ವೆಲ್ಲಿಂಗ್ಟನ್, ನ.23: ಮೊದಲ ಇನ್ನಿಂಗ್ಸ್ನಲ್ಲಿ 720 ರನ್ ಗಳಿಸಿ 352ರನ್ಗಳ ಮುನ್ನಡೆಯೊಂದಿಗೆ ಐತಿಹಾಸಿಕ ಗೆಲುವಿನ ಕನಸು ಕಂಡಿದ್ದ ಭಾರತ ತಂಡಕ್ಕೆ ಡೇರಿಯಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅಡ್ಡಗಾಲಿಕ್ಕಿದರು. ಅಂತಿಮ ದಿನದಾಟದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡರು.
ಅಂತಿಮ ದಿನದಾಟದಲ್ಲಿ ಭಾರತ ತಂಡದ ಗೆಲುವಿಗೆ 8 ವಿಕೆಟ್ ಅಗತ್ಯವಿತ್ತು. ದಿನದಾಟದ ಮುಕ್ತಾಯಕ್ಕೆ 45 ಓವರ್ಗಳಲ್ಲಿ 2 ವಿಕೆಟ್ಗಳಿಗೆ 119 ರನ್ ಗಳಿಸಿದ್ದ ಕಿವೀಸ್ ಇನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ಅಂತಿಮ ದಿನ ದಿಟ್ಟ ಬ್ಯಾಟಿಂಗ್ ನಡೆಸಿ ಸೋಲಿನಿಂದ ಪಾರಾಯಿತು. 5 ವಿಕೆಟ್ಗೆ 239ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ 368 ರನ್ಗೆ ಆಲೌಟ್ ಆಗಿತ್ತು.
ಪಂದ್ಯ ಆರಂಭಗೊಂಡ ಮೊದಲ ಅವಧಿಯಲ್ಲಿ ಭಾರತ ಶ್ಲಾಘನೀಯ ಪ್ರದರ್ಶನ ನೀಡಿತು. ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅವರ ಜೋಡಿಯನ್ನು ಬೇರ್ಪಡಿಸಿದ ಭಾರತ, ಟಾಮ್ ಬ್ಲಂಡೆಲ್ ದೊಡ್ಡ ಹಾನಿ ಮಾಡುವ ಮೊದಲೇ ಅವರನ್ನು ಪೆವಿಲಿಯನ್ಗೆ ಕಳುಹಿಸಿತು. ಬ್ಲಂಡೆಲ್ ಅವರ ವಿಷಯದಲ್ಲಿ ತೆಗೆದುಕೊಂಡ 'ರಿವ್ಯೂ' (ಪರಾಮರ್ಶೆ) ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ರಿಷಬ್ ಪಂತ್ಗೆ ಯಾವುದೇ ಸದ್ದು ಕೇಳಿಸಿರಲಿಲ್ಲ, ಆದರೆ ನಾಯಕ ಶುಭಮನ್ ಗಿಲ್, ತಮಗೆ ಸದ್ದು ಕೇಳಿಸಿದೆ ಎಂದು ದೃಢವಾಗಿ ನಂಬಿ ರಿವ್ಯೂ ಪಡೆದು ವಿಕೆಟ್ ಪತನಕ್ಕೆ ಕಾರಣರಾದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಅರ್ಧಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಡೆವೊನ್ ಕಾನ್ವೆ 65 ರನ್ ಗಳಿಸಿ ಔಟಾದರು. ರಚಿನ್ ರವೀಂದ್ರ(37) ಕೂಡ ಬೇಗನೆ ವಿಕೆಟ್ ಕಳೆದುಕೊಂಡಿತು.
