ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohammed Siraj: ದಂಡ ವಿಧಿಸಿದ್ದು ಸರಿಯಲ್ಲ; ಸಿರಾಜ್‌ ಬೆಂಬಲಕ್ಕೆ ನಿಂತ ಇಂಗ್ಲೆಂಡ್‌ ಮಾಜಿ ನಾಯಕ

ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ವೇಳೆ, ಆರಂಭಿಕ ಬ್ಯಾಟರ್‌ ಬೆನ್‌ ಡಕೆಟ್‌ ಅವರು 12 ರನ್‌ಗಳಿಸಿ ಸಿರಾಜ್‌ ಎಸೆತದಲ್ಲಿ ಬುಮ್ರಾಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು. ಪೆವಿಲಿಯನ್‌ ಕಡೆ ತೆರಳುತ್ತಿದ್ದಾಗ ಸಿರಾಜ್‌ ಅವರು ಡಕೆಡ್‌ ಬಳಿ ಜೋರಾಗಿ ಕಿರಿಚಿದ್ದರು. ಇದು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಸಿರಾಜ್‌ಗೆ ದಂಡ ವಿಧಿಸಲಾಗಿತ್ತು.

ಲಂಡನ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟರ್‌ ಬೆನ್‌ ಡಕೆಟ್‌(Ben Duckett) ವಿಕೆಟ್‌ ಪಡೆದು ಸಂಭ್ರಮಿಸಿದ್ದ ಸಂದರ್ಭದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವೇಗಿ ಮೊಹಮ್ಮದ್‌ ಸಿರಾಜ್‌(Mohammed Siraj)ಗೆ ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ಹಾಗೂ ಒಂದು ಡಿಮೆರಿಟ್‌ ಪಾಯಿಂಟ್‌ ನೀಡಲಾಗಿತ್ತು. ಇದೀಗ ಇಂಗ್ಲೆಂಡ್‌ ಮಾಜಿ ನಾಯಕ ನಾಸರ್​ ಹುಸೇನ್(Nasser Hussain) ಸಿರಾಜ್‌ಗೆ ಐಸಿಸಿ ದಂಡ ವಿಧಿಸಬಾರದಿತ್ತು ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ನಾಸರ್​ ಹುಸೇನ್, ಸಿರಾಜ್‌ ಅವರ ಸಂಭ್ರಮಾಚರಣೆ ಅಸಭ್ಯವಾಗಿರಲಿಲ್ಲ. ಆ ಕ್ಷಣದ ಉದ್ವಿಗ್ನತೆಗೆ ಅದು ಸರಿಯಾಗಿತ್ತು. ಇದು ಭಾವನೆಗಳ ಆಟ ಎಂದು ನಾನು ಭಾವಿಸುತ್ತೇನೆ ಮತ್ತು ನಮಗೆ 22 ರೋಬೋಟ್‌ಗಳ ಆಟ ಅಗತ್ಯವಿಲ್ಲ ಎಂಉ ಹೇಳುವ ಮೂಲಕ ಸಿರಾಜ್‌ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ವೇಳೆ, ಆರಂಭಿಕ ಬ್ಯಾಟರ್‌ ಬೆನ್‌ ಡಕೆಟ್‌ ಅವರು 12 ರನ್‌ಗಳಿಸಿ ಸಿರಾಜ್‌ ಎಸೆತದಲ್ಲಿ ಬುಮ್ರಾಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು. ಪೆವಿಲಿಯನ್‌ ಕಡೆ ತೆರಳುತ್ತಿದ್ದಾಗ ಸಿರಾಜ್‌ ಅವರು ಡಕೆಡ್‌ ಬಳಿ ಜೋರಾಗಿ ಕಿರಿಚಿದ್ದರು. ಇದು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಸಿರಾಜ್‌ಗೆ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ IND vs ENG 4th Test: ರೋಹಿತ್‌ ದಾಖಲೆ ಮುರಿಯುವ ಸನಿಹ ರಿಷಭ್‌ ಪಂತ್‌

ಐಸಿಸಿ ನೀತಿ ಸಂಹಿತೆಯ ಪ್ರಕಾರ, ಔಟ್‌ ಆದ ಬ್ಯಾಟರ್‌ನ ಸಮೀಪದಲ್ಲಿ ಅತಿಯಾದ ಸಂಭ್ರಮಾಚರಣೆ ಮಾಡುವಂತಿಲ್ಲ. ತಾನು ಮಾಡಿರುವ ತಪ್ಪನ್ನು ಸಿರಾಜ್‌ ಒಪ್ಪಿಕೊಂಡಿದ್ದರು. ಕಳೆದ 24 ತಿಂಗಳ ಅವಧಿಯಲ್ಲಿ ಸಿರಾಜ್‌ ಅವರು ಐಸಿಸಿ ನೀತಿ ಸಂಹಿತೆಯನ್ನು ಎರಡು ಬಾರಿ ಉಲ್ಲಂಘಿಸಿದ್ದಾರೆ. ಆಸ್ಟೇಲಿಯಾ ವಿರುದ್ದ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದ ವೇಳೆಯೂ ಇಂಥದ್ದೇ ಶಿಕ್ಷೆಗೆ ಗುರಿಯಾಗಿದ್ದರು. ನಾಲ್ಕು ಬಾರಿ ಉಲ್ಲಂಘಿಸಿದರೆ ಒಂದು ಅಂತರರಾಷ್ಟೀಯ ಟೆಸ್ಟ್‌ ಪಂದ್ಯದಿಂದ ಅಮಾನತು ಮಾಡಲಾಗುತ್ತದೆ.