ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ ಎಂ.ಎಸ್‌ ಧೋನಿ

MS Dhoni: 43 ವರ್ಷದ ಧೋನಿ ಅವರು ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿಯಾದ ಹೋಮ್‌ಲೇನ್ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮ ತವರಾದ ರಾಂಚಿಯಲ್ಲಿ ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನು ಹೊಂದಿದ್ದಾರೆ.

MS Dhoni

ನವದೆಹಲಿ, ಮೇ 8: ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಕ್ರಿಕೆಟ್​ನಲ್ಲಿ ಮಾತ್ರವಲ್ಲದೆ ದೇಶಕ್ಕೆ ತೆರಿಗೆ ಕಟ್ಟುವ ವಿಚಾರದಲ್ಲಿಯೂ ದಾಖಲೆ ಬರೆದಿದ್ದಾರೆ. ಜಾರ್ಖಂಡ್ ಮತ್ತು ಬಿಹಾರದಿಂದ 2026 ರ ಹಣಕಾಸು ವರ್ಷದಲ್ಲಿ ಧೋನಿ ಅತಿ ಹೆಚ್ಚು ತೆರಿಗೆ(MS Dhoni Highest Taxpayer) ಪಾವತಿಸಿದವರಾಗಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕವೂ ರಾಜ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆಯನ್ನು ಪಾವತಿಸಿದವರಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಐಟಿ ಇಲಾಖೆ(income tax) ತಿಳಿಸಿದೆ. ಧೋನಿ ತಮ್ಮ ಕ್ರಿಕೆಟ್​ ವೃತ್ತಿಜೀವನ ಆರಂಭ ಮಾಡಿದಾಗಿನಿಂದಲೂ ನಿರಂತರವಾಗಿ ರಾಜ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರನೂ ಆಗಿದ್ದಾರೆ.

2025–26ರಲ್ಲಿ ಜಾರ್ಖಂಡ್ ಮತ್ತು ಬಿಹಾರದಿಂದ ಆದಾಯ ತೆರಿಗೆ ಇಲಾಖೆ ಒಟ್ಟು 20,000 ಕೋಟಿ ರೂ. ಸಂಗ್ರಹವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಧೋನಿ ಎರಡೂ ರಾಜ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆದಾರರಾಗಿ ಹೊರಹೊಮ್ಮಿದ್ದಾರೆ. ಆದಾಗ್ಯೂ, ಧೋನಿಯ ನಿಖರವಾದ ತೆರಿಗೆ ಪಾವತಿ ಮತ ರಿಟರ್ನ್ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ.

"2025-26ರ ಆರ್ಥಿಕ ವರ್ಷದಲ್ಲಿ ಬಿಹಾರ ಮತ್ತು ಜಾರ್ಖಂಡ್‌ನಿಂದ ಒಟ್ಟು ಸಂಗ್ರಹವಾದ ತೆರಿಗೆ ಸುಮಾರು 20,000 ಕೋಟಿ ರೂ.ಗಳಾಗಿದ್ದು, ಅದರಲ್ಲಿ 12,000 ಕೋಟಿ ರೂ.ಗಳನ್ನು ಜಾರ್ಖಂಡ್‌ನಿಂದ ಮಾತ್ರ ಸಂಗ್ರಹಿಸಲಾಗಿದೆ" ಎಂದು ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತ (ಬಿಹಾರ -ಜಾರ್ಖಂಡ್) ಡಾ. ಡಿ. ಸುಧಾಕರ ರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

MS Dhoni: ರಾಂಚಿಯಲ್ಲಿ ಧೋನಿ-ಕೊಹ್ಲಿ ಕಾರ್‌ ರೈಡ್‌; ವಿಡಿಯೊ ವೈರಲ್‌

43 ವರ್ಷದ ಧೋನಿ ಅವರು ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿಯಾದ ಹೋಮ್‌ಲೇನ್ ಸೇರಿದಂತೆ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮ ತವರಾದ ರಾಂಚಿಯಲ್ಲಿ ಸುಮಾರು 43 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನು ಹೊಂದಿದ್ದಾರೆ. 2020 ಆಗಸ್ಟ್​ 15 ರಂದು ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​(csk) ತಂಡದ ಆಟಗಾರನಾಗಿರುವ ಅವರು ಗಾಯದ ಕಾರಣ ಹಾಲಿ ಆವೃತ್ತಿಯಲ್ಲಿ ಈವರೆಗೂ ಒಂದೂ ಪಂದ್ಯವನ್ನು ಆಡಿಲ್ಲ.

2026 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 10 ಪಂದ್ಯಗಳನ್ನು ಆಡಿದೆ. ಆದರೆ ಧೋನಿ ತಂಡದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ. ಋತುವಿನ ಆರಂಭದಲ್ಲಿ ಅವರು ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು, ಇದು ಅವರನ್ನು ಮೈದಾನಕ್ಕೆ ಇಳಿಯಲು ಅನುಮತಿಸಲಿಲ್ಲ. ಧೋನಿ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ಫೋಟೊ ಮತ್ತು ವಿಡಿಯೊ ಕ್ಲಿಪ್‌ಗಳನ್ನು ಸಿಎಸ್‌ಕೆ ನಿಯಮಿತವಾಗಿ ಹಂಚಿಕೊಂಡಿದ್ದರೂ, ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬ ಅನಿಶ್ಚಿತತೆ ಉಳಿದಿದೆ.