ಆದರೆ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಎಂದಿನಂತೆ ಜವಾಬ್ದಾರಿಯುತವಾಗಿ ಆಡಿ, 63 ರನ್ಗಳ ಜೊತೆಯಾಟದಲ್ಲಿ ಅತ್ಯಂತ ದೃಢವಾಗಿ ನಿಂತರು. ಇಲ್ಲಿ ಗಳಿಸಿದ ರನ್ಗಳಿಗಿಂತ ಹೆಚ್ಚಾಗಿ, ಅವರು ಎದುರಿಸಿದ 253 ಎಸೆತಗಳು ಮತ್ತು ಸಮಯವನ್ನು ವ್ಯಯಿಸಲು ಹಾಗೂ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತಹ ಅತ್ಯಂತ ಅನುಕೂಲಕರ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಅವರು ಕೈಗೊಂಡ 'ಸುದೀರ್ಘ ರಕ್ಷಣಾತ್ಮಕ ಆಟ' ಗಮನಾರ್ಹವಾಗಿತ್ತು.
ಸ್ಯಾಂಡ್ಪೇಪರ್ಗೇಟ್ ಹಗರಣದಲ್ಲಿ ಆಸ್ಟ್ರೇಲಿಯಾ ತಂಡವೇ ಭಾಗಿಯಾಗಿತ್ತು; ಎಬಿ ಡಿ ವಿಲಿಯರ್ಸ್ ಸ್ಫೋಟಕ ಹೇಳಿಕೆ
ಗಾಳಿಯ ದಿಕ್ಕನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವೇಗದ ಬೌಲರ್ಗಳು ಆಗಾಗ್ಗೆ ಬೌಲಿಂಗ್ ತುದಿಗಳನ್ನು ಬದಲಾಯಿಸುತ್ತಿದ್ದರು. ತಲಾ ಮೂರು ಓವರ್ಗಳ ಅಲ್ಪಾವಧಿಯ ಬೌಲಿಂಗ್ ದಾಳಿಗಳನ್ನೂ ನಡೆಸಲಾಯಿತು. ಆದರೆ ಮಿಚೆಲ್ ಮತ್ತು ಫಿಲಿಪ್ಸ್ ಇಬ್ಬರೂ ರನ್ ಗಳಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ, ತಮ್ಮೆಡೆಗೆ ಬಂದ ಎಸೆತಗಳನ್ನೆಲ್ಲಾ ಕೇವಲ ತಡೆಹಿಡಿಯುತ್ತಾ ತಂಡವನ್ನು ರಕ್ಷಿಸಿದರು. ಕ್ರೀಸ್ನಲ್ಲಿ ಬೇರೂರಿ ನಿಂತು ಭಾರತೀಯ ಬೌಲರ್ಗಳ ತಾಳ್ಮೆ ಪರೀಕ್ಷಿಸಿದರು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಮಾಡುವಲ್ಲಿ ಯಶಸ್ವಿಯಾದರು. ಮಿಚೆಲ್ (49) ಮತ್ತು ಫಿಲಿಪ್ಸ್(26) ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊದಲ ಇನ್ನಿಂಗ್ಸ್ನಲ್ಲಿ ತಮ್ಮ ಬೌಲಿಂಗ್ ನಿಯಂತ್ರಣದ ಕಾರಣದಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಪ್ರಸಿದ್ಧ ಕೃಷ್ಣ, ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ನಿಖರವಾದ ಲೈನ್ ಮತ್ತು ಲೆಂತ್ನಲ್ಲಿ ಬೌಲಿಂಗ್ ಮಾಡಿದರು. ಅಷ್ಟೇ ಅಲ್ಲದೆ, ತಮ್ಮ 19 ಓವರ್ಗಳ ಸ್ಪೆಲ್ನಲ್ಲಿ 10 ಮೇಡನ್ ಓವರ್ಗಳನ್ನು ಎಸೆಯುವ ಮೂಲಕ ಜಸ್ಪ್ರೀತ್ ಬೂಮ್ರಾ ಅವರ 8 ಮೇಡನ್ ಓವರ್ಗಳ ದಾಖಲೆಯನ್ನು ಹಿಂದಿಕ್ಕಿದರು.