ಆಕ್ಲೆಂಡ್: ಈ ವರ್ಷದ ಐಸಿಸಿ ಮಹಿಳಾ ವಿಶ್ವಕಪ್(Women's ODI World Cup) ನಂತರ ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್(Sophie Devine) ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಗಳವಾರ (ಜೂನ್ 17) ದೃಢಪಡಿಸಿದೆ. ಸುಮಾರು ಎರಡು ದಶಕಗಳಿಂದ ಕಿವೀಸ್ ಪರ ಆಡುತ್ತಿರುವ 35 ವರ್ಷದ ಆಲ್‌ರೌಂಡರ್ ಡಿವೈನ್ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದರು. 13ನೇ ಆವೃತ್ತಿಯ ಐಸಿಸಿ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಸೆಪ್ಟಂಬರ್ 30ರಿಂದ ಆರಂಭವಾಗಲಿದೆ. ನ್ಯೂಜಿಲೆಂಡ್ ತಂಡ ಅಕ್ಟೋಬರ್ 1 ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಇಂದೋರ್‌ನಲ್ಲಿ ನಡೆಯಲಿದೆ.
2006 ರಲ್ಲಿ ಕೇವಲ 17 ವರ್ಷದಲ್ಲಿ ಆರಂಭವಾದ ಡಿವೈನ್ ಅವರ ಏಕದಿನ ವೃತ್ತಿಜೀವನವು ಗಮನಾರ್ಹವಾದುದು. 11 ನೇ ಶ್ರೇಯಾಂಕದ ಆಟಗಾರ್ತಿಯಾಗಿ ಆಡಲಿಳಿದಿದ್ದ ಅವರು ಆ ಬಳಿಕ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಖಾಯಂ ಆರಂಭಿಕ ಆಟಗಾರ್ತಿಯಾಗಿ ಗುರುತಿಸಿಕೊಂಡರು.152 ಏಕದಿನ ಪಂದ್ಯಗಳಲ್ಲಿ ಡಿವೈನ್ ಎಂಟು ಶತಕಗಳು ಮತ್ತು 16 ಅರ್ಧಶತಕಗಳು ಸೇರಿದಂತೆ 3990 ರನ್‌ಗಳನ್ನು ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಸಾರ್ವಕಾಲಿಕ ಏಕದಿನ ರನ್-ಸ್ಕೋರರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರು 4 ಸಾವಿರ ರನ್ ಮೈಲಿಗಲ್ಲನ್ನು ದಾಟುವ ಮೂಲಕ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆಯುವ ಸನಿಹದಲ್ಲಿದ್ದಾರೆ.
ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿರುವ ಅವರು 107 ವಿಕೆಟ್‌ಗಳನ್ನು ಕೆಡವಿದ್ದಾರೆ. 2020 ರಲ್ಲಿ ಖಾಯಂ ನಾಯಕಿಯಾಗಿ ನೇಮಕಗೊಂಡ ಡಿವೈನ್, ನ್ಯೂಜಿಲೆಂಡ್ ತಂಡವನ್ನು ಪರಿವರ್ತನೆಯ ಅವಧಿಯಲ್ಲಿ ಮುನ್ನಡೆಸಿದ್ದಾರೆ. ಆದಾಗ್ಯೂ, 50-ಓವರ್‌ಗಳ ಸ್ವರೂಪದಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಕಳೆದ ಎರಡು ವಿಶ್ವಕಪ್‌ಗಳಲ್ಲಿ ತಂಡವು ಗುಂಪು ಹಂತಗಳನ್ನು ದಾಟಲು ವಿಫಲವಾಗಿತ್ತು.
ಇದನ್ನೂ ಓದಿ Celebrity women's kabaddi league: ಸೆಲೆಬ್ರಿಟಿ ಮಹಿಳಾ ಕಬಡ್ಡಿ ಲೀಗ್‌ನ ಪವರ್ ಪ್ಯಾಕ್ಡ್ ಗೀತೆ ರಿಲೀಸ್
ವೇಳಾಪಟ್ಟಿ
ಸೆಪ್ಟಂಬರ್ 30 ಭಾರತ-ಶ್ರೀಲಂಕಾ ಬೆಂಗಳೂರು ಮಧ್ಯಾಹ್ನ 3:00
ಅಕ್ಟೋಬರ್ 1 ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 2 ಬಾಂಗ್ಲಾದೇಶ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 3 ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಬೆಂಗಳೂರು ಮಧ್ಯಾಹ್ನ 3:00
ಅಕ್ಟೋಬರ್ 4 ಆಸ್ಟ್ರೇಲಿಯ-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 5 ಭಾರತ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 6 ನ್ಯೂಝಿಲ್ಯಾಂಡ್-ದಕ್ಷಿಣ ಆಫ್ರಿಕಾ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 7 ಇಂಗ್ಲೆಂಡ್-ಬಾಂಗ್ಲಾದೇಶ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 8 ಆಸ್ಟ್ರೇಲಿಯ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 9 ಭಾರತ-ದಕ್ಷಿಣ ಆಫ್ರಿಕಾ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 10 ನ್ಯೂಝಿಲ್ಯಾಂಡ್-ಬಾಂಗ್ಲಾದೇಶ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 11 ಇಂಗ್ಲೆಂಡ್-ಶ್ರೀಲಂಕಾ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 12 ಭಾರತ-ಆಸ್ಟ್ರೇಲಿಯ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 13 ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 14 ನ್ಯೂಝಿಲ್ಯಾಂಡ್-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 15 ಇಂಗ್ಲೆಂಡ್-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 16 ಆಸ್ಟ್ರೇಲಿಯ-ಬಾಂಗ್ಲಾದೇಶ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 17 ದಕ್ಷಿಣ ಆಫ್ರಿಕಾ-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 18 ನ್ಯೂಝಿಲ್ಯಾಂಡ್-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 19 ಭಾರತ-ಇಂಗ್ಲೆಂಡ್ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 20 ಶ್ರೀಲಂಕಾ-ಬಾಂಗ್ಲಾದೇಶ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 21 ದಕ್ಷಿಣ ಆಫ್ರಿಕಾ-ಪಾಕಿಸ್ತಾನ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 22 ಆಸ್ಟ್ರೇಲಿಯ-ಇಂಗ್ಲೆಂಡ್ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 23 ಭಾರತ-ನ್ಯೂಝಿಲ್ಯಾಂಡ್ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 24 ಪಾಕಿಸ್ತಾನ-ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 25 ಆಸ್ಟ್ರೇಲಿಯ-ಶ್ರೀಲಂಕಾ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 26 ಇಂಗ್ಲೆಂಡ್-ನ್ಯೂಝಿಲ್ಯಾಂಡ್ ಗುವಾಹಟಿ ಬೆಳಗ್ಗೆ 11:00
ಅಕ್ಟೋಬರ್ 26 ಭಾರತ-ಬಾಂಗ್ಲಾದೇಶ ಬೆಂಗಳೂರು ಮಧ್ಯಾಹ್ನ 3:00
ಅಕ್ಟೋಬರ್ 29 ಮೊದಲ ಸೆಮಿ ಫೈನಲ್ ಗುವಾಹಟಿ/ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 30 ಎರಡನೇ ಸೆಮಿ ಫೈನಲ್ ಬೆಂಗಳೂರು ಮಧ್ಯಾಹ್ನ 3:00
ನವೆಂಬರ್ 2 ಫೈನಲ್ ಪಂದ್ಯ ಕೊಲಂಬೊ/ಬೆಂಗಳೂರು ಮಧ್ಯಾಹ್ನ 3:00