ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ನೂತನ ದಾಖಲೆ ಬರೆದ ಮಿಚೆಲ್‌ ಮಾರ್ಷ್‌

Mitchell Marsh Creates History: ಈ ವರ್ಷದ ಆರಂಭದಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡ ಬಿಬಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಷ್ ಸಹಾಯ ಮಾಡಿದರು, ಆದರೆ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು.

Mitchell Marsh

ಲಂಡನ್‌, ಆ.11: 'ದಿ ಹಂಡ್ರೆಡ್‌' ಕ್ರಿಕೆಟ್‌ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಅಬ್ಬರಿಸುತ್ತಿರುವ ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್‌ ಮಾರ್ಷ್‌ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಸನ್‌ರೈಸರ್ಸ್ ಲೀಡ್ಸ್ ತಂಡದ ಪ್ರಸ್ತುತ ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ 32 ರನ್‌ ಗಳಿಸಿದ ಮಾರ್ಷ್, ಪುರುಷರ ಹಂಡ್ರೆಡ್‌ನ ಒಂದೇ ಆವೃತ್ತಿಯಲ್ಲಿ 400 ರನ್ ಗಳಿಸಿದ ಮೊದಲ ವಿದೇಶಿ ಆಟಗಾರ ಮತ್ತು ಒಟ್ಟಾರೆಯಾಗಿ ಎರಡನೇ ಕ್ರಿಕೆಟಿಗ ಎನಿಸಿದರು. ಇಂಗ್ಲೆಂಡ್‌ನ ಜೇಮ್ಸ್ ವಿನ್ಸ್ ಈ ಸಾಧನೆ ಮಾಡಿದ ಮೊದಲ ಆಟಗಾರ. ಅವರು 2024 ರ ದಿ ಹಂಡ್ರೆಡ್ ಆವೃತ್ತಿಯಲ್ಲಿ ಸದರ್ನ್ ಬ್ರೇವ್ ಪರ 10 ಪಂದ್ಯಗಳನ್ನು ಆಡಿದರು ಮತ್ತು 424 ರನ್ ಗಳಿಸಿದರು.

ಮಂಗಳವಾರ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ನೂರ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಬಂದ ಅವರ ಏಕೈಕ ಸಿಕ್ಸರ್, 2026 ರಲ್ಲಿ 36 ಟಿ20 ಪಂದ್ಯಗಳಲ್ಲಿ ಅವರ ಸಿಕ್ಸರ್‌ಗಳ ಸಂಖ್ಯೆಯನ್ನು 94 ಕ್ಕೆ ಏರಿಸಿತು. ಆಸ್ಟ್ರೇಲಿಯಾದ ಯಾವುದೇ ಆಟಗಾರ ಟಿ20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಮಾರ್ಷ್‌ಗಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿಲ್ಲ. 2025 ರಲ್ಲಿ, ಟಿಮ್ ಡೇವಿಡ್ ಕೂಡ 56 ಟಿ20 ಪಂದ್ಯಗಳಲ್ಲಿ 94 ಸಿಕ್ಸರ್‌ಗಳನ್ನು ಬಾರಿಸಿದರು.

ಭಾರತದಂತೆ ಶ್ರೀಲಂಕಾ ತಂಡಕ್ಕೂ ಗಾಯದ ಹೊಡೆತ; ಸ್ಟಾರ್‌ ಆಟಗಾರರು ಅಲಭ್ಯ

2026 ರಲ್ಲಿ, ದಿ ಹಂಡ್ರೆಡ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ಮತ್ತು ಟಿ20ಐಗಳಲ್ಲಿ ಆಸ್ಟ್ರೇಲಿಯಾ ಪರ ಆಡುವುದರ ಜೊತೆಗೆ, ಮಾರ್ಷ್ ಐಪಿಎಲ್ 2026 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು 2025-26 ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡ ಬಿಬಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಷ್ ಸಹಾಯ ಮಾಡಿದರು, ಆದರೆ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು.

ಪುರುಷರ ಹಂಡ್ರೆಟ್‌ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳು

ಜೇಮ್ಸ್ ವಿನ್ಸ್-424 ರನ್‌(2024)

ಮಿಚೆಲ್ ಮಾರ್ಷ್-406* ರನ್‌(2026)

ಜೋಸ್ ಬಟ್ಲರ್- 391 ರನ್‌(2023)

ಡೇವಿಡ್ ಮಲನ್-377 ರನ್‌(2022)

ಜೋರ್ಡಾನ್ ಕಾಕ್ಸ್- 367 ರನ್‌(2025)

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಸಿಕ್ಸರ್‌(ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್)

ಮಿಚೆಲ್ ಮಾರ್ಷ್-36(2026)

ಟಿಮ್ ಡೇವಿಡ್-56(2025)

ಟಿಮ್ ಡೇವಿಡ್ -73 (2022)

ಟ್ರಾವಿಸ್ ಹೆಡ್- 39 (2024)

ಮಿಚೆಲ್ ಓವನ್-50 (2025)