ಮುಂಬಯಿ, ಎ.11: ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಒಂದೇ ದಿನ ಅಂತರದಲ್ಲಿ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ರಾತ್ರಿ ನಡೆಯುವ ಪಂದ್ಯ(MI vs RCB)ದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡವನ್ನು ಎದುರಿಸಲಿದೆ. ಈ ಪಂದ್ಯ ಐಕಾನಿಕ್ ವಾಂಖೆಡೆ ಕ್ರೀಡಾಂಗಣ(Wankhede Stadium Pitch Report)ದಲ್ಲಿ ನಡೆಯಲಿದೆ.
ಪಿಚ್ ರಿಪೋರ್ಟ್
ವಾಂಖೆಡೆ ಕ್ರೀಡಾಂಗಣವು ಬ್ಯಾಟ್ಸ್‌ಮನ್‌ಗಳಿಗೆ ಸರ್ಗ. ಕೆಂಪು ಮಣ್ಣಿನ ಈ ಪಿಚ್ ಸ್ಥಿರವಾದ ವೇಗ ಮತ್ತು ಬೌನ್ಸ್ ನೀಡುತ್ತದೆ. ಇಲ್ಲಿನ ಔಟ್‌ಫೀಲ್ಡ್ ವೇಗವಾಗಿರುವ ಕಾರಣ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ. ರಾತ್ರಿಯ ವೇಳೆ ಇಬ್ಬನಿ ಬೀಳುವ ಕಾರಣ ಎಷ್ಟೇ ದೊಡ್ಡ ಮೊತ್ತವನ್ನಾದರೂ ಇಲ್ಲಿ ಚೇಸಿಂಗ್ ನಡೆಸಬಹುದು. ಹೀಗಾಗಿ ಟಾಸ್ ಕೂಡ ನಿರ್ಣಾಯಕ. ವಾಂಖೆಡೆಯಲ್ಲಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಆರ್‌ಸಿಬಿ ಹೆಸರಿನಲ್ಲಿದೆ. 2015 ರಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ ಕೇವಲ ಒಂದು ವಿಕೆಟ್‌ಗೆ 235 ರನ್ ಬಾರಿಸಿತ್ತು.
ಹವಾಮಾನ ವರದಿ
ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ವೇಳೆ 28°C ನಿಂದ 33°C ತಾಪಮಾನ ಇರಲಿದೆ. ಎರಡನೇ ಇನ್ನಿಂಗ್ಸ್‌ನ 12ನೇ ಓವರ್ ಬಳಿಕ ಹೆಚ್ಚಿನ ಇಬ್ಬನಿ ಬೀಳುವ ನಿರೀಕ್ಷೆಯಿದೆ. ಮಳೆ ಸಾಧ್ಯತೆ ಶೇ.5 ಕ್ಕಿಂತಲೂ ಕಡಿಮೆ ಇದೆ.
ಮುಖಾಮುಖಿ
ಉಭಯ ತಂಡಗಳು ಈವರೆಗೆ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 19 ಪಂದ್ಯಗಳಲ್ಲಿ ಮುಂಬೈ ಗೆದ್ದಿದ್ದರೆ, 15 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಆರ್‌ಸಿಬಿ ಕಳೆದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ. ಐಪಿಎಲ್ 2025 ರಲ್ಲಿ ವಾಂಖೆಡೆಯಲ್ಲಿ ನಡೆದ ಸ್ಮರಣೀಯ ಗೆಲುವು ಈ ಮೈದಾನದಲ್ಲಿ ದಶಕದ ಕಾಲದ ಜಿದ್ದಾಜಿದ್ದಿಗೆ ಅಂತ್ಯ ಹಾಡಿತ್ತು.
ಇತರ ಅಂಕಿ ಅಂಶಗಳು
* ವಿರಾಟ್ ಕೊಹ್ಲಿ ಮುಂಬೈ ವಿರುದ್ಧ ಒಟ್ಟು 855 ರನ್ ಗಳಿಸಿದ್ದಾರೆ. ಮುಂಬೈ ವಿರುದ್ಧ ಅವರು 40 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ.
* ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು 5 ಬಾರಿ ಔಟ್ ಮಾಡಿದ್ದಾರೆ.
* ಆರ್‌ಸಿಬಿ ವಿರುದ್ಧ ವಾಂಖೆಡೆಯಲ್ಲಿ ಮುಂಬೈ ತಂಡದ ದಾಖಲೆ ಅದ್ಭುತವಾಗಿದೆ. ತವರಿನಲ್ಲಿ ಮುಂವೈ 12 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಸಾಧಿಸಿದೆ.
RCB vs RR: ʼಡಿಯರ್ ವೈಭವ್ʼ; ಸೂರ್ಯವಂಶಿಯನ್ನು ಕೊಂಡಾಡಿದ ವಿರಾಟ್ ಕೊಹ್ಲಿ
ಸಂಭಾವ್ಯ ತಂಡಗಳು
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜೋಶ್ ಹ್ಯಾಜಲ್‌ವುಡ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ (ವಿ.ಕೀ.), ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಎ. ಎಮ್ ಗಜನ್ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.