ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಉಳಿದ ಪಂದ್ಯ ಆಡದಂತೆ ವಿದೇಶಿ ಆಟಗಾರರಿಗೆ ಮನವಿ ಮಾಡಿದ ಆಸೀಸ್‌ ವೇಗಿ

ವಿದೇಶಿ ಆಟಗಾರರು ಉಳಿದ ಐಪಿಎಲ್ ಪಂದ್ಯಗಳಿಂದ ದೂರವಿರುವುದೇ ಉತ್ತಮ ನಿರ್ಧಾರ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದೆ. ಜೀವ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಬಾರಿಯ ಐಪಿಎಲ್‌ ಆಡುವುದು ಅಷ್ಟು ಸುರಕ್ಷಿತವಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಹೇಳಿದ್ದಾರೆ.

ಸಿಡ್ನಿ: ಸುರಕ್ಷತೆಯ ದೃಷ್ಟಿಯಿಂದ ಉಳಿದ ಐಪಿಎಲ್‌(IPL 2025) ಪಂದ್ಯಗಳಲ್ಲಿ ವಿದೇಶಿ ಆಟಗಾರರು ಪಾಲ್ಗೊಳ್ಳಬಾರದು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್(Mitchell Johnson) ಹೇಳಿದ್ದಾರೆ. 'ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಕೂಡ ಆಟಗಾರರು ಈ ಬಾರಿ ವೇತನಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡುವುದು ಸೂಕ್ತ' ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್‌ ಟೂರ್ನಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಟೂರ್ನಿ ಶನಿವಾರದಿಂದ ಮತ್ತೆ ಆರಂಭವಾಗಲಿದೆ. ತವರಿಗೆ ಮರಳಿದ ಅನೇಕ ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಹೀಗಿದ್ದರೂ ಬಿಸಿಸಿಐ ವಿದೇಶಿ ಕ್ರಿಕೆಟ್‌ ಮಂಡಳಿ ಜತೆ ತಮ್ಮ ದೇಶದ ಆಟಗಾರರನ್ನು ಐಪಿಎಲ್‌ಗೆ ಕಳಿಸುವಂತೆ ಒತ್ತಾಯಿಸುತ್ತಿದೆ.

ಈ ಬಗ್ಗೆ ಮಾತನಾಡಿದ ಮಿಚೆಲ್‌ ಸ್ಟಾರ್ಕ್‌, ವಿದೇಶಿ ಆಟಗಾರರು ಉಳಿದ ಐಪಿಎಲ್ ಪಂದ್ಯಗಳಿಂದ ದೂರವಿರುವುದೇ ಉತ್ತಮ ನಿರ್ಧಾರ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದೆ. ಜೀವ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಬಾರಿಯ ಐಪಿಎಲ್‌ ಆಡುವುದು ಅಷ್ಟು ಸುರಕ್ಷಿತವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2025: ಪ್ಲೇ ಆಫ್‌ ಪಂದ್ಯಕ್ಕೆ ಗುಜರಾತ್‌ ಟೈಟಾನ್ಸ್‌ ಸೇರಿದ ಕುಸಲ್‌ ಮೆಂಡಿಸ್‌

'ತವರು ನೆಲಕ್ಕೆ ಹಿಂದಿರುಗಿದ್ದ ಬಹುತೇಕ ವಿದೇಶಿ ಆಟಗಾರರು ಉಳಿದ ಪಂದ್ಯಗಳಿಗೆ ಮರಳುವ ನಿರೀಕ್ಷೆಯಿದ್ದರೂ, ಕೆಲವರು ಆತಂಕದಲ್ಲಿದ್ದಾರೆ. ಆಟದ ಮೇಲಿನ ಉತ್ಸಾಹ ಅಚಲವಾಗಿದ್ದರೂ, ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು' ಎಂದು ಜಾನ್ಸನ್ ಹೇಳಿದ್ದಾರೆ.