ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Athletics Championships: ಚಿನ್ನದ ಪದಕದಿಂದ ಮಿನುಗಲಿ ನೀರಜ್‌; ಇಂದು ಫೈನಲ್‌

ಸಚಿನ್ ಯಾದವ್ ಅವರು ಎ ಗುಂಪಿನಲ್ಲಿ ಆರನೇ ಹಾಗೂ ಒಟ್ಟಾರೆಯಾಗಿ 10ನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆ ಇಟ್ಟರು. ಅವರು 83.67 ಮೀ ಥ್ರೋ ಮಾಡಿದ್ದರು. ಆದರೆ ಭಾರತದ ಇನ್ನಿಬ್ಬರು ಅಥ್ಲೀಟ್‌ಗಳಾದ ರೋಹಿತ್ ಯಾದವ್ ಮತ್ತು ಯಶ್‌ವೀರ್ ಸಿಂಗ್ ಫೈನಲ್‌ ಪ್ರವೇಶಿಸುವಲ್ಲಿ ವಿಫಲರಾಗಿದ್ದರು.

ಜಾವೆಲಿನ್ ಥ್ರೋ ಫೈನಲ್‌; ಇಂದು ನೀರಜ್ vs ನದೀಂ ಮುಖಾಮುಖಿ

-

Abhilash BC Abhilash BC Sep 18, 2025 8:34 AM

ಟೋಕಿಯೊ: ಇಂದು ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್‌ಶಿಪ್‌ ಜಾವೆಲಿನ್‌(World Athletics Championships) ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ನೀರಜ್‌ ಚೋಪ್ರಾ(Neeraj Chopra), ಭಾರತದ ಮತ್ತೊಬ್ಬ ಅಥ್ಲೀಟ್ ಸಚಿನ್ ಯಾದವ್ ಸೇರಿ ಒಟ್ಟು 12 ಮಂದಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀರಜ್ ಮತ್ತು ಹೋದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕೂಟದಲ್ಲಿ ಚಾಂಪಿಯನ್ ಆಗಿದ್ದ ಅರ್ಷದ್ ಅವರಿಬ್ಬರ ಪೈಪೋಟಿಯು ಈಗ ಕುತೂಹಲಕ್ಕೆ ಕಾರಣವಾಗಿದೆ. ಫೈನಲ್‌ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಇರಲಿದೆ.

ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (89.53ಮೀ) ಫೈನಲ್‌ಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಅತಿ ಹೆಚ್ಚು ದೂರ ಥ್ರೋ ಮಾಡಿದ ಸಾಧನೆ ಮಾಡಿದ್ದಾರೆ. ಅವರ ನಂತರದ ಸ್ಥಾನಗಳಲ್ಲಿ ಜರ್ಮನಿಯ ಜೂಲಿಯನ್ ವೆಬರ್ (ಜರ್ಮನಿ; 87.21ಮೀ), ಜೂಲಿಯಸ್ ಯೆಗೊ (ಕೆನ್ಯಾ; 85.96ಮೀ) ಎಸೆದಿದ್ದರು. ಹೀಗಾಗಿ ನೀರಜ್‌ಗೆ ಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.

ಬುಧವಾರ ನಡೆದ ಎ ಗುಂಪಿನ ಅರ್ಹತಾ ಸುತ್ತಿನ ಮೊದಲ ಥ್ರೋನಲ್ಲಿಯೇ ನೀರಜ್ ಅವರು 84.50 ಮೀಟರ್ಸ್ ಸಾಧನೆ ಮಾಡಿ ಫೈನಲ್‌ ಸುತ್ತಿಗೆ ಲಗ್ಗೆ ಇಟ್ಟಿದ್ದರು. ಬಿ ಗುಂಪಿನಲ್ಲಿ ಸ್ಪರ್ಧಿಸಿದ್ದ ನದೀಂ ಮೂರನೇ ಥ್ರೋನಲ್ಲಿ 85.28 ಮೀ ಸಾಧನೆ ಮಾಡಿ ಫೈನಲ್‌ ಅರ್ಹತೆ ಪಡೆದಿದ್ದರು. 2023ರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚಿನ್ನ ಮತ್ತು ನದೀಂ ಬೆಳ್ಳಿ ಜಯಿಸಿದ್ದರು.

ಇದನ್ನೂ ಓದಿ Asia Cup 2025: ಪಾಕಿಸ್ತಾನದ ಬಳಿ ಕ್ಷಮೆಯಾಚಿಸಿದ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್!

ಸಚಿನ್ ಯಾದವ್ ಅವರು ಎ ಗುಂಪಿನಲ್ಲಿ ಆರನೇ ಹಾಗೂ ಒಟ್ಟಾರೆಯಾಗಿ 10ನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆ ಇಟ್ಟರು. ಅವರು 83.67 ಮೀ ಥ್ರೋ ಮಾಡಿದ್ದರು. ಆದರೆ ಭಾರತದ ಇನ್ನಿಬ್ಬರು ಅಥ್ಲೀಟ್‌ಗಳಾದ ರೋಹಿತ್ ಯಾದವ್ ಮತ್ತು ಯಶ್‌ವೀರ್ ಸಿಂಗ್ ಫೈನಲ್‌ ಪ್ರವೇಶಿಸುವಲ್ಲಿ ವಿಫಲರಾಗಿದ್ದರು.