IND vs PAK: ಸೂಪರ್-4 ಪಂದ್ಯಕ್ಕೂ ಮುನ್ನ ಭಾರತಕ್ಕೆ ಸವಾಲೆಸೆದ ಪಾಕ್ ನಾಯಕ
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 9 ವಿಕೆಟ್‌ಗೆ 146 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಯುಎಇ ತಂಡ, 17.4 ಓವರ್‌ಗಳಿಗೆ 105 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲೊಪ್ಪಿಕೊಂಡಿತು.

-

ದುಬೈ: ಬುಧವಾರ ರಾತ್ರಿ ನಡೆದಿದ್ದ ಏಷ್ಯಾ ಕಪ್(Asia Cup 2025) 'ಎ' ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ 41 ರನ್ ಅಂತರದಿಂದ ಗೆಲುವು ಸಾಧಿಸುವ ಮೂಲಕ 'ಸೂಪರ್ ಫೋರ್' ಹಂತಕ್ಕೆ ಪ್ರವೇಶಿಸಿದ ಪಾಕಿಸ್ತಾನ ತಂಡ, ಮುಂದಿನ ಭಾನುವಾರ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ(IND vs PAK) ಸವಾಲು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕ್ ನಾಯಕ ಸಲ್ಮಾನ್ ಅಘಾ(Salman Agha) ಭಾರತಕ್ಕೆ ಸವಾಲೆಸೆದಿದ್ದಾರೆ. ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸುವುದು ಖಚಿತ ಎಂದಿದ್ದಾರೆ.
ಯುಎಇ ವಿರುದ್ಧದ ಪಂದ್ಯದ ಬಳಿಕ ಮಾತನಾಡಿರುವ ಸಲ್ಮಾನ್ ಅಘಾ, "ಹೌದು, ನಾವು ಯಾವುದೇ ಸವಾಲಿಗೆ ಸಿದ್ಧರಿದ್ದೇವೆ. ನಾವು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇವೆ, ಮತ್ತು ಕಳೆದ ಕೆಲವು ತಿಂಗಳುಗಳಿಂದ ನಾವು ಆಡುತ್ತಿರುವಂತೆ ಉತ್ತಮ ಕ್ರಿಕೆಟ್ ಆಡಿದರೆ. ನಾವು ಯಾವುದೇ ತಂಡದ ವಿರುದ್ಧವೂ ಉತ್ತಮವಾಗಿ ಆಡುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
"ಮಧ್ಯದ ಓವರ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಕೆಲವು ಪಂದ್ಯಗಳಿಗೆ ಅದು ನಮಗೆ ಕಳವಳಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಇನ್ನೂ ನಮ್ಮ ಅತ್ಯುತ್ತಮ ಬ್ಯಾಟಿಂಗ್ ಮಾಡಿಲ್ಲ, ಭಾರತ ವಿರುದ್ಧದ ಮುಂದಿನ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಶಕ್ತಿ ತೋರಿಸಲಿದ್ದೇವೆ ”ಎಂದು ಅವರು ಹೇಳಿದರು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 9 ವಿಕೆಟ್‌ಗೆ 146 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಯುಎಇ ತಂಡ, 17.4 ಓವರ್‌ಗಳಿಗೆ 105 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲೊಪ್ಪಿಕೊಂಡಿತು. ಒಂದೊಮ್ಮೆ ಯುಎಇ ಗೆಲುವು ಸಾಧಿಸುತ್ತಿದ್ದರೆ ಪಾಕ್ ಟೂರ್ನಿಯಿಂದ ಹೊರ ಬೀಳುತ್ತಿತ್ತು.
ಇದನ್ನೂ ಓದಿ Asia Cup 2025: ಭಾರತ vs ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು