ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MS Dhoni,: ಐಸಿಸಿ ಹಾಲ್ ಆಫ್ ಫೇಮ್ ಗೌರವ ಶಾಶ್ವತವಾಗಿ ಪಾಲಿಸುವೆ; ಧೋನಿ

ಸೋಮವಾರ(ಜೂನ್‌–9) ಲಂಡನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿ ಒಟ್ಟು ಏಳು ಮಂದಿಯನ್ನು ಐಸಿಸಿ '2025ರ ಹಾಲ್ ಆಫ್ ಫೇಮ್‌'ಗೆ ಸೇರಿಸಲಾಯಿತು. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಧೋನಿ, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ರಾಂಚಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ( MS Dhoni) ಸೇರಿದಂತೆ 7 ಮಂದಿಗೆ ಐಸಿಸಿ ಪ್ರತಿಷ್ಠಿತ ಹಾಲ್ ಆಫ್ ಫೇಮ್‌(ICC Hall of Fame) ನೀಡಿ ಗೌರವಿಸಿದೆ. ಈ ಬಗ್ಗೆ ಧೋನಿ ಪ್ರತಿಕ್ರಿಯಿಸಿದ್ದು, ಈ ಗೌರವವನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಧೋನಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡ ಭಾರತದ 11ನೇ ಕ್ರಿಕೆಟಿಗ. ಧೋನಿ ಅವರ ಅದ್ಭುತ ನಾಯಕತ್ವ, ಸ್ಮರಣೀಯ ವೃತ್ತಿಜೀವನ ಮತ್ತು ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ನೀಡಲಾಗಿದೆ ಎಂದು ಐಸಿಸಿ(ICC) ಪ್ರಕಟಣೆಯಲ್ಲಿ ತಿಳಿಸಿದೆ.

"ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿ ಹೆಸರಿಸಲ್ಪಟ್ಟಿರುವುದು ಗೌರವದ ಸಂಗತಿ. ಇದು ತಲೆಮಾರುಗಳಾದ್ಯಂತ ಮತ್ತು ಪ್ರಪಂಚದಾದ್ಯಂತದ ಕ್ರಿಕೆಟಿಗರ ಕೊಡುಗೆಗಳನ್ನು ಗುರುತಿಸುತ್ತದೆ. ಅಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಹೆಸರನ್ನು ನೆನಪಿಸಿಕೊಳ್ಳುವುದು ಅದ್ಭುತ ಭಾವನೆ. ಇದು ನಾನು ಶಾಶ್ವತವಾಗಿ ಪಾಲಿಸುವ ವಿಷಯ" ಎಂದು ಧೋನಿ ಐಸಿಸಿಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಸೋಮವಾರ(ಜೂನ್‌–9) ಲಂಡನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿ ಒಟ್ಟು ಏಳು ಮಂದಿಯನ್ನು ಐಸಿಸಿ '2025ರ ಹಾಲ್ ಆಫ್ ಫೇಮ್‌'ಗೆ ಸೇರಿಸಲಾಯಿತು. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಧೋನಿ, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಧೋನಿ ಸಾಧನೆ

2004ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಧೋನಿ ಅವರು, ತಮ್ಮ ನಾಯಕತ್ವದಲ್ಲಿ ಭಾರತಕ್ಕೆ 2007ರ ಟಿ–20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ತಂದುಕೊಟ್ಟಿದ್ದರು. 90 ಟೆಸ್ಟ್‌ ಪಂದ್ಯಗಳಲ್ಲಿ 4876 ರನ್‌, 350 ಏಕದಿನ ಪಂದ್ಯಗಳಲ್ಲಿ 10,773 ರನ್‌(10 ಶತಕ, 73 ಅರ್ಧಶತಕ) ಮತ್ತು 98 ಟಿ-20 ಪಂದ್ಯಗಳಲ್ಲಿ 1,617 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನು ವಿಕೆಟ್‌ ಕೀಪರ್‌ ಆಗಿ 824 ವಿಕೆಟ್‌ ಬಲಿ ಪಡೆದಿದ್ದಾರೆ.

2009ರಲ್ಲಿ ಐಸಿಸಿ ಆರಂಭಿಸಿದ ಹಾಲ್ ಆಫ್ ಫೇಮ್ ಗೌರವಕ್ಕೆ ಈವರೆಗೆ ಒಟ್ಟು 122 ಮಂದಿ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ 11 ಮಂದಿ ಭಾರತೀಯ ಆಟಗಾರರಿದ್ದಾರೆ.

2025ರ ಹಾಲ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದವರು

ಎಂ.ಎಸ್‌.ಧೋನಿ (ಭಾರತ)

ಮ್ಯಾಥ್ಯೂ ಹೇಡನ್‌ (ಆಸ್ಟ್ರೇಲಿಯಾ)

ಹಾಶಿಂ ಆಮ್ಲ (ದಕ್ಷಿಣ ಆಫ್ರಿಕಾ)

ಗ್ರೇಮ್‌ ಸ್ಮಿತ್‌ (ದಕ್ಷಿಣ ಆಫ್ರಿಕಾ)

ಡೇನಿಯಲ್ ವೆಟೋರಿ (ನ್ಯೂಜಿಲೆಂಡ್‌)

ಸನಾ ಮೀರ್‌ (ಪಾಕಿಸ್ತಾನ)

ಸಾರಾ ಟೇಲರ್(ಇಂಗ್ಲೆಂಡ್‌)

ಇದನ್ನೂ ಓದಿ MS Dhoni: ದಿಗ್ಗಜ ಧೋನಿಗೆ ಹಾಲ್‌ ಆಫ್ ಫೇಮ್‌ ಗೌರವ