ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಮನ್ವೆಲ್ತ್​ ದಾಖಲೆಯೊಂದಿಗೆ ಹ್ಯಾಟ್ರಿಕ್ ಚಿನ್ನ ಗೆದ್ದ ಮೀರಾಬಾಯಿ ಚಾನು

Mirabai Chanu: ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ರಿಶಿಕಾಂತ ಸಿಂಗ್ ತಮ್ಮ ಅಂತಿಮ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ 151 ಕೆಜಿ ತೂಕ ಎತ್ತುವಲ್ಲಿ ವಿಫಲರಾಗಿ ಬೆಳ್ಳಿ ಪದಕ ಗೆದ್ದರು. ಮಣಿಪುರದ ಲಿಫ್ಟರ್ ಒಟ್ಟು 264 ಕೆಜಿ ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.

Mirabai Chanu

ಗ್ಲಾಸ್ಗೋ, ಜು.26: ಕಾಮನ್ವೆಲ್ತ್​ ಗೇಮ್ಸ್​ನಲ್ಲಿ (Commonwealth Games) ಭಾರತ ಚಿನ್ನದ ಪದಕ ಖಾತೆ ತೆರೆದಿದೆ. ಭಾನುವಾರ ನಡೆದ ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತೆ ಮೀರಾಬಾಯಿ ಚಾನು (Mirabai Chanu) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಒಟ್ಟು 190 ಕೆಜಿ ಭಾರ ಎತ್ತುವ ಮೂಲಕ ಕಾಮನ್ವೆಲ್ತ್​ ಗೇಮ್ಸ್​ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದು ಈ ಕೂಟದಲ್ಲಿ ಚಾನು ಗೆದ್ದ ಹ್ಯಾಟ್ರಿಕ್​ ಬಂಗಾರದ ಸಾಧನೆಯಾಗಿದೆ. ಕಳೆದ 2 ಆವೃತ್ತಿಗಳಲ್ಲಿ ಅವರು ಚಿನ್ನದ ಪದಕ ಗೆದ್ದು ಬೀಗಿದ್ದರು.

ಸ್ನ್ಯಾಚ್ ವಿಭಾಗದ ಮೊದಲ ಯತ್ನದಲ್ಲಿ ವಿಫಲವಾದ ಚಾನು ಆ ಬಳಿಕದ ಎರಡು ಮತ್ತು ಮೂರನೇ ಯತ್ನದಲ್ಲಿ ಕ್ರಮವಾಗಿ 82, 85 ಕೆಜಿ ತೂಕ ಎತ್ತಿ ಕಮ್‌ಬ್ಯಾಕ್‌ ಮಾಡಿದರು. 85 ಕೆಜಿ ತೂಕ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ದಾಖಲೆಯನ್ನು ಬರೆದರು. ಆದರೆ ಕ್ಲೀನ್ ಮತ್ತು ಜರ್ಕ್‌ನ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಮೊಣಕೈ ನೋವಿಗೆ ಸಿಲುಕಿದ ಒತ್ತಡದ ನಡುವೆಯೂ ಎರಡನೇ ಯತ್ನದಲ್ಲಿ 105 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು.

ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್​ಸ್ವೀಪ್‌ ಸಾಧನೆಗೈದ ಭಾರತ; ಅಂತಿಮ ಪಂದ್ಯದಲ್ಲಿ 35 ರನ್‌ ಗೆಲುವು

2018 ರ ಗೋಲ್ಡ್ ಕೋಸ್ಟ್ ಕ್ರೀಡಾಕೂಟದಲ್ಲಿ ಚಾನು, ಕ್ಲೀನ್ ಮತ್ತು ಜರ್ಕ್‌ನಲ್ಲಿ 110 ಕೆಜಿ ತೂಕ ಎತ್ತುವ ಮೂಲಕ ಕ್ಲೀನ್ ಮತ್ತು ಜರ್ಕ್‌ನಲ್ಲಿ ದಾಖಲೆ ಬರೆದಿದ್ದರು. ಈ ಬಾರಿ ತಮ್ಮದೇ ಆದ ದಾಖಲೆಯನ್ನು ಮುರಿಯುವ ಅವಕಾಶ ಅವರ ಮುಂದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.



ಫೈನಲ್‌ನಲ್ಲಿ ಆರಂಭಿಕ ಹಂತದಲ್ಲಿಯೇ ವಿವಾದವೊಂದು ನಡೆಯಿತು. ಕೀನ್ಯಾದ ಜಾನೆಟ್ ಅಟಿಯೆನೊ ಒಡುರ್ ಅವರ ಆರಂಭಿಕ ಸ್ನ್ಯಾಚ್ ಪ್ರಯತ್ನವು ಓವರ್‌ಹೆಡ್ ಸ್ಥಾನದ ಸಮಯದಲ್ಲಿ ಮೊಣಕೈ ನಡುಗುವಿಕೆ ಕಂಡುಬಂದಿದೆ ಎಂದು ತೀರ್ಪುಗಾರರು ಅಮಾನ್ಯಗೊಳಿಸಿದರು. ಅವರ ಎರಡನೇ ಪ್ರಯತ್ನವನ್ನು ಅಧಿಕಾರಿಗಳು ತಿರಸ್ಕರಿಸಿದರು, ಇದರಿಂದಾಗಿ ಕೀನ್ಯಾದ ಆಟಗಾರ್ತಿ ಅಂತಿಮ ಲಿಫ್ಟ್‌ಗೆ ಹೋಗುವ ದಾರಿಯಲ್ಲಿ ಅಪಾರ ಒತ್ತಡಕ್ಕೆ ಒಳಗಾದರು. ಅಂತಿಮ ಪ್ರಯತ್ನದಲ್ಲಿ 58 ಕೆಜಿ ತೂಕ ಎತ್ತಿದರು.

ಬೆಳ್ಳಿ ಗೆದ್ದ ರಿಶಿಕಾಂತ

ಇದಕ್ಕೂ ಮುನ್ನ ನಡೆದಿದ್ದ ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ರಿಶಿಕಾಂತ ಸಿಂಗ್ ತಮ್ಮ ಅಂತಿಮ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ 151 ಕೆಜಿ ತೂಕ ಎತ್ತುವಲ್ಲಿ ವಿಫಲರಾಗಿ ಬೆಳ್ಳಿ ಪದಕ ಗೆದ್ದರು. ಮಣಿಪುರದ ಲಿಫ್ಟರ್ ಒಟ್ಟು 264 ಕೆಜಿ ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.

ಮೊಹಂತಿಗೆ 15ನೇ ಸ್ಥಾನ

ಪುರುಷರ ಜಿಮ್ನಾಸ್ಟಿಕ್‌ ವೈಯಕ್ತಿಕ ಆಲ್-ರೌಂಡ್ ಫೈನಲ್‌ನಲ್ಲಿ ಭಾರತದ ತಪನ್ ಮೊಹಂತಿ 15 ನೇ ಸ್ಥಾನ ಪಡೆದರು. ಸ್ಕಾಟ್ಲೆಂಡ್‌ನ ರೂಬೆನ್ ವಾರ್ಡ್ ಚಿನ್ನ ಗೆದ್ದರೆ, ಕೆನಡಾದ ಫೆಲಿಕ್ಸ್ ಡೋಲ್ಸಿ ಮತ್ತು ಆಸ್ಟ್ರೇಲಿಯಾದ ಜೆಸ್ಸಿ ಮೂರ್ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.