರ ರೋಹಿತ್‌ ಶರ್ಮ(Rohit Sharma) ಗುರುವಾರದ ಪಂಜಾಬ್‌ ಕಿಂಗ್ಸ್‌(MI vs PBKS) ವಿರುದ್ಧದ ಪಂದ್ಯದಿಂದ ಹೊರಗುಳಿದರು. ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ದುಕೊಂಡಿತು.

ಟಾಸ್‌ ಬಳಿಕ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್‌ ಪಾಂಡ್ಯ, ರೋಹಿತ್‌ ಗಾಯದ ಬಗ್ಗೆಯೂ ಮಾಹಿತಿ ನೀಡಿದರು. ಪಂಜಾಬ್‌ ಮಾತ್ರವಲ್ಲದೆ ಇನ್ನೂ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ದೃಢಪಡಿಸಿದರು.

ಏತನ್ಮಧ್ಯೆ, ರೋಹಿತ್ ಬದಲಿಗೆ ಕ್ವಿಂಟನ್ ಡಿ ಕಾಕ್ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆದರು. ಅವರು ರಯಾನ್ ರಿಕಲ್ಟನ್ ಜೊತೆ ಇನಿಂಗ್ಸ್‌ ಆರಂಭಿಸಲಿದ್ದಾರೆ. ಹಾಲಿ ಆವೃತ್ತಿಯಲ್ಲಿ ಡಿ ಕಾಕ್‌ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ರೋಹಿತ್‌ ಮಾತ್ರವಲ್ಲದೆ ಮಿಚೆಲ್ ಸ್ಯಾಂಟ್ನರ್ ಕೂಡ ಅನಾರೋಗ್ಯದ ಕಾರಣ ಪಂದ್ಯದಿಂದ ಹೊರಗುಳಿದರು. ಅವರ ಬದಲಿಯಾಗಿ ಸ್ಪಿನ್-ಬೌಲಿಂಗ್ ಆಲ್ರೌಂಡರ್ ಮಾಯಾಂಕ್ ರಾವತ್ ಅವಕಾಶ ಪಡೆದರು. ರಾವತ್‌ಗೆ ಇದು ಚೊಚ್ಚಲ ಐಪಿಎಲ್‌ ಪಂದ್ಯ.

RCB vs LSG: ʼಅವಕಾಶಗಳನ್ನು ವ್ಯರ್ಥ ಮಾಡುತ್ತಿದ್ದಾರೆ'; ಅಬ್ದುಲ್ ಸಮದ್ ಬಗ್ಗೆ ತಿವಾರಿ ಟೀಕೆ

ಆರ್‌ಸಿಬಿ ವಿರುದ್ಧ 13 ಎಸೆತಗಳಿಂದ 19 ರನ್‌ಗಳಿಸಿದ್ದ ರೋಹಿತ್‌ ಬಳಿಕ ನೋವಿನಿಂದ ಮೈದಾನ ತೊರೆದಿದ್ದರು. ಸದ್ಯ ಅವರ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದ್ದು, ಸ್ಕ್ಯಾನಿಂಗ್‌ ಮೂಲಕ ಗಾಯದ ಪ್ರಮಾಣ ಎಷ್ಟಿದೆ ಎಂದು ಪರಿಶೀಲನೆ ನಡೆಸಲಿದೆ.

ಉಭಯ ಆಡುವ ಬಳಗ

ಮುಂಬೈ ಇಂಡಿಯನ್ಸ್‌: ಕ್ವಿಂಟನ್ ಡಿ ಕಾಕ್(ವಿ.ಕೀ.), ರಿಯಾನ್ ರಿಕೆಲ್ಟನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ಶೆರ್ಫೇನ್ ರುದರ್‌ಫೋರ್ಡ್, ನಮನ್ ಧೀರ್, ಮಯಾಂಕ್ ರಾವತ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ.

ಪಂಜಾಬ್‌ ಕಿಂಗ್ಸ್‌: ಪ್ರಭ್‌ಸಿಮ್ರಾನ್ ಸಿಂಗ್(ವಿ.ಕೀ.), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್(ನಾಯಕ), ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.