ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಲ್ಲಾ 10 ಐಪಿಎಲ್‌ ಫ್ರಾಂಚೈಸಿಗಳ ಅಭ್ಯಾಸಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಬಿಸಿಸಿಐ

IPL 2026: ಯಾವುದೇ ತಂಡವು ಮುಖ್ಯ ಪಿಚ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವಂತಿಲ್ಲ. ಫ್ರಾಂಚೈಸಿಗಳು ಅಭ್ಯಾಸ ಪಂದ್ಯಗಳನ್ನು ಆಡಲು ಬಯಸಿದರೆ, ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಬಳಿ ಪರ್ಯಾಯ ಮೈದಾನಗಳನ್ನು ಕೋರಬಹುದು. ಅಲ್ಲದೆ, ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಸುವ ಅಭ್ಯಾಸ ಪಂದ್ಯಗಳ ಅವಧಿ 3.5 ಗಂಟೆಗಳಿಗಿಂತ ಹೆಚ್ಚಿರಬಾರದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

rcb practice

ಮುಂಬಯಿ, ಮಾ.17: ಬಹುನಿರೀಕ್ಷಿತ ಐಪಿಎಲ್ 2026ರ ಮಹಾಸಮರಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 28ರಿಂದ ಕ್ರಿಕೆಟ್ ಹಬ್ಬಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಈಗಾಗಲೇ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಹತ್ತು ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಈ ಬಾರಿ ತಂಡಗಳ ಅಭ್ಯಾಸಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI ಐದು ಪುಟಗಳ ಕಟ್ಟುನಿಟ್ಟಿನ ಕಾರ್ಯಾಚರಣೆಯ ನಿರ್ದೇಶನವನ್ನು ಹೊರಡಿಸಿದೆ. ಅದರಂತೆ ತಂಡಗಳು ತಮ್ಮ ಅಭ್ಯಾಸ ನಡೆಸಬೇಕಿದೆ.

ಬೇರೆ ಬೇರೆ ಪಿಚ್‌ನಲ್ಲಿ ಅಭ್ಯಾಸ

ಅಭ್ಯಾಸದ ಅವಧಿಯಲ್ಲಿ ಒಂದು ತಂಡವು ಬಳಸಿದ ಪಿಚ್ ಅನ್ನು ಮತ್ತೊಂದು ತಂಡ ಬಳಸುವಂತಿಲ್ಲ. ಅಂದರೆ, ಒಂದು ತಂಡವು ಒಂದು ಪಿಚ್‌ನಲ್ಲಿ ತರಬೇತಿ ಪಡೆದರೆ, ನಂತರ ಬರುವ ಅಥವಾ ಅದೇ ಸಮಯದಲ್ಲಿ ಅಭ್ಯಾಸ ಮಾಡುವ ಇನ್ನೊಂದು ತಂಡಕ್ಕೆ ಪ್ರತ್ಯೇಕವಾದ ಹೊಸ ಪಿಚ್ ನೀಡಬೇಕು. ಈ ನಿಯಮವು 'ಥ್ರೋ ಡೌನ್' ಅಭ್ಯಾಸಕ್ಕೂ ಅನ್ವಯಿಸುತ್ತದೆ. ಒಂದು ವೇಳೆ ಒಂದು ತಂಡವು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಅಭ್ಯಾಸ ಮುಗಿಸಿದರೂ ಸಹ, ಆ ಪಿಚ್ ಅನ್ನು ಮುಂದಿನ ತಂಡಕ್ಕೆ ಬಳಸಲು ಅವಕಾಶವಿರುವುದಿಲ್ಲ.

