ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohsin Naqvi: ಷರತ್ತಿಗೆ ಒಪ್ಪಿದರೆ ಏಷ್ಯಾಕಪ್​ ಟ್ರೋಫಿ ನೀಡುವೆ; ಭಾರತಕ್ಕೆ ನಖ್ವಿ ತಾಕೀತು

ಮಂಗಳವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಅನ್ನು ಪ್ರತಿನಿಧಿಸುವ ಸಭೆಯಲ್ಲಿ ಭಾಗವಹಿಸಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ನಖ್ವಿ ಅವರನ್ನು ಕಠಿಣ ಪ್ರಶ್ನೆಗಳನ್ನು ಕೇಳಿ, ವಿಜೇತ ಭಾರತ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸದಿದ್ದಕ್ಕಾಗಿ ಮೊಹ್ಸಿನ್ ನಖ್ವಿಯನ್ನು ಕೆಣಕಿದರು.

ನವದೆಹಲಿ: ಏಷ್ಯಾಕಪ್(Asia Cup 2025)​ ಫೈನಲ್​ ಮುಗಿದು ಎರಡು ದಿನಗಳು ಕಳೆದಿದೆ. ಆದರೂ ಭಾರತಕ್ಕೆ ಸಿಗಬೇಕಾದ ಟ್ರೋಫಿ ಮತ್ತು ಪದಕಗಳು ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಬಿಸಿಸಿಐ ಮಂಗಳವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ, ಮೊಹ್ಸಿನ್ ನಖ್ವಿ(Mohsin Naqvi) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಐಸಿಸಿಗೆ ದೂರು ನೀಡಿದೆ. ಇದರ ಬೆನ್ನಲ್ಲೇ ನಖ್ವಿ, ಟ್ರೋಫಿ ನೀಡಬೇಕಾದರೆ ತಮ್ಮ ಷರತ್ತಿಗೆ ಒಪ್ಪಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಷರತ್ತು ಏನು?

ಏಷ್ಯಾಕಪ್​ ಟ್ರೋಫಿ ಭಾರತಕ್ಕೆ ವಾಪಸ್​ ನೀಡಬೇಕಾದರೆ ಒಂದು ಔಪಚಾರಿಕ ಕಾರ್ಯಕ್ರಮವನ್ನು ಆಯೋಜಿಸಿ. ಈ ಕಾರ್ಯಕ್ರಮದಲ್ಲಿ ನಾಯಕ ಸೂರ್ಯಕುಮಾರ್​ ಯಾದವ್​ ಸಮೇತವಾಗಿ ಭಾರತ ತಂಡದ ಆಟಗಾರರು ಭಾಗಿಯಾಗಬೇಕು. ಅಲ್ಲಿ ನಾನೇ ಸ್ವತಃ ನನ್ನ ಕೈಯಿಂದ ಟ್ರೋಫಿ ಮತ್ತು ಪದಕಗಳನ್ನು ಹಸ್ತಾಂತರಿಸುವೆ ಎಂಬ ಷರತ್ತನ್ನು ನಖ್ವಿ ವಿಧಿಸಿದ್ದಾಗಿ ವರದಿ ಆಗಿವೆ. ಒಂದೊಮ್ಮೆ ನಖ್ವಿ ಈ ಷರತ್ತು ಹಾಕಿದ್ದೇ ಆದ್ದಲ್ಲಿ ಬಿಸಿಸಿಐ ಇದಕ್ಕೆ ಒಪ್ಪುವ ಸಾಧ್ಯತೆ ಕಡಿಮೆ.

ನಖ್ವಿ ಅವರ ಈ ನಡೆಗೆ ಆಕ್ರೋಶ ಹೊರಹಾಕಿರುವ ಬಿಸಿಸಿಐ, ಈ ವಿಷಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಗೆ ದೂರು ನೀಡಿದ್ದು ಅವರನ್ನು ಎಸಿಸಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವಂತೆ ಆಗ್ರಹಿಸಿದೆ.

ಪಹಲ್ಗಾಂ ದಾಳಿ ಕಾರಣ ಭಾರತೀಯ ಆಟಗಾರರು ನಖ್ವಿ ಕೈಯಿಂದ ಟ್ರೋಫಿ, ಪದಕ ಸ್ವೀಕರಿಸಲು ಸಿದ್ಧರಿರಲಿಲ್ಲ. ಬದಲಾಗಿ, ವೇದಿಕೆ ಮೇಲಿದ್ದ ಬೇರೆ ಯಾವುದೇ ಗಣ್ಯರಿಂದ ಟ್ರೋಫಿ ಸ್ವೀಕರಿಸಲು ಭಾರತ ತಯಾರಿತ್ತು. ಆದರೆ ಪಟ್ಟುಬಿಡದ ನಖ್ವಿ ತನ್ನ ಕೈಗಳಿಂದಲೇ ಟ್ರೋಫಿ ಸ್ವೀಕರಿಸಬೇಕು ಎನ್ನುವ ಜಿದ್ದಿಗೆ ಬಿದ್ದು ಕೊನೆಗೆ ಟ್ರೋಫಿ ಮತ್ತು ಪದಕಗಳನ್ನು ತಮ್ಮ ಹೋಟೆಲ್‌ ಕೋಣೆಗೆ ಹೊತ್ತೊಯ್ದಿದ್ದರು.

ಇದನ್ನೂ ಓದಿ Mohsin Naqvi: ಮೊಹ್ಸಿನ್ ನಖ್ವಿ ವಿರುದ್ಧ ಬಿಸಿಸಿಐ ವಿಚಾರಣೆ; ಐಸಿಸಿಗೆ ದೂರು