ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB ಕಪ್‌ ಗೆದ್ದರೂ ಸಂಭ್ರಮಾಚರಣೆ ಮಾಡುವಂತಿಲ್ಲ; ಅಭಿಮಾನಿಗಳಿಗೆ ಪೊಲೀಸರ ಖಡಕ್‌ ಎಚ್ಚರಿಕೆ

IPL 2026 final: ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಇದೀಗ ಮತ್ತೆ ಫೈನಲ್‌ನಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಯಾರೇ ಗೆದ್ದರೂ ಎರಡನೇ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಈ ತಂಡ ಯಾವುದು ಎಂಬುದು ಸದ್ಯದ ಕುತೂಹಲ.

Bengaluru police issues strict advisory

ಬೆಂಗಳೂರು, ಮೇ 30: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026 final) ಫೈನಲ್‌ ಪಂದ್ಯ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಮತ್ತು ರಾಯಲ್ ಚಾಲೆಂಜರ್ಸ್‌(Bangalore Royal Challengers) ಬೆಂಗಳೂರು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಕಳೆದ ಬಾರಿಯ ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy Stadium)ದ ಬಳಿ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳ ಸಾವಿನ ಕರಾಳ ದುರಂತ ಇನ್ನೂ ಮಾಸಿಲ್ಲ. ಇಂತಹ ಘಟನೆ ಮತ್ತೊಮ್ಮೆ ಮರುಳಿಸ ಬಾರದೆಂಬ ಕಾರಣಕ್ಕೆ ಮುಂಜಾಗ್ರತೆವಹಿಸಿರುವ ಪೊಲೀಸರು, ಪ್ರಸಕ್ತ ಸಾಲಿನಲ್ಲಿ ಐಪಿಎಲ್ ಗೆದ್ದರೆ ಆರ್‌ಸಿಬಿ ಅಭಿಮಾನಿಗಳ ಸಡಗರಕ್ಕೆ ಬ್ರೇಕ್ ಹಾಕಿದ್ದಾರೆ. ಜತೆಗೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ಪೊಲೀಸರು ಕೆಲ ಸೂಚನೆಗಳನ್ನು ನೀಡಿದ್ದಾರೆ.

ಪೊಲೀಸರ ಸೂಚನೆಗಳು

ಫೈನಲ್‌ ಪಂದ್ಯದ ಫಲಿತಾಂಶ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡುವಂತಿಲ್ಲ.

ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು.

ಸಂಚಾರ ಪೊಲೀಸರ ನೀಡುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

ಬೈಕ್ ರ್‍ಯಾಲಿ, ಅತಿವೇಗ ಚಾಲನೆ, ಸ್ಟಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ನಿಷೇಧ

ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ ಅಥವಾ ವದಂತಿಗಳಿಗೆ ಬ್ರೇಕ್‌

ಪಂದ್ಯ ಫಲಿತಾಂಶದ ಹೆಸರಿನಲ್ಲಿ ಇತರ ತಂಡದ ಅಭಿಮಾನಿಗಳನ್ನು ಪ್ರಚೋದಿಸುವುದು, ನಿಂದಿಸುವುವಂತೆ ವರ್ತಿಸಬಾರದು

ರಸ್ತೆಗಳಿಗೆ ಮುಖಮಾಡಿರುವ ಎಲ್‌ಇಡಿ ವಾಲ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ಅಳವಡಿಸಬಾರದು.

ಐಪಿಎಲ್ 2026ರ ಫೈನಲ್‌ಗೆರಲು ವಿಫಲವಾದ ಬೇಸರದಲ್ಲಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

ಈ ಮಾರ್ಗಸೂಚಿಗಳನ್ನು ಮೀರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಅಭಿಮಾನಿಗಳು ಜವಾಬ್ದಾರಿಯುತವಾಗಿ ವರ್ತಿಸಿ, ನಗರದ ಶಾಂತಿ ಕಾಪಾಡುವಂತೆ ಕೋರಲಾಗಿದೆ.

ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಇದೀಗ ಮತ್ತೆ ಫೈನಲ್‌ನಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಯಾರೇ ಗೆದ್ದರೂ ಎರಡನೇ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಈ ತಂಡ ಯಾವುದು ಎಂಬುದು ಸದ್ಯದ ಕುತೂಹಲ.