ರಾತ್ರಿಯ ಅಭ್ಯಾಸಕ್ಕೆ ಕಾಲ ಮಿತಿ

ಯಾವುದೇ ತಂಡವು ಮುಖ್ಯ ಪಿಚ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವಂತಿಲ್ಲ. ಫ್ರಾಂಚೈಸಿಗಳು ಅಭ್ಯಾಸ ಪಂದ್ಯಗಳನ್ನು ಆಡಲು ಬಯಸಿದರೆ, ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಬಳಿ ಪರ್ಯಾಯ ಮೈದಾನಗಳನ್ನು ಕೋರಬಹುದು. ಅಲ್ಲದೆ, ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಸುವ ಅಭ್ಯಾಸ ಪಂದ್ಯಗಳ ಅವಧಿ 3.5 ಗಂಟೆಗಳಿಗಿಂತ ಹೆಚ್ಚಿರಬಾರದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಐಪಿಎಲ್‌ ಉದ್ಘಾಟನ ಪಂದ್ಯಕ್ಕೆ ಕಮ್ಮಿನ್ಸ್‌, ಹ್ಯಾಜಲ್‌ವುಡ್‌ ಅನುಮಾನ

ಪ್ರತಿ ತಂಡಕ್ಕೂ ಗರಿಷ್ಠ ಎರಡು ಅಭ್ಯಾಸ ಪಂದ್ಯಗಳನ್ನು ಆಡಲು ಮಾತ್ರ ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಫ್ರಾಂಚೈಸಿಗಳು ಬಿಸಿಸಿಐನಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಎದುರಾಳಿ ತಂಡಗಳ ಅಭ್ಯಾಸದ ವೇಳೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಯಾ 'ಹೋಮ್ ಫ್ರಾಂಚೈಸಿ'ಗಳಿಗೆ ನೀಡಲಾಗಿದೆ.

ನಿಯಮಗಳು ಹೀಗಿವೆ

ಪ್ರತ್ಯೇಕ ಅಭ್ಯಾಸ ನೆಟ್ಸ್: ಎರಡು ತಂಡಗಳು ಒಂದೇ ಅಭ್ಯಾಸ ನೆಟ್ಸ್ ಬಳಸುವಂತಿಲ್ಲ. ಪ್ರತಿ ತಂಡಕ್ಕೂ ಹೊಸ ನೆಟ್ಸ್‌ ಒದಗಿಸಬೇಕು.

ಪಿಚ್ ನಿಯಮ: ಒಂದು ತಂಡ ಬಳಸಿದ ಪಿಚ್‌ ಮತ್ತೊಂದು ತಂಡ ಬಳಸುವಂತಿಲ್ಲ.

ಅಭ್ಯಾಸ ಪಂದ್ಯಗಳ ಮಿತಿ: ತಂಡಗಳು ಟೂರ್ನಿಗೂ ಮುನ್ನ ಗರಿಷ್ಠ 2 ಅಭ್ಯಾಸ ಪಂದ್ಯಗಳನ್ನು ಮಾತ್ರ ಆಡಬಹುದು.

ಸಮಯದ ಮಿತಿ: ಅಭ್ಯಾಸ ಅವಧಿಯನ್ನು ಗರಿಷ್ಠ 3.5 ಗಂಟೆಗಳಿಗೆ ಸೀಮಿತಗೊಳಿಸಲಾಗಿದೆ.

ಇತರ ಸಾಮಾನ್ಯ ನಿಯಮಗಳು

ಇಂಪ್ಯಾಕ್ಟ್ ಪ್ಲೇಯರ್: 5 ಪರ್ಯಾಯ ಆಟಗಾರರ ಪಟ್ಟಿಯಿಂದ ಒಬ್ಬರನ್ನು ಬಳಸಬಹುದು.

ಡಿಆರ್‌ಎಸ್ (DRS): ಪ್ರತಿ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ತಲಾ ಎರಡು ರಿವ್ಯೂ ಅವಕಾಶ ಇರಲಿದೆ.

ಬೌನ್ಸರ್ ನಿಯಮ: ಬೌಲರ್‌ಗಳಿಗೆ ಓವರ್‌ಗೆ ಎರಡು ಬೌನ್ಸರ್‌ಗಳನ್ನು ಎಸೆಯಲು ಅವಕಾಶವಿದೆ.

ವಿದೇಶಿ ಆಟಗಾರರು: ಪ್ಲೇಯಿಂಗ್ ಇಲೆವೆನ್‌ನಲ್ಲಿ ಗರಿಷ್ಠ 4 ವಿದೇಶಿ ಆಟಗಾರರಿಗಷ್ಟೇ ಅನುಮತಿ.