ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡ ಪ್ರಕಟ; ಬ್ರೆಟ್ ರಾಂಡೆಲ್‌ಗೆ ಚೊಚ್ಚಲ ಕರೆ

New Zealand squad for last two ODIs: 31 ವರ್ಷದ ರಾಂಡೆಲ್, ಈ ಹಿಂದೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಇತ್ತೀಚೆಗಷ್ಟೇ ಅವರು ಡರ್ಬಿಶೈರ್ ಪರ ಕೌಂಟಿ ಚಾಂಪಿಯನ್‌ಶಿಪ್ ಋತುವಿನಲ್ಲಿ ಭಾಗವಹಿಸಿ ಮರಳಿದ್ದಾರೆ. ಇದಲ್ಲದೆ, ಸರಣಿಯ ಕೊನೆಯ ಎರಡು ಪಂದ್ಯಗಳಿಗಾಗಿ ಜೋಶ್ ಕ್ಲಾರ್ಕ್‌ಸನ್ ಅವರನ್ನು ತಂಡಕ್ಕೆ ಮರಳಿ ಕರೆತಂದಿದೆ.

Brett Randell

ಆಕ್ಲೆಂಡ್‌, ನ.12: ಭಾರತದ ವಿರುದ್ಧ ನಡೆಯಲಿರುವ ಸರಣಿಯ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಂಡವನ್ನು ಘೋಷಿಸಿದೆ. ತಂಡದಲ್ಲಿನ ಗಮನಾರ್ಹ ಸೇರ್ಪಡೆಗಳಲ್ಲಿ ಬ್ರೆಟ್ ರಾಂಡೆಲ್ ಒಬ್ಬರು. ಅವರು ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

31 ವರ್ಷದ ರಾಂಡೆಲ್, ಈ ಹಿಂದೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಇತ್ತೀಚೆಗಷ್ಟೇ ಅವರು ಡರ್ಬಿಶೈರ್ ಪರ ಕೌಂಟಿ ಚಾಂಪಿಯನ್‌ಶಿಪ್ ಋತುವಿನಲ್ಲಿ ಭಾಗವಹಿಸಿ ಮರಳಿದ್ದಾರೆ. ಇದಲ್ಲದೆ, ಸರಣಿಯ ಕೊನೆಯ ಎರಡು ಪಂದ್ಯಗಳಿಗಾಗಿ ಜೋಶ್ ಕ್ಲಾರ್ಕ್‌ಸನ್ ಅವರನ್ನು ತಂಡಕ್ಕೆ ಮರಳಿ ಕರೆತಂದಿದೆ. ಅವರು ನ್ಯೂಜಿಲೆಂಡ್ ಪರ ಆರು ಏಕದಿನ ಪಂದ್ಯಗಳಲ್ಲಿ ಆಡಿದ್ದು, 2026ರ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಪರ ಕಣಕ್ಕಿಳಿದಿದ್ದರು.

ತಂಡದ ಘೋಷಣೆಯ ಸಂದರ್ಭದಲ್ಲಿ, ನ್ಯೂಜಿಲೆಂಡ್ ಮುಖ್ಯ ಕೋಚ್ ರಾಬ್ ವಾಲ್ಟರ್ ಪ್ರಮುಖ ಗಮನ ಸೆಳೆದರು ಮತ್ತು ತಂಡದ ರಚನೆಯ ಕುರಿತು ವಿವರವಾಗಿ ಮಾತನಾಡಿದ ಅವರು, ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ ಬ್ರೆಟ್ ರಾಂಡೆಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದರ ಬಗ್ಗೆ ಮಂಡಳಿಯು ಅತ್ಯಂತ ಸಂತೋಷಗೊಂಡಿದೆ ಎಂದು ತಿಳಿಸಿದರು. ಅಲ್ಲದೆ ರಾಷ್ಟ್ರೀಯ ತಂಡದಲ್ಲೂ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಆರ್ಯವೀರ್ ಸೆಹ್ವಾಗ್‌ಗೆ ವಿರಾಟ್ ಕೊಹ್ಲಿ ನೀಡಿದ ಸಲಹೆ ವೈರಲ್

"ಆಟಗಾರನು ತನ್ನ ಮೊದಲ ಅಂತರರಾಷ್ಟ್ರೀಯ ಕರೆಯನ್ನು ಗಳಿಸಿದಾಗ ಇದು ಯಾವಾಗಲೂ ವಿಶೇಷ ಸಮಯವಾಗಿದೆ. ಬ್ರೆಟ್ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ, ಅವರು ಕೆಲವು ಸಮಯದಿಂದ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಈ ಅವಕಾಶವನ್ನು ಗಳಿಸಿದ್ದಾರೆ. ಸರಣಿಯುದ್ದಕ್ಕೂ ಕೆಲವು ಚಲನೆಗಳಿವೆ, ಆದ್ದರಿಂದ ಬ್ರೆಟ್ ಮತ್ತು ಜೋಶ್ ಅವರನ್ನು ಕರೆತರಲು ಸಾಧ್ಯವಾಗುವುದು ನಮಗೆ ಅದೃಷ್ಟವಾಗಿದೆ. ಈ ವಾರಾಂತ್ಯದಲ್ಲಿ ಹವಾಮಾನವು ಆಶಾದಾಯಕವಾಗಿ ಕಾಣುತ್ತದೆ" ಎಂದು ಹೇಳಿದರು.

4ನೇ ಏಕದಿನ ಪಂದ್ಯಕ್ಕಾಗಿ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜಾಕೋಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್‌ಕ್ರಾಫ್ಟ್, ಮಿಚ್ ಹೇ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಬ್ರೆಟ್ ರಾಂಡೆಲ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ವಿಲ್ ಯಂಗ್.

5ನೇ ಏಕದಿನ ಪಂದ್ಯಕ್ಕಾಗಿ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್‌ಸನ್, ಜಾಕೋಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್‌ಕ್ರಾಫ್ಟ್, ಮಿಚ್ ಹೇ (ವಿಕೆಟ್ ಕೀಪರ್), ನಿಕ್ ಕೆಲ್ಲಿ, ಬ್ರೆಟ್ ರಾಂಡೆಲ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಬ್ಲೇರ್ ಟಿಕ್ನರ್, ವಿಲ್ ಯಂಗ್.