ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೇಕ್‌ ತಿನ್ನಿಸಲು ಬಂದ ಜೈಸ್ವಾಲ್‌ಗೆ ಖಡಕ್‌ ಎಚ್ಚರಿಕೆ ನೀಡಿದ ರೋಹಿತ್‌; ವೈರಲ್‌ ವಿಡಿಯೊ ಇಲ್ಲಿದೆ

Rohit Sharma: ತವರಿನ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ರೋಹಿತ್‌ ಎರಡು ಅರ್ಧಶತಕ ಬಾರಿಸಿ ಮಿಂಚಿದ್ದರು. ವಿಶಾಖಪಟ್ಟಣದಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ, ಅವರು 73 ಎಸೆತಗಳಲ್ಲಿ 75 ರನ್ ಗಳಿಸಿದರು, ಸರಣಿಯನ್ನು ಗೆಲ್ಲುವ ಹಾದಿಯಲ್ಲಿ ಭಾರತಕ್ಕೆ ಬಲವಾದ ಆರಂಭಿಕ ಜೊತೆಯಾಟವನ್ನು ನೀಡಿದರು.

ವಿಶಾಖಪಟ್ಟಣ, ಡಿ.7: ಶನಿವಾರ ವಿಶಾಖಪಟ್ಟಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ 9 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ(IND vs SA)ವನ್ನು ಸೋಲಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಸರಣಿ ಗೆಲುವಿನ ಬಳಿಕ ಸಂಭ್ರಮಾಚರಣೆ ವೇಳೆ ರೋಹಿತ್‌ ಶರ್ಮ(Rohit Sharma) ಅವರ ಒಂದು ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(viral video) ಆಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಕದಿನ ಸರಣಿ ಗೆದ್ದ ನಂತರ, ಚೊಚ್ಚಲ ಏಕದಿನ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಸಂಭ್ರಮಾಚರಣೆಯ ಕೇಕ್ ಕತ್ತರಿಸಿದರು. ವಿರಾಟ್ ಕೊಹ್ಲಿ ಜೊತೆಗೂಡಿದರು. ಆದರೆ ರೋಹಿತ್ ಶರ್ಮಾ ಕೇಕ್‌ ತಿನ್ನಲು ನಿರಾಕರಿಸಿದರು. ಕೇಕ್‌ ತಿನ್ನಿಸಲು ಬಂದ ಜೈಸ್ವಾಲ್‌ಗೆ ಬೇಡ ಮಾರಾಯ ನಾನು ಮತ್ತೆ ದಪ್ಪಗಾಗುತ್ತೇನೆ ಎಂದರು. ರೋಹಿತ್‌ ಅವರ ಈ ಮಾತು ಕೇಳಿ ಸಹ ಆಟಗಾರರು ಒಂದು ಕ್ಷಣ ನಗೆಗಡಲಲ್ಲಿ ತೇಲಿದರು.

ಫಿಟ್‌ನೆಸ್‌ಗೆ ಆಧ್ಯತೆ ನೀಡದೇ ದಪ್ಪನಾಗಿದ್ದ ರೋಹಿತ್‌ ಅವರನ್ನು ನೆಟ್ಟಿಗರು ವಡಪಾವ್‌ ಎಂದು ಹಲವು ಬಾರಿ ತಮಾಷೆ ಮಾಡಿದ್ದರು. ಪಂದ್ಯದ ವೇಳೆಯೂ ಪೋಸ್ಟರ್‌ಗಳನ್ನು ಹಿಡದು ಅವರನ್ನು ಗೇಲಿ ಮಾಡಿದ್ದರು. ಇದರ ಬಳಿಕ ರೋಹಿತ್‌ ಕಳೆದ ಒಂದು ವರ್ಷದಿಂದ ಫಿಟ್‌ನೆಸ್‌ ಕಡೆ ಗಮನ ಹರಿಸಿದ್ದಾರೆ. ವಡ ಪಾವ್‌ ತಿನ್ನಲ್ಲ ಎಂದು ಕೂಡ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.



2025 ರ ಆಸ್ಟ್ರೇಲಿಯಾ ಸರಣಿಯಲ್ಲಿ ಏಕದಿನ ಕ್ರಿಕೆಟ್‌ಗೆ ಮರಳಿದಾಗಿನಿಂದ ರೋಹಿತ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ ನಂತರ, ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 97 ಎಸೆತಗಳಲ್ಲಿ 73 ರನ್ ಗಳಿಸಿ, ಆಸ್ಟ್ರೇಲಿಯಾದಲ್ಲಿ 1,000 ಏಕದಿನ ರನ್‌ಗಳನ್ನು ದಾಟಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಸಿಡ್ನಿಯಲ್ಲಿ ಅಜೇಯ 121 ರನ್ ಗಳಿಸುವ ಮೂಲಕ ಭಾರತ ಒಂಬತ್ತು ವಿಕೆಟ್‌ಗಳ ಜಯಕ್ಕೆ 237 ರನ್‌ಗಳನ್ನು ಬೆನ್ನಟ್ಟಿತ್ತು.

ಇದನ್ನೂ ಓದಿ IND vs SA: ಚೊಚ್ಚಲ ಒಡಿಐ ಶತಕ ಬಾರಿಸಿದ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

ತವರಿನ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ರೋಹಿತ್‌ ಎರಡು ಅರ್ಧಶತಕ ಬಾರಿಸಿ ಮಿಂಚಿದ್ದರು. ವಿಶಾಖಪಟ್ಟಣದಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ, ಅವರು 73 ಎಸೆತಗಳಲ್ಲಿ 75 ರನ್ ಗಳಿಸಿದರು, ಸರಣಿಯನ್ನು ಗೆಲ್ಲುವ ಹಾದಿಯಲ್ಲಿ ಭಾರತಕ್ಕೆ ಬಲವಾದ ಆರಂಭಿಕ ಜೊತೆಯಾಟವನ್ನು ನೀಡಿದರು.