ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohun Bagan: ಭಾರತ ಶಿಬಿರಕ್ಕೆ ಆಟಗಾರರ ಕಳುಹಿಸಲು ಮೋಹನ್ ಬಗಾನ್ ನಕಾರ!

ಈ ವರ್ಷದ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ನಾಯಕ ಸುಭಾಶಿಶ್ ಬೋಸ್ ಅವರ ಪ್ರಕರಣವನ್ನು ಮೋಹನ್ ಬಗಾನ್ ಮುಂದಿಟ್ಟು ಪೂರ್ವಸಿದ್ಧತಾ ಶಿಬಿರಕ್ಕೆ ಕಳುಹಿಸಲ್ಲ ಎಂದಿದೆ.

ಗಾಯದ ಭೀತಿ; ಭಾರತ ಶಿಬಿರಕ್ಕೆ ಆಟಗಾರರ ಕಳುಹಿಸಲು ಬಗಾನ್ ನಕಾರ!

Abhilash BC Abhilash BC Aug 19, 2025 11:48 AM

ಕೋಲ್ಕತಾ: ಎಐಎಫ್‌ಎಫ್‌(AIFF) ಆಟಗಾರರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಕಾರಣಕ್ಕೆ ಇಂಡಿಯನ್ ಸೂಪರ್‌ ಲೀಗ್‌ನ ಹಾಲಿ ಚಾಂಪಿಯನ್ ಮೋಹನ್ ಬಗಾನ್(Mohun Bagan) ತಂಡವು ಭಾರತ ತಂಡದ ಶಿಬಿರಕ್ಕೆ ತನ್ನ ಆಟಗಾರರನ್ನು ಕಳುಹಿಸದಿರಲು ನಿರ್ಧರಿಸಿದೆ. ನೇಷನ್ಸ್‌ ಕಪ್‌ಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪೂರ್ವಸಿದ್ಧತಾ ಶಿಬಿರಕ್ಕೆ ಎಐಎಫ್‌ಎಫ್‌ 35 ಆಟಗಾರರ ಪಟ್ಟಿ ಪ್ರಕಟಿಸಿತ್ತು. ಆದರೆ ಬಗಾನ್‌ 7 ಆಟಗಾರರು ಸೇರಿ ಒಟ್ಟು 13 ಮಂದಿ ಶಿಬಿರಕ್ಕೆ ಸೇರ್ಪಡೆಗೊಂಡಿಲ್ಲ.

ಆಟಗಾರರನ್ನು ಕೂಡಲೇ ಶಿಬಿರಕ್ಕೆ ಕಳುಹಿಸಲು ಎಐಎಫ್‌ಎಫ್‌ ಕೋರಿದೆ. ಆದರೆ ಇದನ್ನು ಬಗಾನ್‌ ತಿರಸ್ಕರಿಸಿದೆ. ‘ಎಐಎಫ್‌ಎಫ್‌ ಆಟಗಾರರ ಗಾಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು. ನಮ್ಮ ಆಟಗಾರರನ್ನು ಕರೆದುಕೊಂಡು ಹೋದ ಬಳಿಕ 3-4 ಮಂದಿ ಗಾಯಗೊಂಡು ಹಿಂತಿರುಗುತ್ತಾರೆ. ಆದರೆ ಫೆಡರೇಷನ್ ಈ ಬಗ್ಗೆ ಗಮನವಹಿಸಿಲ್ಲ’ ಎಂದು ಆರೋಪಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ನಾಯಕ ಸುಭಾಶಿಶ್ ಬೋಸ್ ಅವರ ಪ್ರಕರಣವನ್ನು ಮೋಹನ್ ಬಗಾನ್ ಮುಂದಿಟ್ಟು ಪೂರ್ವಸಿದ್ಧತಾ ಶಿಬಿರಕ್ಕೆ ಕಳುಹಿಸಲ್ಲ ಎಂದಿದೆ.

ಇದನ್ನೂ ಓದಿ ಆ. 22 ರಂದು ಸುಪ್ರೀಂ ಕೋರ್ಟ್‌ನಲ್ಲಿ ಐಎಸ್‌ಎಲ್‌ ಬಿಕ್ಕಟ್ಟಿನ ವಿಚಾರಣೆ

"ಸುಭಾಶಿಶ್ ಬೋಸ್ ಅವರನ್ನು ನೋಡಿ. ಅವರು ಪುನರ್ವಸತಿಯಲ್ಲಿದ್ದಾರೆ. ಇಲ್ಲಿಯವರೆಗೆ ಇಡೀ ಋತುವನ್ನು ತಪ್ಪಿಸಿಕೊಂಡಿದ್ದಾರೆ. ನಾವು ಅವರ ಸಂಬಳವನ್ನು ಪಾವತಿಸುತ್ತಿದ್ದೇವೆ. ಆದರೆ ಫೆಡರೇಶನ್ ಅವರ ಬಗ್ಗೆ ವಿಚಾರಿಸಲು ಒಮ್ಮೆಯೂ ಕರೆ ಮಾಡಿಲ್ಲ. ಕ್ಲಬ್ ತನ್ನ ಆಟಗಾರರನ್ನು ಬಿಡುಗಡೆ ಮಾಡುವುದು ಕಡ್ಡಾಯವಲ್ಲ. ಆದ್ದರಿಂದ, ನಾವು ಈ ಶಿಬಿರಕ್ಕೆ ಯಾರನ್ನೂ ಬಿಡುಗಡೆ ಮಾಡುತ್ತಿಲ್ಲ" ಎಂದು ಬಗಾನ್ ತಂಡದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.